ಪರಮೇಶ್ವರ್ ಅವರೇ ಇದೇನಾ ಸಭ್ಯತೆ..?ಇದೇನಾ ಸಂಸ್ಕೃತಿ..? ಹೌದು, ಹೀಗಂತ ಕೇಳಲೇ ಬೇಕಾಗಿದೆ. ಕಾರಣ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರು ಹಿರಿತನವನ್ನು, ತಮ್ಮ ಹುದ್ದೆಯನ್ನೂ ಮರೆತಿದ್ದಾರೆ.
ಸ್ವ ಕ್ಷೇತ್ರ ಕೊರಟಗೆರೆ ಪಟ್ಟಣದಲ್ಲಿ ನಿನ್ನೆ ರಾತ್ರಿ ಡಾ. ಜಿ. ಪರಮೇಶ್ವರ್ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆಯಿಂದ ನಡೆದ ಕಾರ್ಯಕ್ರಮದಲ್ಲಿ ಲಲನೆಯರ ಡ್ಯಾನ್ಸ್ ನಡುವೆ ಕುಳಿತಿದ್ದಾರೆ.’ಜನನಾಯಕ ನಮ್ಮಊರಿಗೆ’ ಹಾಡಿಗೆ ಪರಂ ಹೀರೋ ಆಗಿದ್ದಾರೆ…!
ಹುಡುಗಿಯರು ವೇದಿಕೆಯಲ್ಲಿ ಡ್ಯಾನ್ಸ್ ಮಾಡ್ತಿದ್ದು, ನಡುವೆ ಕುರ್ಚಿಯಲ್ಲಿ ಹೂವಿನ ಹಾರ ಹಾಕಿಕೊಂಡು ಪರಂ ಕುಳಿತಿದ್ದಾರೆ. ಇದು ಚುನಾವಣಾ ಗಿಮಿಕ್ ಎಂದು ಹೇಳಲಾಗುತ್ತಿದೆ. ಆದರೆ , ಚುನಾವಣೆ ಇರಲಿ ಏನೇ ಇರಲಿ ಸಭ್ಯತೆ ಮರೆತು ವರ್ತಿಸೋದು ಸರಿಯೇ? ಎಂಬ ಟೀಕೆ ವ್ಯಕ್ತವಾಗಿದೆ.