ಬಿಟ್ಬಿಡಿ ಅಂತ ಅಂಗಲಾಚುತ್ತಿರೋ ರೇಣುಕಾಸ್ವಾಮಿ ಫೋಟೋ ವೈರಲ್!

Date:

 

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಪೊಲೀಸ್ ಅಧಿಕಾರಿಗಳು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ರೇಣುಕಾಸ್ವಾಮಿಗೆ ಹಿಂಸೆ ನೀಡಿರುವ ಫೋಟೋಗಳನ್ನ ಪೊಲೀಸರು ರಿಟ್ರೀವ್ ಮಾಡಿಕೊಂಡಿದ್ದು, ಅವುಗಳಲ್ಲಿ ಕೆಲವು ವೈರಲ್ ಆಗುತ್ತಿವೆ. ಕೊಲೆಗೂ ಮುನ್ನ ವಿನಯ್ ಮೊಬೈಲ್ನಲ್ಲಿ ಸೆರೆಯಾದ ರೇಣುಕಾಸ್ವಾಮಿ ಫೋಟೋಸ್ ಪತ್ತೆಯಾಗಿತ್ತು. ಆರೋಪಿ ವಿನಯ್ ಮೊಬೈಲ್ನಲ್ಲಿ ಫೋಟೋ ಕ್ಲಿಕ್ಕಿಸಿ ಡಿಲೀಟ್ ಮಾಡಿದ್ದನು. ಡಿಲೀಟ್ ಆದ ಫೋಟೋಗಳನ್ನ FSL ಟೀಂ ರಿಟ್ರೀವ್ ಮಾಡಿದೆ.
ಗಾಯಗೊಂಡ ರೇಣುಕಾಸ್ವಾಮಿ ಅಂಗಲಾಚ್ತಿರೋ ಫೋಟೋ ರಿಟ್ರೀವ್ ಬಳಿಕ ಸಿಕ್ಕಿದೆ. ತನ್ನ ಬಿಟ್ಟು ಬಿಡುವಂತೆ ಬೇಡಿಕೊಂಡತೆ ಫೋಟೋ ಕಾಣಿಸಿದೆ. ತಪ್ಪಾಯ್ತು ಎಂದು ಅಳುತ್ತಿರುವ ಮತ್ತು ಮೈಮೇಲೆ ಹಾಕಿದ್ದ ಆತನ ಬನಿಯನ್ ಸಹ ಕಿತ್ತು ಹಾಕಿರುವುದನ್ನು ಫೋಟೋಗಳಲ್ಲಿ ಕಂಡಿವೆ.
ಕಿಡ್ನಾಪ್ ಮಾಡಿದ ಬಳಿಕ ರೇಣುಕಾಸ್ವಾಮಿಯನ್ನ ಶೆಡ್ಗೆ ಕರೆತಂದಿದ್ದರು. ಆರೋಪಿಗಳಿಂದ ಆತನಿಗೆ ಕರೆಂಟ್ ಶಾಕ್ ಕೊಟ್ಟು ಹಲ್ಲೆ ಮಾಡಿದ್ದರು. ಪವನ್, ಧನರಾಜ್ ಮತ್ತು 5 ಮಂದಿಯಿಂದ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ. ಬಳಿಕ ಎಲೆಕ್ಟ್ರಿಕ್ ಮೆಗ್ಗರ್ನಿಂದ ಆತನ ಕೈಗಳಿಗೆ ಬರೆ ಹಾಕಿದ್ದಾರೆ. ಶೆಡ್ನಲ್ಲಿ ನಿಲ್ಲಿಸಿದ್ದ ವಾಹನಗಳ ಬಳಿ ಚೆನ್ನಾಗಿ ಹೊಡೆದು ಅಲ್ಲೇ ಬಿಸಾಡಿದ್ದಾರೆ ಎನ್ನಲಾಗುತ್ತಿದೆ.
ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ಚಿರಾಡಿದ್ದಾನಂತೆ. ಅದೇ ವೇಳೆ ಅಟ್ಟಹಾಸದಲ್ಲಿ ಆರೋಪಿಗಳು ಕೂಗಾಡಿದ್ದಾರಂತೆ. ಈ ವೇಳೆ ಗೇಟ್ ಹೊರಗಿದ್ದ ಸೆಕ್ಯೂರಿಟಿ ಒಳಗೆ ಬಂದಿದ್ದಾರೆ. ಹಲ್ಲೆ ಮಾಡಿದನ್ನ ಸೆಕ್ಯೂರಿಟಿ ಗಾರ್ಡ್ ಕಣ್ಣಾರೆ ನೋಡಿದ್ದಾರೆ. ಬಳಿಕ ತಕ್ಷಣ ವಿನಯ್ಗೆ ಫೋನ್ ಮಾಡಿದ್ದಾನೆ ಎನ್ನಲಾಗುತ್ತಿದೆ.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...