ಹೆಲಿಕಾಪ್ಟರ್ ಹತ್ತುವಾಗ ಇಲ್ಲದ ನೀತಿ ಸಂಹಿತೆ ಇಳಿಯುವಷ್ಟರಲ್ಲಿ ಜಾರಿ ಆಗಿತ್ತು…! ಇದರಿಂದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಸಂಕಷ್ಟಕ್ಕೆ ಸಿಲುಕಿದ್ದರು…!
ಶಿವಮೊಗ್ಗದಲ್ಲಿ ನಿಗಧಿಯಾಗಿದ್ದ ಮೆಸ್ಕಾ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು ಸಚಿವರು ಜಕ್ಕೂರು ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದ್ದರು.
ಶಿವಮೊಗ್ಗ ಹೆಲಿಪ್ಯಾಡ್ ಗೆ ಬಂದಿದ್ದ ಸರ್ಕಾರಿ ವಾಹನವನ್ನು ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಿಂದೆ ಪಡೆದಿತ್ತು. ಆದ್ದರಿಂದ ಜಿಲ್ಲಾ ಕಾಂಗ್ರೆಸ್ ಮುಖಂಡರು ಖಾಸಗಿ ಕಾರು ವ್ಯವಸ್ಥೆ ಮಾಡಿದ್ದರು.
ನಾನು ವಿಮಾನ ಹತ್ತುವಾಗ ನೀತಿಸಂಹಿತೆ ಜಾರಿ ಆಗಿರಲಿಲ್ಲ.ಮಾರ್ಗಮಧ್ಯದಲ್ಲಿರುವಾಗ ವಿಷಯ ತಿಳಿಯಿತು. ಆದ್ದರಿಂದ ಹೆಲಿಪ್ಯಾಡ್ ನಿಂದ ಖಾಸಗಿ ವಾಹನದಲ್ಲಿಯೇ ತೆರಳಿದೆ ಎಂದು ಡಿ.ಕೆ ಶಿ ಹೇಳಿದರು.