ತಾಯಿಯ 100ನೇ ಹುಟ್ಟುಹಬ್ಬದ ಆಚರಣೆ ವೇಳೆ ಮಗಳು ಮೃತಪಟ್ಟ ಘಟನೆ ಮಂಗಳೂರಲ್ಲಿ ನಡೆದಿದೆ.
ಗ್ಲೋರಿಯಾ ಲೋಬೋ (75) ಮೃತ ದುರ್ದೈವಿ.

ಮಂಗಳೂರಿನ ಪಾಂಡೇಶ್ವರ ನಿವಾಸಿ ಗ್ಲಾಡಿ ಡಿಸೋಜಾ ಕಳೆದ ಮಾರ್ಚ್ 30ರಂದು ಶತಮಾನೋತ್ಸವ ಕಂಡಿದ್ದರು. ಆದರೆ, ಕೆನಡಾದಲ್ಲಿದ್ದ ಅವರ ಮಗಳು ಗ್ಲೋರಿಯಾ ಲೋಬೋಗೆ ಅಂದು ಹುಟ್ಟುಹಬ್ಬ ಆಚರಿಸಲು ಆಗಿರ್ಲಿಲ್ಲ.

ಊರಿಗೆ ವಾಪಾಸ್ಸಾಗಿರೋ ಲೋಬೋ ಪಾಂಡೇಶ್ವರದಲ್ಲಿ ತಮ್ಮ ತಾಯಿಯ ಹುಟ್ಟುಹಬ್ಬವನ್ನು ಹಮ್ಮಿಕೊಂಡಿದ್ದರು. ತಾಯಿ ಕೇಕ್ ಮಾಡುವಾಗ ಲೋಬೋ ತಾನೇ ಬರೆದ ಕವನ ಹೇಳಿ ಸಂಭ್ರಮಿಸಿದ್ದರು. ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿಕಿತ್ಸೆ ಫಲಕಾರಿ ಆಗಲಿಲ್ಲ.





