ಬಡ ವೃದ್ಧೆಯೊಬ್ಬರು ಹಸಿವಿನಿಂದ ಬಳಲುತ್ತಿರುವುದನ್ನು ತಿಳಿದ ಜಿಲ್ಲಾಧಿಕಾರಿಯೊಬ್ಬರು ತಮ್ಮ ಮನೆಯಿಂದ ಊಟ ಕಟ್ಟಿಸಿಕೊಂಡು ಆಕೆತಯ ಮನೆಗೆ ಹೋಗಿ ಊಟ ನೀಡಿ,ತಾನೂ ಅಲ್ಲಿಯೇ ಊಟ ಮಾಡಿದ್ದಾರೆ.ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತಮಿಳುನಾಡಿನ ಕರೂರು ಜಿಲ್ಲೆಯ ಚಿನ್ನಮಾಲನಿಕಿಕೆನ್ ಪಟ್ಟಿ ಎಂಬ 82 ವರ್ಷದ ಅಜ್ಜಿಯ ಮನೆಗೆ ಜಿಲ್ಲಾಧಿಕಾರಿ ಟಿ. ಅಂಬಾಜಗೇನ್ ದಿಢೀರ್ ಭೇಟಿ ನೀಡಿದ್ದಾರೆ.
ತನ್ನ ಮನೆಗೆ ಡಿಸಿ ಬರ್ತಿದ್ದಂತೆ ಅಜ್ಜಿಗೆ ಆಶ್ಚರ್ಯವಾಗಿದೆ. ಮನೆಯಿಂದ ತಂದಿದ್ದ ಬಾಳೆ ಎಲೆ ಹಾಕಿಕೊಂಡು ಮನೆಯಿಂದ ತಂದಿದ್ದ ಊಟವನ್ನು ಅಜ್ಜಿಗೂ ನೀಡಿ ತಾವು ಅಲ್ಲಿಯೇ ಊಟ ಮಾಡಿದ್ದಾರೆ ಡಿಸಿ.
ಅಜ್ಜಿಯ ಕಷ್ಟವನ್ನು ತಿಳಿದು ಜಿಲ್ಲಾಧಿಕಾರಿ ಅಂಬಾಜಗೇನ್ ಆಕೆಯನ್ನು ಭೇಟಿಯಾಗಿದ್ದಾರೆ. ಕೆಲಸ ಮಾಡಲು ಸಾಧ್ಯವಾಗದ ವೃದ್ಧರಿಗೆ ಸರ್ಕಾರ ವೃದ್ಧಾಪ್ಯ ವೇತನ ನೀಡುತ್ತಿದ್ದು, ಇದು ಎಲ್ಲ ಫಲಾನುಭವಿಗಳಿಗೂ ಸಿಗಬೇಕು. ಎಲ್ಲರಿಗೂ ಇದು ಸಿಗಲೇ ಬೇಕು ಎಂದು ಡಿಸಿ ಈ ವೇಳೆ ಹೇಳಿದ್ದಾರೆ. ಬಡವರ ಕಷ್ಟಗಳಿಗೆ ಸ್ಪಂದಿಸುವ ಇವರ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.