ಗಾಂಜಾ ಅಮಲಿನಲ್ಲಿ ಆಟೋ ಚಾಲನೆ: ಸರಣಿ ಡಿಕ್ಕಿ, ಚಾಲಕನಿಗೆ ಸಾರ್ವಜನಿಕರ ಧರ್ಮದೇಟು

tnit editors
0 Min Read

ಗಾಂಜಾ ಅಮಲಿನಲ್ಲಿ ಆಟೋ ಚಾಲನೆ: ಸರಣಿ ಡಿಕ್ಕಿ, ಚಾಲಕನಿಗೆ ಸಾರ್ವಜನಿಕರ ಧರ್ಮದೇಟು

ಹಾಸನ: ಗಾಂಜಾ ಅಮಲಿನಲ್ಲಿ ಆಟೋ ಚಲಾಯಿಸಿ ಸ್ಕೂಟರ್ ಹಾಗೂ ಬೈಕ್ಗಳಿಗೆ ಸರಣಿ ಡಿಕ್ಕಿ ಹೊಡೆದ ಘಟನೆ ನಗರದ ಆರ್ಸಿ ರಸ್ತೆಯಲ್ಲಿ ನಡೆದಿದೆ.
ಅಡ್ಡಾದಿಡ್ಡಿಯಾಗಿ ಆಟೋ ಚಲಾಯಿಸುತ್ತಿದ್ದ ಚಾಲಕ ಸ್ಕೂಟರ್ ಮತ್ತು ಬೈಕ್ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಆರೋಪಿಯನ್ನು ಬೆನ್ನಟ್ಟಿಸಿ ಹಿಡಿದಿದ್ದಾರೆ.
ಆಕ್ರೋಶಗೊಂಡ ಸಾರ್ವಜನಿಕರು ಚಾಲಕನಿಗೆ ಹಿಗ್ಗಾಮುಗ್ಗ ತಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಘಟನೆ ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This Article