ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಾಂಡಿಮಾಲ್ ಅವರನ್ನು ಐಸಿಸಿ 2 ಟೆಸ್ಟ್ ಹಾಗೂ 4 ಏಕದಿನ ಪಂದ್ಯಗಳಿಂದ ನಿಷೇಧಿಸಿದೆ. ಜೊತೆಗೆ ಕೋಚ್ ಚಂಡಿಕಾ ಹತುರುಸಿಂಘ ಮತ್ತು ಮ್ಯಾನೇಜರ್ ಅಸಂಕಾ ಗುರುಸಿನ್ಹಾರನ್ನೂ ಸಹ ಇಷ್ಟೇ ಪಂದ್ಯಗಳಿಂದ ನಿಷೇಧಿಸಲಾಗಿದೆ.
ಸೇಂಟ್ ಲೂಸಿಯಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಚಾಂಡಿಮಾಲ್ ಬಾಲ್ ಟೆಂಪರಿಂಗ್ ಮಾಡಿದ್ದರು ಎಂದು ಅಂಪೈರ್ ಗಳು ಆರೋಪಿಸಿದ್ದರು. ಇದರಿಂದ ಸಿಟ್ಟಾದ ಶ್ರೀಲಂಕಾ 3ನೇ ದಿನದಾಟ ಆರಂಭಿಸಲು ಕ್ರೀಡಾಙಗಣಕ್ಕೆ ಇಳಿಯಲೇ ಇಲ್ಲ. ಪಂದ್ಯ ಎರಡುಗಂಟೆ ತಡವಾಗಿ ಆರಂಭವಾಯ್ತು. ಇದನ್ನು ವಿಚಾರಣೆ ನಡೆಸಿದ ಐಸಿಸಿ ಈ ಶಿಕ್ಷೆ ವಿಧಿಸಿದೆ.