ಎಂ.ಎಸ್ ಧೋನಿ ಸಿನಿಮಾ ಖ್ಯಾತಿಯ ಬಾಲಿವುಡ್ ತಾರೆ ದಿಶಾ ಪಟಾನಿ ಬೆಂಗಳೂರಿಗೆ ಬಂದಿದ್ದರು.
ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಾಧರಿತ ಸಿನಿಮಾ ಎಂ.ಎಸ್ ಧೋನಿ, ಕುಂಗ್ ಫೂ, ತೆಲುಗಿನ ಲೋಫರ್ ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದರು. ಸದ್ಯ ಭಾಗಿ-2 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ.
ಇವರು ಮಹದೇವಪುರದ ಫಿನಿಕ್ಸ್ ಸಿಟಿಯಲ್ಲಿ ಸಿ.ಕೃಷ್ಣಯ್ಯ ಚೆಟ್ಟಿ ಜುವೆಲರ್ಸ್ ಫಾರ್ ಎವರ್ ಮಾರ್ಕ್‍ನ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ದಿಶಾ ಪಟಾನಿ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.