ಯುಪಿಎಸ್ ಸಿ ಫಲಿತಾಂಶ ಹೊರಬಿದ್ದಿದೆ. ಕರ್ನಾಟಕದ ಒಟ್ಟು 27 ಅಭ್ಯರ್ಥಿಗಳು ಯಶಸ್ವಿಯಾಗಿದ್ದಾರೆ. ಇವರಲ್ಲಿ ರಾಜ್ ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಿಂದ 16 ಮಂದಿ ತೇರ್ಗಡೆಯಾಗಿದ್ದು ಇದು ಮೊದಲ ವರ್ಷದ ಸಾಧನೆ.
ಮೊದಲ ವರ್ಷದಲ್ಲೇ ರಾಜ್ ಕುಮಾರ್ ಅಕಾಡೆಮಿಯ ಅಭ್ಯರ್ಥಿಗಳು ಇಷ್ಟೊಂದು ಸಂಖ್ಯೆಯಲ್ಲಿ ತೇರ್ಗಡೆಯಾಗಿರುವುದು ಅತ್ಯುತ್ತಮ ಸಾಧನೆಯೇ ಸರಿ.
ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ರಾಜ್ಯದ ಅಭ್ಯರ್ಥಿಗಳಲ್ಲಿ ರಾಜ್ ಅಕಾಡೆಮಿಯದ್ದೇ ಸಿಂಹಪಾಲು ಎಂಬುದು ಗಮನಿಸ ಬೇಕಾದ ಅಂಶ.