ದೇಶದ ಪ್ರತಿಯೊಬ್ಬ ಪ್ರಜೆಗೂ , ಅದರಲ್ಲೂ ಚಿಕ್ಕಮಕ್ಕಳಿಗೂ ಸಹ ರಾಷ್ಟ್ರಧ್ವಜ ಹೇಗಿರುತ್ತೆ? ಅದು ಯಾವ ಬಣ್ಣಗಳನ್ನು ಹೊಂದಿರುತ್ತದೆ ಎಂಬುದರ ಅರಿವು ಇರುತ್ತೆ. ಆದರೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ತಮ್ಮ ರಾಷ್ಟ್ರಧ್ವಜದ ಬಣ್ಣವೇ ಗೊತ್ತಿಲ್ಲ…!
ರಾಷ್ಟ್ರದ ಅಧ್ಯಕ್ಷರಿಗೇ ರಾಷ್ಟ್ರಧ್ವಜದ ಪರಿಚಯವಿಲ್ಲವೇ? ಹೀಗೊಂದು ಅಚ್ಚರಿ ಪ್ರಶ್ನೆ ಕಾಡಿದರೂ ಸಹ ಇದನ್ನು ನಂಬಲೇ ಬೇಕಿದೆ.
ಅಮೆರಿಕಾ ರಾಷ್ಟ್ರಧ್ವಜಕ್ಕೆ ತಪ್ಪಾದ ಬಣ್ಣ ಹಚ್ಚುವ ಮೂಲಕ ಟ್ರಂಪ್ ಕಂಡಾಪಟ್ಟೆ ಟ್ರೋಲ್ ಆಗ್ತಿದ್ದಾರೆ…!
The opioid crisis is one of our top priorities at HHS, with a drumbeat of action on the full range of efforts where we can assist local communities. Today, I joined @POTUS & @FLOTUS in Ohio to learn how states and communities are responding to the challenge of opioid addiction. pic.twitter.com/NwxSoeNznA
— Alex Azar (@SecAzar) August 25, 2018
ಇತ್ತೀಚೆಗೆ ಟ್ರಂಪ್ ಮತ್ತು ಅವರ ಪತ್ನಿ ಬಹಿಯೋದಲ್ಲಿನ ಮಕ್ಕಳ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಟ್ರಂಪ್ ಮಕ್ಕಳ ಜೊತೆ ಕುಳಿತು ಅಮೆರಿಕಾ ರಾಷ್ಟ್ರಧ್ವಜಕ್ಕೆ ಕಲರ್ ಮಾಡಿದರು. ಅಮೆರಿಕಾ ಧ್ವಜದಲ್ಲಿ ಬಿಳಿ ಹಾಗೂ ಕೆಂಪು ಬಣ್ಣದ ಪಟ್ಟಿಗಳಿದ್ದು, ನೀಲಿ ಬಣ್ಣದ ರೆಕ್ಟಾಂಗಲ್ ಒಳಗೆ 50ಬಿಳಿ ಬಣ್ಣದ ನಕ್ಷತ್ರಗಳು ಇರುತ್ತವೆ. ಆದರೆ, ಟ್ರಂಪ್ ಬಿಳಿ,ಕೆಂಪು ಬಣ್ಣದ ಪಟ್ಟಿಗಳ ಜಾಗದಲ್ಲಿ ನೀಲಿ ಬಣ್ಣದಿಂದ ಕಲರ್ ಮಾಡಿದ್ದಾರೆ…!h
The President has colored his flag wrong.
That is all. pic.twitter.com/wWXBgR9I6V
— Talia (@2020fight) August 25, 2018
ಟ್ರಂಪ್ ಅವರ ಈ ಎಡವಟ್ಟನ್ನು ಹೆಲ್ತ್ ಅಂಡ್ ಹ್ಯೂಮನ್ ಸರ್ವೀಸಸ್ ಸೆಕ್ರೆಟರಿ ಅಲೆಕ್ಸ್ ಅಝರ್ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅವರು ‘ಟ್ರಂಪ್ ಅಮೆರಿಕಾ ಧ್ವಜದ ಬದಲು ರಷ್ಯಾದ ಧ್ವಜದ ಬಗ್ಗೆ ಯೋಚನೆ ಮಾಡ್ತಿದ್ರೇನೋ’ ಎಂದು ಟ್ರೋಲ್ ಆಗುತ್ತಿದೆ. ಮಕ್ಕಳೆಲ್ಲಾ ಅಮೆರಿಕಾ ಧ್ವಜ ಬಿಡಿಸುತ್ತಿದ್ದರೆ , ಅಮೆರಿಕಾ ಅಧ್ಯಕ್ಷರು ರಷ್ಯಾ ಧ್ವಜ ಬಿಡಿಸುತ್ತಿದ್ದಾರೆ ಎಂದೂ ಸಹ ಟ್ರೋಲ್ ಗಳಾಗುತ್ತಿವೆ.