ತನ್ನನ್ನು ಚುಡಾಯಿಸಿದ ಕಾಮುಕರಿಗೆ ದೆಹಲಿಯಲ್ಲಿ ಮಹಿಳೆಯೊಬ್ಬರು ತಕ್ಕಪಾಠ ಕಲಿಸಿದ್ದಾರೆ.
ಫೆಬ್ರವರಿ 25ರಂದು ಮಹಿಳೆ ಆಟೋ ರಿಕ್ಷಾದಲ್ಲಿ ಫಫರ್ ಮಾರ್ಕೆಟ್ ಪ್ರದೇಶದಲ್ಲಿ ಹೋಗುತ್ತಿದ್ದಾಗ ಇಬ್ಬರು ಕಾಮುಕರು ಅಶ್ಲೀಲವಾಗಿ ಮಾತಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಒಬ್ಬ ಆರೋಪಿಯನ್ನು ಸಮೀಪದ ಪೊಲೀಸ್ ಠಾಣೆಗೆ ಎಳೆದು ತಂದಿದ್ದಾರೆ. ಪ್ರಕರಣ ದಾಖಲಾಗಿದೆ. ಅಭಿಷೇಕ್ ಮತ್ತು ಮನೀಶ್ ಆರೋಪಿಗಳು.