ಶನಿವಾರ ರಾತ್ರಿ ಹಿರಿಯ ನಟ ಅಂಬರೀಶ್ ವಿಧಿವಶರಾದರು. ಸೋಮವಾರ ಸಂಜೆ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋದಲ್ಲಿ ಅಗ್ನಿ ಸ್ಪರ್ಶ ಮಾಡಲಾಯಿತು. ಈ ನಡುವೆ ಅಂಬಿಯನ್ನು ಕೊನೆ ಬಾರಿ ನೋಡಿ ಕಣ್ಣುಂಬಿಕೊಳ್ಳಬೇಕು ಎಂದು ಕಲಾವಿದರು ಆಸೆ ಪಡುತ್ತಿದರು.ಆದರೆ ನಟ ಅಂಬರೀಷ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಹಿರಿಯರು ಹಾಗೂ ಗಣ್ಯರನ್ನು ಕರೆಯಲಾಗುತ್ತಿತ್ತು. ಇದೇ ಸಂದರ್ಭದಲ್ಲಿ ದಿಢೀರ್ ನೇ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಪುತ್ರ ನಿಖಿಲ್ ಅವರ ಹೆಸರು ಕರೆದು ಅಂತಿಮ ನಮನ ಸಲ್ಲಿಸಲು ಅವಕಾಶ ನೀಡಿದರು ಡಿ.ಕೆ ಶಿವಕುಮಾರ್.
ಇದಾದನಂತರ ವಿಧಿ ವಿಧಾನಗಳಿಗೆ ಹೆಚ್ಚು ಸಮಯಬೇಕಾಗಿದೆ ಎಂದು ಹೇಳಿ ಕೆಲವು ಖ್ಯಾತ ನಟರಿಗೆ ಅಂಬಿಯ ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಿಲ್ಲ ಡಿಕೆಶಿ. ಇದರಿಂದ ಪಾರ್ಥಿವ ಶರೀರದ ಮುಂದಿಯೇ ಕಲಾವಿದರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಮತ್ತೊಮ್ಮೆ ಎಲ್ಲಾ ಕಲಾವಿದರನ್ನು ಅಂಬಿಗೆ ಗೌರವ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು.
ಡಿ.ಕೆ ಶಿವಕುಮಾರ್ ಮೇಲೆ ಮುನ್ನಿಸಿಕೊಂಡ ಕಲಾವಿದರು. ಇದಕ್ಕೆ ಕಾರಣ?
Date: