ಬಿಎಂಡಬ್ಲ್ಯೂ ವಾಪಾಸ್ ನೀಡಲು ನಿರ್ಧರಿಸಿದ ದೀಪಾ ಕರ್ಮಕರ್.

Date:

ರಿಯೋ ಒಲಂಪಿಕ್‍ನಲ್ಲಿ ಅಮೋಘ ಆಟ ಪ್ರದರ್ಶನ ನೀಡಿದ ಭಾರತೀಯ ನಾರಿಯರಲ್ಲಿ ಕುಸ್ತೀ ಪಟು ಸಾಕ್ಷಿ ಮಲ್ಲಿಕ್, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಹಾಗೂ ಜಿಮ್ನ್ಯಾಸ್ಟ್ ದೀಪಾ ಕರ್ಮಾಕರ್ ಒಬ್ಬರು. ಭಾರತಕ್ಕೆ ಪದಕ ಗೆದ್ದು ಕೊಡದಿದ್ದರು ಮೊಟ್ಟ ಮೊದಲ ಬಾರಿಗೆ ಜಿಮ್ನ್ಯಾಸ್ಟಿಕ್ ವಿಭಾಗದಲ್ಲಿ ನಾಲ್ಕನೇ ಸ್ಥಾನ ಗಳಿಸಿದ ದೀಪಾ ಸೇರಿದಂತೆ ಈ ಮೂರು ಕ್ರೀಡಾಪಟುಗಳಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಉಡುಗೊರೆಯಾಗಿ ಐಶಾರಾಮಿ ಬಿಎಂಡಬ್ಲ್ಯೂ ಕಾರನ್ನು ಹಸ್ತಾಂತರಿಸಿದ್ದರು. ಆದರೆ ತೀವ್ರ ನಿರ್ವಹಣಾ ಸಮಸ್ಯೆ ತಲೆದೊರಿರುವ ಹಿನ್ನಲೆಯಲ್ಲಿ ದೀಪಾ ಅವರು ತಮಗೆ ಬಂದ ಬಿಎಂಡಬ್ಲ್ಯೂ ಕಾರನ್ನು ಮಾಲಿಕ ಹಾಗೂ ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಷಿಯೇಷನ್ ಅಧ್ಯಕ್ಷ ವಿ. ಚಾಮುಂಡೇಶ್ವರನಾಥ್ ಅವರಿಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ.
ದೀಪಾ ಹಾಗೂ ಅವರ ಕುಟುಂಬ ಅಗರ್‍ವಾಲಾ ಎಂಬ ನಗರದಲ್ಲಿ ವಾಸಿಯಾಗಿದ್ದು ಈ ಸ್ಥಳದಲ್ಲಿ ಇಂತಹ ಐಶಾರಾಮಿ ಕಾರುಗಳನ್ನು ನಿರ್ವಹಣೆ ಮಾಡಲು ತುಂಬಾ ಕಷ್ಟಕರವಾಗುತ್ತಿರುವ ಕಾರಣದಿಂದ ಬಿಎಂಡಬ್ಲ್ಯೂ ವಾಪಾಸ್ ಮಾಡಲು ಮುಂದಾಗಿದ್ದಾರೆ. ಈ ನಗರದ ರಸ್ತೆಗಳು ತೀವ್ರ ಹದಗೆಟ್ಟಿರುವ ಹಿನ್ನಲೆಯಲ್ಲಿ ಇಂತಹ ಐಶಾರಾಮಿ ವಾಹನಗಳನ್ನು ಕಚ್ಚಾ ರಸ್ತೆಯಲ್ಲಿ ಚಲಾಯಸಿದರೆ ಅದರ ನಿರ್ವಹಣೆ ಕಷ್ಟ ಹಾಗೂ ಅಗರ್‍ವಾಲಾ ನಗರದಲ್ಲಿ ಬಿಎಂಡಬ್ಲ್ಯೂ ಕಾರ್ ಸರ್ವೀಸ್ ಸೆಂಟರ್ ಕೂಡ ಇಲ್ಲದಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಇದಲ್ಲದೇ ಮುಂದಿನ ತಿಂಗಳು ಜರ್ಮನಿಯಲ್ಲಿ ನಡೆಯಲಿರುವ ಚಾಲೆಂಜರ್ಸ್ ಕಪ್‍ಗಾಗಿ ದೀಪಾ ಅವರು ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸುವ ಕಾರಣದಿಂದ ವಾಪಸ್ ಮಾಡಲಿದ್ದಾರೆ. ಆದರೆ ಈ ಕುರಿತಾಗಿ ದೀಪಾ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಅವರ ಕೋಚ್ ಬಿಶ್ವೇಸ್ವರ್ ನಂದಿ ಅವರ ಬಳಿ ಕೇಳಿದಾಗ ಅದು ಅವರವರ ವೈವಕ್ತಿಕ ಅಭಿಪ್ರಾಯ ಎಂದು ಸುಮ್ಮನಾಗಿದ್ದಾರೆ. ಆದರೆ ನನಗೆ ತಿಳಿದಿರುವ ಪ್ರಕಾರ ಬಿಎಂಡಬ್ಲಯೂ ಕಾರನ್ನು ಹಿಂದಿರುಗಿಸುವ ಉದ್ದೇಶ ಒಂದು ಅಗರ್ವಾಲ್ ನಗರದಲ್ಲಿ ಸರ್ವಿಸ್ ಸೆಂಟರ್ ಇಲ್ಲದಿರುವುದು, ಎರಡನೆಯದಾಗ ಇಲ್ಲಿನ ರಸ್ತೆಗಳಿಗೆ ಸೂಕ್ತವಾದ ವಾಹನ ಇದಲ್ಲ ಆದ್ದರಿಂದ ದೀಪಾ ಕಟುಂಬಕ್ಕೆ ಇದರ ನಿರ್ವಹಣೆ ಮಾಡುವುದು ಕಷ್ಟವಾಗಿರೋದ್ರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಕೋಚ್ ಹೇಳಿದ್ದಾರೆ..

POPULAR  STORIES :

ಹುಡುಗಿಯೊಬ್ಳು ಐಫೋನ್ ತಗೊಳೋಕೆ ನಿಮ್ಮತ್ರ ದುಡ್ ಕೇಳುದ್ರೆ..?

Oxford ಇಂಗ್ಲೀಷ್ ಡಿಕ್ಷನರಿಯಲ್ಲಿ ದಕ್ಷಿಣ ಭಾರತದ ಎರಡು ಸಾಮಾನ್ಯ ಪದಗಳ ಸೇರ್ಪಡೆ..!

ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!

ಏಳು ಸಾವಿರ ವರ್ಷಗಳ ಹಿಂದಯೇ ಏಲಿಯನ್ಸ್ ವಿಮಾನ ನಿಲ್ದಾಣ ನಿರ್ಮಿಸಿಕೊಂಡಿದ್ವು : ಇರಾಕ್ ಸಚಿವ..!

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...