ಬೆಂಗಳೂರಿನ ವಸಂತನಗರದ ಕುಖ್ಯಾತ ರೌಡಿ ಕವಳನ ಬಾಮೈದ ರಾಕೇಶ್ ಕೊಲೆಯ ಬೆನ್ನಲ್ಲೇ ಬೆಂಗಳೂರಲ್ಲಿ ಇನೊಬ್ಬ ರೌಡಿ ಶೀಟರ್ ಹತ್ಯೆಯಾಗಿದೆ.
ಕೋಣನ ಕುಂಟೆ ಕ್ರಾಸ್ ಬಳಿ ಮಧ್ಯರಾತ್ರಿ 2.30ರ ಸುಮಾರಿಗೆ ಜಯಂತ್ (28) ಎಂಬ ರೌಡಿಶೀಟರ್ ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಮೃತನ ವಿರುದ್ಧ ಕೊಲೆ ಯತ್ನ, ದರೋಡೆ ಸೇರಿದಂತೆ 8 ಪ್ರಕರಣಗಳ ದಾಖಲೆಗಳಿದ್ದು, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿತ್ತು.