ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಹೆಚ್ಚುತ್ತಿರೋ ವಾಯುಮಾಲಿನ್ಯವನ್ನು ನಿಯಂತ್ರಿಸೋದಕ್ಕೆ, ಡೀಸೆಲ್ ಕಾರುಗಳನ್ನ ನಿಷೇಧಿಸುವಂತೆ ಸಲ್ಲಿಸಿರೋ ಅರ್ಜಿಯ ವಿಚಾರಣೆ ಇಂದು ರಾಷ್ಟ್ರೀಯ ಹಸಿರು ನ್ಯಾಯಪೀಠ ಕೈಗೆತ್ತಿಕೊಳ್ಳಲಿದೆ. ಮಹಾನಗರಗಳಲ್ಲಿ ಹೆಚ್ಚುತ್ತಿರೋ ವಾಯುಮಾಲಿನ್ಯವನ್ನ ತಡೆಗಟ್ಟೋದಕ್ಕೆ ಹಲವು ಪರಿಸರ ಸಂಘಟನೆಗಳು ಸಲ್ಲಿಸಿರೋ ಅರ್ಜಿಯನ್ನು ನ್ಯಾಯಪೀಠ ಇಂದು ವಿಚಾರಣೆ ಮಾಡಲಿದೆ. ಬೆಂಗಳೂರು ಸೇರಿದಂತೆ ದೇಶದ 11 ರಾಜ್ಯಗಳ ಮಹಾನಗರಗಳಲ್ಲಿ ಹೆಚ್ಚುತ್ತಿರೋ ವಾಯುಮಾಲಿನ್ಯವನ್ನ ತಡೆಗಟ್ಟೋದಕ್ಕೆ ಯಾವ ರೀತಿಯ ಸೂಚನೆ ನೀಡಲಾಗುತ್ತೆ ಅಂತ ತೀರ್ಪು ಹೊರಬಂದ ಮೇಲೆ ತಿಳಿದುಬರುತ್ತೆ. ಇತ್ತೀಚೆಗೆ ದೆಹಲಿಯಲ್ಲಿ ವಾಯುಮಾಲಿನ್ಯವನ್ನ ತಡೆಯೋದಕ್ಕೆ, 2000 ಸಿಸಿ ಮೇಲ್ಪಟ್ಟ ಎಸ್‍ಯುವಿ ಕಾರುಗಳು ಮತ್ತು ಭಾರಿ ವಾಹನಗಳ ನೊಂದಣಿ ನಿಲ್ಲಿಸಲಾಗಿತ್ತು. ಇನ್ನು 10 ವರ್ಷಕ್ಕಿಂತ ಹಳೇ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು. ಈಗ ಬೆಂಗಳೂರಲ್ಲೂ ಅದೇ ರೀತಿಯ ನಿಷೇಧ ಜಾರಿಗೆ ಬರಲಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ. ಮತ್ತೊಂದು ಕಡೆ ಕೇಂದ್ರ ಬೃಹತ್ ಕೈಗಾರಿಕೆ ಸಚಿವಾಲಯ ಈಗಾಗಲೇ ಎನ್‍ಜಿಟಿಗೆ ಅರ್ಜಿ ಸಲ್ಲಿಸಿದ್ದು, ಡೀಸೆಲ್ ವಾಹನಗಳ ಮೇಲಿನ ನಿರ್ಬಂಧವನ್ನು ಇತರ ಮಹಾನಗರಗಳಿಗೆ ವಿಸ್ತರಿಸಿದಂತೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಪರಿಸರದ ದೃಷ್ಟಿಯಿಂದ ಡೀಸೆಲ್ ಕಾರುಗಳ ಮೇಲೆ ನಿಷೇಧ ಹೇರುವುದಾಗಿ ತಿಳಿದು ಬಂದಿದೆ.
- ರಘು ಆರ್ ಇಂಜನಹಳ್ಳಿ
POPULAR STORIES :
ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?
ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!
ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!
ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?
ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?
ಈ ದೇಶದ ಪ್ರತಿ ಪ್ರಜೆಗೂ ಸಿಗತ್ತೆ ಪುಕ್ಕಟೆ ಸಂಬಳ…!
ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?