ತವರಿಗೆ ನೆರವಾದ ಕೊಡಗಿನ ಕುವರಿ ; ಹುಟ್ಟೂರಿನ ಕಷ್ಟಕ್ಕೆ ಕೈ ಜೋಡಿಸಿದ ನಟಿ

Date:

ವೀರ ಯೋಧರ ನಾಡು ಕೊಡಗು ವರುಣನ ರೌದ್ರಾವತಾರಕ್ಕೆ ಬೆಚ್ಚಿ ಬಿದ್ದಿದೆ. ಮಳೆಯ ಅವಾಂತರಕ್ಕೆ ಪರಿಗಣಿಸಲಾಗದಷ್ಟು ಸಾವು-ನೋವು ಅನಾಹುತಗಳಾಗಿವೆ.

ರಾಜ್ಯದ ಮೂಲೆ ಮೂಲೆಗಳಿಂದ ಸಹಾಯದ ಮಹಾಪೂರ ಕೊಡಗಿಗೆ ಹರಿದು ಬರುತ್ತಿದೆ. ಜನಸಾಮಾನ್ಯರು ಕೊಡಗಿನ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ‌. ಕನ್ನಡ ಮಾಧ್ಯಮಗಳು, ಸಂಘ ಸಂಸ್ಥೆಗಳು, ವಿವಿಧ ತಂಡಗಳ ಕರೆಗೆ ಜನರು ನಿರೀಕ್ಷೆಗೂ ಮೀರಿ ಸ್ಪಂದಿಸುತ್ತಿದ್ದಾರೆ. ಸ್ವಯಂ ಪ್ರೇರಿತರಾಗಿ ಕೊಡಗಿಗೆ ಕೈ ಜೋಡಿಸಿದ್ದಾರೆ.


ಈ ನಡುವೆ ಕನ್ನಡದ ನಟಿ ದಿಶಾಪೂವಯ್ಯ ಅವರು ಸಹ ತನ್ನ ತವರಿನ ನೆರವಿಗೆ ಧಾವಿಸಿದ್ದಾರೆ.
ಇವರ ಕುಟುಂಬ ಸಹ ಸಂಕಷ್ಟಕ್ಕೆ ಸಿಲುಕಿತ್ತು.
ದಿಶಾ ಅವರು ಕೊಡಗಿಗೆ ನೆರವಾಗುವಂತೆ ಕೋರಿದ್ದರು. ದಿಶಾ ಅವರ ಮನವಿಗೆ ಭಾರಿ ಸ್ಪಂದನೆ ಸಿಕ್ಕಿದ್ದು, ಎರಡು ಟ್ರಕ್ ಗಳಲ್ಲಿ ಅಗತ್ಯ ಸಾಮಾಗ್ರಿಗಳನ್ನು ತುಂಬಿಸಿಕೊಂಡು ಈಗಾಗಲೇ ಕೊಡಗಿಗೆ ಹೋಗಿದ್ದಾರೆ. ಎರಡು ತಂಡಗಳೊಂದಿಗೆ ದಿಶಾ ತವರು ತಲುಪಿದ್ದಾರೆ.
ದಿಶಾ ಅವರ ಕುಟುಂಬ ಮಡಿಕೇರಿಯ ಮುಕ್ಕೂಡ್ಲುವಿನಲ್ಲಿದೆ.

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...