ಕೆಜಿಎಫ್ ಬಾಬುಗೂ ಚಿಕ್ಕಪೇಟೆಗೂ ಏನ್ರೀ ಸಂಬಂಧ..? ಎಂದು ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಜಿಎಫ್ ಬಾಬು ಬಡವರಿಗೆ ಸಹಾಯ ಮಾಡಲಿ ಬೇಡ ಅನ್ನಲ್ಲ. ಆದರೆ ಎಲ್ಲವೂ ಪಕ್ಷದ ಚೌಕಟ್ಟಲ್ಲಿರಬೇಕು ಎಲ್ಲಾ. ಈಗಾಗಲೇ ಪಕ್ಷದಿಂದ ನೋಟಿಸ್ ಕೊಟ್ಟಿದ್ದಾರೆ. ಮುಂದಿನ ಕ್ರಮ ನೋಡಿಕೊಳ್ಳುತ್ತಾರೆ ಎಂದರು. ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಮ್ಮ ತಂದೆಯ ಕಾರ್ಯ ನೆರವೇರಿಸಲು ಕನಕಪುರಕ್ಕೆ ತೆರಳಿದರು. ಇದಾದ ಬಳಿಕ ಕನಕಪುರ ಹಾಗೂ ರಾಮಮಗರದಲ್ಲಿ ಭಾರಿ ಮಳೆಯಿಂದ ಉಂಟಾದ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಕೆಜಿಎಫ್ ಬಾಬುಗೂ ಚಿಕ್ಕಪೇಟೆಗೂ ಏನ್ರೀ ಸಂಬಂಧ..?
Date: