ಬೆಲೆ ಏರಿಕೆ ಮೂಲಕ ಜನರಿಗೆ ಬರೆ ಹಾಕಲಾಗುತ್ತಿದೆ: CT ರವಿ!

Date:

ಬೆಲೆ ಏರಿಕೆ ಮೂಲಕ ಜನರಿಗೆ ಬರೆ ಹಾಕಲಾಗುತ್ತಿದೆ: CT ರವಿ!

ನವದೆಹಲಿ:- ಬೆಲೆ ಏರಿಕೆ ಮೂಲಕ ಜನರಿಗೆ ಬರೆ ಹಾಕಲಾಗುತ್ತಿದೆ ಎಂದು MLC CT ರವಿ ಹೇಳಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ ಮಾಡುತ್ತೇವೆ ಅಂತ ಮುಂಚೆ ಹೇಳಿದ್ದರೆ ಕಾಂಗ್ರೆಸ್ 50 ಸೀಟ್ ಕೂಡ ಗೆಲ್ಲುತ್ತಿರಲಿಲ್ಲ. ಯುಗಾದಿ, ರಂಜಾಬ್ ಒಟ್ಟಿಗೆ ಬಂತಲ್ಲ ಅದಕ್ಕೆ ಸರ್ಕಾರ ಹೀಗೆ ಮಾಡಿದೆ. ಆಳ್ವಿಕೆ ಮಾಡಿದ 22 ತಿಂಗಳು, ಅದರಲ್ಲಿ 18 ತಿಂಗಳು ಬೆಲೆ ಏರಿಕೆ ಸುದ್ದಿ. ಹಾಲಿನ ಬೆಲೆ, ಆಲ್ಕೋಹಾಲ್‌ನಿಂದ ಹಿಡಿದು ಎಲ್ಲ ಬೆಲೆ ಏರಿಕೆ ಮಾಡಿದ್ದಾರೆ. ಗ್ಯಾರಂಟಿ ಕೊಡ್ತೀವಿ ಅಂತ ಹೇಳಿದ್ರು. ಹೇಳದೆ ಬೆಲೆ ಏರಿಕೆ ಮೂಲಕ ಬರೆ ಹಾಕಲಾಗುತ್ತಿದೆ. ಇದನ್ನು ಮುಂಚೆ ಹೇಳಿದ್ದರೆ 50 ಸೀಟು ಗೆಲ್ಲುತ್ತಿರಲಿಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ.

ಕಸ ಸಂಗ್ರಹಣೆಗೂ ಸೆಸ್ ವಿಧಿಸಲಾಗುತ್ತಿದೆ. ಬ್ರ‍್ಯಾಂಡ್ ಬೆಂಗಳೂರು ಅಂತಾರೆ. ಆದರೆ ಎಲ್ಲಿ ನೋಡಿದರೂ ಕಸದ ರಾಶಿ. ಜನರು ಶಾಪ ಹಾಕುತ್ತಿದ್ದಾರೆ. ಹಿಮಾಲಯದಲ್ಲಿ ಶೌಚಾಲಯಕ್ಕೂ ಟ್ಯಾಕ್ಸ್ ಹಾಕಿದ್ದರು. ಹಾಗೇ ರಾಜ್ಯದಲ್ಲಿ ಉಸಿರಾಡುವ ಗಾಳಿಗೆ ಟ್ಯಾಕ್ಸ್ ಹಾಕಬಹುದು ಎಂದು ಲೇವಡಿ ಮಾಡಿದ್ದಾರೆ.

ಕೋರ್ಟ್ ಕೇಸ್ ನಿಮಿತ್ಯ ದೆಹಲಿಗೆ ಬಂದಿದ್ದೆ. ಹಾಗೆಯೇ ಬಿಜೆಪಿ ಕಚೇರಿಗೆ ಭೇಟಿ ಮಾಡಿ ಬಂದೆ. ಯತ್ನಾಳ್ ವಿಚಾರಕ್ಕೆ ಸಂಬAಧಿಸಿ ಏನೂ ಮಾತನಾಡಲ್ಲ. ಎಲ್ಲವನ್ನು ಕಾಲಕ್ಕೆ ಬಿಡುತ್ತೇನೆ. ಈಗ ಏನ್ ಮಾಡಿದ್ರೂ ತಪ್ಪಾಗುತ್ತೆ. ಯತ್ನಾಳ್ ಹೊಸ ಪಕ್ಷ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಸಮಯ ಎಲ್ಲವನ್ನು ನಿರ್ಧಾರ ಮಾಡಲಿದೆ. ಬಿಜೆಪಿ ಕಾಂಗ್ರೆಸ್ ಯಾರಿಗೆ ಎಫೆಕ್ಟ್ ಆಗುತ್ತೆ ಗೊತ್ತಿಲ್ಲ. ಹಿಂದೆಯೂ ಬಹಳ ಜನರು ಪಕ್ಷ ಸ್ಥಾಪಿಸಿದವರು ಯಶಸ್ವಿಯಾಗಿಲ್ಲ, ಡ್ಯಾಮೇಜ್ ಮಾಡಬಹುದು ಎಂದು ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ?

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ? ಹಿಂದೂ ಧರ್ಮದಲ್ಲಿ...