ಪಾಕಿಸ್ಥಾನದ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರೀದಿ ಹಾಗೂ ಮಾಜೀ ಕ್ರಿಕೆಟಿಗ ಜಾವೆದ್ ಮಿಯಾಂದಾದ್ ನಡುವಿನ ಕಿತ್ತಾಟಕ್ಕೆ ಓರ್ವ ಭೂಗತ ಪಾತಕಿ ಎಂಟ್ರಿ ಕೊಟ್ಟಿದ್ದಾನೆ.. ಅಷ್ಟೇ ಅಲ್ಲ ಪಾಕ್‍ನ ಮಾಜೀ ನಾಯಕ ಅಫ್ರಿದಿಗೆ ಕರೆ ಮಾಡಿ ಜೀವ ಬೆರಿಕೆಯನ್ನೂ ಹಾಕಿದ್ದಾನೆ. ಆ ಭೂಗತ ಪಾತಕಿ ಬೇರ್ಯಾರೂ ಅಲ್ಲ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ..! ಹೌದು ಇವರಿಬ್ಬರ ನಡುವಿನ ಕಿತ್ತಾಟಕ್ಕೆ ಈಗ ದಾವೂದ್ ಮಧ್ಯ ಪ್ರವೇಶ ಮಾಡಿದ್ದಾನೆ. ಮಾಜೀ ಕ್ರಿಕೆಟರ್ ಜಾವೆದ್ ಮಿಯಾಂದದ್ ಸಂಬಂಧಿಯಾಗಿರುವ ದಾವೂದ್.. ಅಫ್ರೀದಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ನೋಡಿ.. ಕಳೆದ ಅಕ್ಟೋಬರ್ 12 ಸಂಜೆ ಅಫ್ರಿದಿಗೆ ಕರೆ ಮಾಡಿದ್ದ ದಾವೂದ್ ಮನಬಂದಂತೆ ಮಾತನಾಡುವುದು ಬಿಡು ಇಲ್ಲದಿದ್ದರೆ ಮುಂದಿನ ಪರಿಣಾಮ ಅನುಭವಿಸಬೇಕಾಗುತ್ತೆ ಅಂತ ಬೆದರಿಕೆ ಹಾಕಿದ್ದಾನೆ.
ಈ ಹಿಂದೆ ಖಾಸಗಿ ಟಿವಿ ವಾಹಿನಿಯಲ್ಲಿ ಶಾಹೀದ್ ಅಫ್ರಿದಿ ವಿರುದ್ದ ಛಾಟಿ ಬೀಸಿದ್ದ ಮಿಯಾಂದಾದ್ ಆತನೊಬ್ಬ ಭ್ರಷ್ಟ ಕ್ರಿಕೇಟಿಗ ಎಂದಿದ್ದಾರೆ. ಅಷ್ಟೆ ಅಲ್ಲ ಈ ಹಿಂದೆ ಹಣಕ್ಕಾಗಿ ಆತ ಮ್ಯಾಚ್ ಫಿಕ್ಸಿಂಗ್‍ನಲ್ಲೂ ಪಾಲ್ಗೊಂಡಿದ್ದ. ಈಗ ಹಣಕ್ಕಾಗಿ ವಿದಾಯ ಪಂದ್ಯವನ್ನು ಬಯಸುತ್ತಿದ್ದಾರೆ ಎಂಬುದಾಗಿ ಅಫ್ರಿದಿ ವಿರುದ್ದ ಕಿಡಿಕಾರಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಫ್ರಿದಿ, ಓರ್ವ ಹಿರಿಯ ಕ್ರಿಕೇಟಿಗನಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ನೀವು ಯಾವಾಗಲೂ ಹಣದ ಕುರಿತಾಗಿಯೇ ಚಿಂತೆ ಮಾಡುತ್ತಿರುತ್ತೀರೇನೋ..? ಈಗಲೂ ಕೂಡ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದೀರ.. ಅದ್ರಲ್ಲೆ ಗೊತ್ತಾಗತ್ತೆ ಹಿರಿಯ ಆಟಗಾರ ಇಮ್ರಾನ್ ಖಾನ್ ಹಾಗೂ ನಿಮ್ಮ ನಡುವಿನ ವ್ಯತ್ಯಾಸ ಎಂದು ಖಾರವಾಗಿಯೇ ಉತ್ತರ ನೀಡಿದ್ದರು. ಇದೇ ರೀತಿಯಾಗಿ ನೀವು ಆರೋಪವನ್ನು ಮುಂದುವರೆಸಿದ್ದೇ ಆದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು ಶಾಹಿದ್ ಅಫ್ರೀದಿ.
ಈ ನಡುವೆ ಅಫ್ರೀದಿ ಅವರಿಗೆ ಭೂಗತ ಪಾತಕಿ ದಾವೂದ್ ಬೆದರಿಕೆ ಹಾಕಿರುವುದು ಪಾಕ್ ಕ್ರಿಕೆಟ್ ರಂಗದಲ್ಲಿ ಸಾಕಷ್ಟು ಅನುಮಾನಗಳ ಜೊತೆಗೆ ಚರ್ಚೆಗಳು ನಡೆಯುತ್ತಿವೆ. ಮಿಯಾಂದದ್ ಅವರ ಪುತ್ರ ದಾವೂದ್ ಪುತ್ರಿಗೆ ವಿವಾಹವಾಗಿದ್ದು ಇಬ್ಬರೂ ಆತ್ಮೀಯ ಸಂಬಂಧಿಯಾಗಿದ್ದಾರೆ.. ಇದೇ ಕಾರಣಕ್ಕಾಗಿ ಶಾಹಿದ್ ಅವರಿಗೆ ದಾವೂದ್ ಕಡೆಯಿಂದ ಜೀವ ಬೆದರಿಕೆ ಬಂದಿದೆ ಎಂದು ಹೇಳಲಾಗ್ತಾ ಇದೆ..
Like us on Facebook The New India Times
POPULAR STORIES :
ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?
ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!
ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!