ತನಗೆ ಪತ್ನಿಯಿಂದ ವಿಚ್ಛೇದನ ಬೇಕಿದೆ ಅಂತ ಹಠ ಹಿಡಿದ ವೈದ್ಯ ಮೊಬೈಲ್ ಟವರ್ ಹತ್ತಿ ಕುಳಿತಿದ್ರು..!
ಹೆಂಡ್ತಿಯಿಂದ ಡೈವೋರ್ಸ್ ಪಡೆಯಲು ಈ ರೀತಿ ವಿಭಿನ್ನ ಪ್ರತಿಭಟನೆಗೆ ಮುಂದಾಗಿರೋ ಡಾಕ್ಟರ್ ಅಜಯ್. ಘಟನೆ ನಡೆದಿರೋದು ತೆಲಂಗಾಣದ ಜಗ್ತಿಯಾಲ್‍ನಲ್ಲಿ.
ಡಾಕ್ಟರ್ ಅಜಯ್ ಮತ್ತು ಲಾಸ್ಯ ದಾಪಂತ್ಯ ಜೀವನಕ್ಕೀಗ 7 ವರ್ಷ. 4 ವರ್ಷದ ಹಿಂದೆ ಲಾಸ್ಯ ಪತಿ ಅಜಯ್ ಅವರ ಮನೆಯವರು ನಂಗೆ ಕಿರುಕುಳ ನೀಡ್ತಿದ್ದಾರೆ ಅಂತ ಜಗ್ತಿಯಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಆಗ ಪೊಲೀಸರು ಇಬ್ಬರಿಗೂ ಸಮಾಧಾನ ಮಾಡಿ, ರಾಜಿಮಾಡಿ ಕಳುಹಿಸಿದ್ರು. ಆದರೆ, ಈಗ ಪುನಃ ಲಾಸ್ಯ ಪತಿ ವಿರುದ್ಧ ದೂರು ನೀಡಿದ್ದಾರೆ..! ಇದರಿಂದ ಬೇಸತ್ತಿರೋ ಅಜಯ್ ಹೆಂಡ್ತಿಯಿಂದ ಮುಕ್ತಿ ಸಿಗಬೇಕು ಎಂದು ಟವರ್ ಹತ್ತಿ ಕುಳಿತ್ತಿದ್ದು, ಪೊಲೀಸರು ಇವರ ಮನವೊಲಿಸಿ ಕೆಳಗಿಳಿಸಿದ್ದಾರೆ.