ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಅನೇಕ ಭಾಗಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಸೈಬರ್ ಕ್ರೈಂ ಚಟುವಟಿಗಳಾಗುತ್ತಿದ್ದು ಅದನ್ನು ತಡೆಗಟ್ಟುವ ಸಲುವಾಗಿ ಪ್ರತ್ಯೇಕ ಸೈಬರ್ ಠಾಣೆಯನ್ನು ತೆರೆಯಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹೇಳಿದ್ದಾರೆ. ಟ್ವಿಟರ್‍ನಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಂತೆಯೆ ಸಾಕಷ್ಟು ಸ್ಪಂದನೆ ವ್ಯಕ್ತವಾಗಿದೆ. ನೀವು ತಂತ್ರಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಂಡಿದ್ದರೆ ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಏನೇನು ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ #cybersafetytips ಹ್ಯಾಶ್‍ಟ್ಯಾಗ್ ಹಾಕಿ ಟ್ವೀಟ್ ಮಾಡಿ ಎಂದು ತಿಳಿಸಿದಾರೆ. ನಿಮ್ಮ ಮಾಹಿತಿ ಉಪಯುಕ್ತವಾಗಿದ್ದರೆ ನಾಗರೀಕರ ಅನುಕೂಲಕ್ಕಾಗಿ ನಗರ ಪೊಲೀಸ್ ಟ್ವೀಟರ್ ಅಕೌಂಟ್‍ಗೆ ರೀಟ್ವೀಟ್ ಮಾಡಲಾಗುತ್ತೆ. ಇನ್ನು ಪ್ರವೀಣ್ ಸೂದ್ ಘೋಷಣೆಗೆ ಗೌರವ್ ಗುಪ್ತಾ ಎಂಬುವರು ಪ್ರಶ್ನೆ ಕೇಳಿದ್ದು, ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಎಫ್‍ಐಆರ್ ಮತ್ತು ನಂತರ ನಡೆಯುವ ತನಿಖೆಗಳನ್ನು ಆನ್ಲೈನ್ ಮೂಲಕ ಟ್ರ್ಯಾಕ್ ಮಾಡುವಂತಹ ವ್ಯವಸ್ಥೆ ಯಾಕೆ ಆರಂಭಿಸಬಾರದು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಪ್ರವೀಣ್ ಸೂದ್ ಎಫ್‍ಐಆರ್ ಮತ್ತು ಆನಂತರದಲ್ಲಿ ನಡೆಯುವ ತನಿಖೆಗಳನ್ನು ಆನ್‍ಲೈನ್‍ನ ಮೂಲಕ ಹಿಂಬಾಲಿಸುವ ವ್ಯವಸ್ಥೆ ಈಗಾಗಲೆ ಜಾರಿಯಲ್ಲಿದೆ. ಅದು ಪೊಲೀಸ್ ಇಲಾಖೆಯ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
Will open a CYBER CRIME POLICE STATION soon to deal with IT related crime exclusively. #blrpolice4U
— Praveen Sood IPS (@CPBlr) January 12, 2017
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸ್ಯಾಂಡಲ್‍ವುಡ್ ಮಿಸ್ಟರ್ ಪರ್ಫೆಕ್ಟ್ ಅಂತೆ ಈ ನಟ..!
ಖಂಡಿಸುವ ಪ್ರಥಮ್ ನುಡಿದ ಭವಿಷ್ಯ ನಿಜವಾಗುತ್ತಾ??
ಭಾರಿ ಗಿಫ್ಟ್ ನೀಡೋಕೆ ಮುಂದಾಗಿದೆ ಜಿಯೋ..!
ರಯೀಸ್ ಚಿತ್ರ ಬಿಡುಗಡೆ ಮಾಡ್ಬೇಡಿ: ಶಿವಸೇನೆ ಧಮ್ಕಿ..!
ಅಧಿಕಾರಿಗಳ ಕರಾಳ ಮುಖವನ್ನು ವಿಡಿಯೋ ಮೂಲಕ ಬಯಲಿಗೆಳೆದ ಯೋಧ..!