ನಾಯಿಗೂ ಮಂದಿರ…! ಆಶ್ಚರ್ಯ ಆದ್ರು ಇದೊಂದು ಸತ್ಯ. ಝಾನ್ಸಿಯಲ್ಲೊಂದು ನಾಯಿ ಮಂದಿರ ಇದೆ.
ಝಾನ್ಸಿಯ ರೆವನ್ ಹಳ್ಳಿಯ ಮಂದಿರದ ಕಥೆ. ಇಲ್ಲಿ ದೇವಿ ರೂಪದಲ್ಲಿ ಹೆಣ್ಣು ನಾಯಿಯನ್ನು ಪೂಜೆ ಮಾಡಲಾಗುತ್ತದೆ…! ಬರಗಾಲ ತಪ್ಪಿಸಲು ಇಲ್ಲಿ ಪೂಜೆ ನಡೆಯುತ್ತದೆ.
ರೇವನ್ ಮತ್ತು ಕಕವಾರ ಎಂಬ ಎರಡು ಹಳ್ಳಿಗಳ ನಡುವೆ ಈ ಶ್ವಾನಮಂದಿರ ಇದೆ.
ಹೆಣ್ಣು ನಾಯಿಯೊಂದು ಈ ಎರಡು ಹಳ್ಳಿಗಳಲ್ಲಿ ಯಾವುದೇ ಸಮಾರಂಭವಿದ್ದರೂ ಊಟ ಮಾಡಲು ಈ ಎರಡೂ ಊರುಗಳಿಗೂ ಹೋಗುತ್ತಿತ್ತಂತೆ. ಒಮ್ಮೆ ಎರಡೂ ಹಳ್ಳಿಗಳಲ್ಲೂ ಅದಕ್ಕೆ ತಿನ್ನಲು ಆಹಾರ ಸಿಗದೇ ಹಸಿವಿನಿಂದ ಎರಡು ಹಳ್ಳಿಗಳ ನಡುವೆ ಸಾವನ್ನಪ್ಪಿತು.
ಆ ನಾಯಿಯನ್ನು ಹಳ್ಳಿಗರು ಅಲ್ಲೇ ಸಮಾಧಿ ಮಾಡಿದರು. ಸ್ವಲ್ಪ ದಿನಗಳ ನಂತರ ಅಲ್ಲಿ ಕಲ್ಲೊಂದು ಉದ್ಭವವಾಯಿತಂತೆ. ಆದ್ರಿಂದ ಅಲ್ಲೇ ಆ ನಾಯಿಯ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ಇಲ್ಲಿ ಏನೇ ಬೇಡಿಕೊಂಡರು ಅದು ಈಡೇರುತ್ತದೆ. ಈ ದೇವಿ ಅವರ ಕಷ್ಟವನ್ನೆಲ್ಲಾ ದೂರ ಮಾಡುತ್ತಾರೆ ಎನ್ನುವುದು ಅಲ್ಲಿನ ಜನರ ನಂಬಿಕೆ.