ನಿರುದ್ಯೋಗಿಗಳನ್ನು ಹಿಂಗೂ‌ ವಂಚಿಸುತ್ತಾರೆ…! ಎಚ್ಚರ…

Date:

ದೇಶ ಎದುರಿಸುತ್ತಿರೋ ಸಮಸ್ಯೆಗಳಲ್ಲಿ ನಿರುದ್ಯೋಗ ಸಮಸ್ಯೆ ಅತ್ಯಂತ ಗಂಭೀರವಾದ ಸಮಸ್ಯೆ.‌ ನಿರುದ್ಯೋಗಿಗಳ‌ ಪಾಡು ಶತ್ರುಗಳಿಗೂ ಬೇಡ. ಪ್ರತಿಭೆ ಇದ್ರೂ ಕೆಲಸ‌‌ ಸಿಗಲ್ಲ.‌ ಉತ್ತಮ‌ ಶಿಕ್ಷಣ‌ ಪಡೆದ್ರೂ‌ ಉದ್ಯೋಗ ಸಿಗ್ತಿಲ್ಲ.‌


ನಿರುದ್ಯೋಗಿಗಳನ್ನೇ ಗುರಿಯಾಗಿಸಿಕೊಂಡು‌ ವಂಚನೆ‌ ಮಾಡುವ ಅಯೋಗ್ಯರು‌ ಸಾಕಷ್ಟು ಮಂದಿ ಇದ್ದಾರೆ.


ಬೆಂಗಳೂರಿನಲ್ಲಿ ನಿರುದ್ಯೋಗಿ ಯುವತಿಯೊಬ್ಬರು‌ ಉದ್ಯೋಗ ಸಿಗುತ್ತೆ ಎಂಬ ಆಸೆಯಿಂದ ವಂಚನೆಗೆ ಒಳಗಾಗಿದ್ದಾರೆ. 22 ವರ್ಷದ ಇಂಜಿನಿಯರಿಂಗ್ ಪದವೀಧರೆ ವಂಚನೆಗೆ ಒಳಗಾದ ಯುವತಿ. (ಹೆಸರು ಬೇಡ)


ಹತ್ತಾರ ಉದ್ಯೋಗ ಪೋರ್ಟಲ್ ಗಳಲ್ಲಿ ತಮ್ಮ ಬಯೋಡಾಟಾ ಅಪ್ಲೋಡ್ ಮಾಡಿದ್ದರು.‌‌ ಒಂದು ದಿನ ಪ್ರತಿಷ್ಠಿತ ಆಕ್ಸೆಂಚರ್ ನಲ್ಲಿ ಸಂದರ್ಶನವಿದೆ ಎಂದು ಯುವತಿಗೆ ಕಾಲ್ ಬಂದಿದೆ.


ಜನವರಿ‌ 10 ರಂದು‌ ದೂರವಾಣಿ ಮೂಲಕ‌ ತಾಂತ್ರಿಕ ಮತ್ತು ಎಚ್ ಆರ್ ಸುತ್ತಿನ ಸಂದರ್ಶನವಾಗಿದೆ. ಬಳಿಕ ಉದ್ಯೋಗ ನೇಮಕಾತಿ ಪತ್ರ ಇಮೇಲ್ ಮೂಲಕ ತಲುಪಿದೆ.


ಹೊಸಬರಾಗಿರೋದ್ರಿಂದ ತರಬೇತಿಗೆ‌‌ 50 ಸಾವಿರ ರೂ‌ ನೀಡಬೇಕು ಎಂದು ಇಮೇಲ್ ನಲ್ಲಿ ಸೂಚಿಸಿದ್ದರು…! ಅದನ್ನು ನಂಬಿ ಹಣ ವರ್ಗಾಯಿಸಿದ್ದಾರೆ.‌


ಜನವರಿ‌ 19 ರಂದು ಮೈಸೂರು ರಸ್ತೆಯಲ್ಲಿರುವ ಕಂಪನಿ ಗೆ ಜಾಯಿನ್ ಆಗಲೆಂದು ಹೋದಾಗ ತಾನು‌ ವಂಚನೆಗೆ ಒಳಗಾಗಿರೋದು ಗೊತ್ತಾಗಿದೆ.  ಸೈಬರ್ ಕ್ರೈಂ ಪೊಲೀಸರಿಗೆ ಯುವತಿ ದೂರು ನೀಡಿದ್ದು, ಆಕ್ಸಿಸ್ ಬ್ಯಾಂಕ್ ನ ಜೆಪಿ ನಗರ ಖಾತೆಗೆ ಹಣ ವರ್ಗಾವಣೆ‌‌ ಆಗಿದೆ‌ ಎಂದು ತಿಳಿದು‌‌ ಬಂದಿದೆ ಎಂದು‌ ದಿ ನ್ಯೂ‌ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

 

Share post:

Subscribe

spot_imgspot_img

Popular

More like this
Related

ಗುಡ್‌ ನ್ಯೂಸ್ ಹಂಚಿಕೊಂಡ ಡಾಲಿ ಧನಂಜಯ್‌..! ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ

ಗುಡ್‌ ನ್ಯೂಸ್ ಹಂಚಿಕೊಂಡ ಡಾಲಿ ಧನಂಜಯ್‌..! ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ ಮೈಸೂರಿನ...

ಕಾಂಗ್ರೆಸ್ ದುರಾಡಳಿತ ಮಿತಿ ಮೀರಿದೆ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ಕಾಂಗ್ರೆಸ್ ದುರಾಡಳಿತ ಮಿತಿ ಮೀರಿದೆ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಬೆಂಗಳೂರು: ಕಾಂಗ್ರೆಸ್ ಸರ್ಕಾರದ...

ಲಷ್ಕರ್-ಇ-ತೊಯ್ಬಾ ಸೇರಿಸಲು ಯತ್ನಿಸಿದ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ಲಷ್ಕರ್-ಇ-ತೊಯ್ಬಾ ಸೇರಿಸಲು ಯತ್ನಿಸಿದ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಉತ್ತರ...

ಹಳೆಯ ಬಟ್ಟೆಗಳಿಂದ ಮನೆ ಒರೆಸುವುದು ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ಹಳೆಯ ಬಟ್ಟೆಗಳಿಂದ ಮನೆ ಒರೆಸುವುದು ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು? ಮನೆ ಸ್ವಚ್ಛತೆಗೆ...