ದಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದೆ ಎನ್ನಲಾದ ಸುಮಾರು 15 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಯುಎಇ ಸರ್ಕಾರ ವಶಪಡಿಸಿಕೊಂಡಿಡದೆ. ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರೊ ಪ್ರಕಾರ ದಾವೂದ್ ಇಬ್ರಾಹಿಂ ಅವರ ಆಸ್ತಿಯ ಕುರಿತಾಗಿ ಸಂಪೂರ್ಣ ಮಾಹಿತಿ ಕಲೆ ಹಾಕಿದ ಯುಎಇ ಸರ್ಕಾರ ಆತನಿಗೆ ಸೇರಿದ್ದ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ. ದಾವೂದ್‍ಗೆ ಸೇರಿದೆ ಎನ್ನಲಾದ ಹೋಟೆಲ್‍ಗಳು, ಷೇರುಗಳು, ಹಾಗೂ ವಿವಿಧ ಸಂಸ್ಥೆಗಳನ್ನು ವಶಪಡಿಸಿಕೊಂಡಿರುವ ಯುಎಇ ಆತನ ಬೇನಾಮಿ ಆಸ್ತಿಯ ಮೇಲೂ ಕಣ್ಣು ಹಾಕಿದೆ. ಅಲ್ಲದೆ ದಾವೂದ್ ಭಂಟರು ಹವಾಲಾ ಮಾಫಿಯಾ ನಡೆಸುತ್ತಿದ್ದು, ಯುಎಇ ಪೊಲೀಸರು ಹವಾಲಾ ಜಾಲದ ಮೇಲೂ ಕಣ್ಣಿಟ್ಟಿದ್ದಾರೆ. ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್ ದಾವೂದ್‍ನನ್ನು ಎಡೆಮುರಿ ಕಟ್ಟಿ ಆದಷ್ಟು ಬೇಗ ಭಾರತಕ್ಕೆ ಕರೆತರಲಾಗುವುದು ಎಂದು ಹೇಳಿದ್ದರು. ಇದೀಗ ಭಾರತಕ್ಕೆ ಪರೋಕ್ಷವಾಗಿ ಸಹಕರಿಸುತ್ತಿರುವ ಯುಎಇ ಸರ್ಕಾರ ತಮ್ಮ ದೇಶದಲ್ಲಿ ದಾವೂದ್‍ಗೆ ಸೇರಿದ ಸುಮಾರು 15 ಸಾವಿರ ಕೋಟಿ ಬೆಲೆ ಬಾಳವ ಆಸ್ತಿಯನ್ನು ಜಪ್ತಿ ಮಾಡಿಕೊಂಡಿದೆ. ಅಷ್ಟೆ ಅಲ್ಲದೆ ಮೊರಾಕ್ಕೊ, ಸ್ಪೇನ್, ಸಿಂಗಾಪುರ, ಥಾಯ್ಲೆಂಡ್, ಟರ್ಕಿ, ಬ್ರಿಟನ್ ಸೇರಿದಂತೆ ಇನ್ನಿತರೆ ರಾಷ್ಟ್ರಗಳಲ್ಲಿನ ದಾವೂದ್ ಆಸ್ತಿಯ ವಿವರಗಳನ್ನು ಕಲೆ ಹಾಕಿದ್ದು ಈ ಕುರಿತು ಆಯಾ ದೇಶಗಳಿಗೆ ಮಾಹಿತಿ ರವಾನೆ ಮಾಡಿದೆ.
ಚಿತ್ರ ತಂಡಕ್ಕೆ ಜೀವ ಬೆದರಿಕೆ ಹಾಕಿದ ದಾವೂದ್ ಬಂಟರು..!
ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೆ ಠಿಕಾಣಿ ಹೂಡಿದ್ದಾನೆ ಎಂದು ಅಮೇರಿಕಾ ಮಾಹಿತಿ ನೀಡಿತ್ತು. ಇತ್ತೀಚೆಗಷ್ಟೆ ನಿರ್ದೇಶಕ ವಿಶಾಲ್ ಮಿಶ್ರಾ ಹಾಗೂ ನಿರ್ಮಾಪಕ ವಿನೋದ್ ರಮಣಿ ಡಿ- ಕಂಪನಿ ವಿರುದ್ದ ದೂರು ನೀಡಿದ್ರು. ತಮ್ಮ ಹೊಸ ಸಿನಿಮಾ ಕಾಫಿ ವಿತ್ ಡಿ ಯಲ್ಲಿ ದಾವೂದ್ ಬಗ್ಗೆ ತಮಾಷೆ ದೃಶ್ಯವನ್ನು ತೆಗೆದು ಹಾಕಬೇಕು ಎಂದು ಜೀವ ಬೆದರಿಕೆ ಕರೆಗಳು ಬಂದಿದೆ ಎಂದು ಅವರು ಹೇಳಿದ್ದಾರೆ. ದಾವೂದ್ ಇಬ್ರಾಹಿಂ ಬಂಟ ಛೋಟಾ ಶಕೀಲ್ ಆ ದೃಶ್ಯವನ್ನು ತೆಗೆದುಹಾಕುವಂತೆ ಬೆದರಿಕೆ ಹಾಕಿದ್ರು ಎಂದು ಆರೋಪಿಸಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?
ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!
ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!
ಕಿರಿಕ್ ಪಾರ್ಟಿ ಟ್ರೇಲರ್‍ನ ಕಿರಿಕ್ ಕನ್ನಡಿಗರು ಮಾಡುದ್ರೆ ಹೇಗಿರುತ್ತೆ ಗೊತ್ತಾ..?
ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!
ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!