ರಾಹುಲ್ ದ್ರಾವಿಡ್ ವಿಶ್ವಕ್ರಿಕೆಟ್ ಕಂಡ ಅತ್ಯಂತ ಹೆಮ್ಮೆಯ , ಶ್ರೇಷ್ಠ ಕ್ರಿಕೆಟಿಗ. ಕ್ರಿಕೆಟ್ ಜೆಂಟಲ್ಮೆನ್ ಕ್ರೀಡೆ ಎಂಬುದು ನಿಜವೇ ಎಂಬ ಪ್ರಶ್ನೆ ಎದುರಾದಗಲೆಲ್ಲಾ…? ಖಂಡಿತ ಇದೊಂದು ಜೆಂಟಲ್ಮೆನ್ ಕ್ರೀಡೆ ಅಂತ ನೆನಪಿಸುವುದು ಇದೇ ಜೆಂಟಲ್ಮೆನ್ ದ್ರಾವಿಡ್.
ಭಾರತ ಕ್ರಿಕೆಟ್ ಮಾತ್ರವಲ್ಲ ಇಡೀ ವಿಶ್ವ ಕ್ರಿಕೆಟ್ ಗೆ ದ್ರಾವಿಡ್ ನೀಡಿರುವ, ನಿವೃತ್ತಿ ಬಳಿಕವೂ ಅವರು ನೀಡುತ್ತಿರುವ ಕೊಡುಗೆ ಅಪಾರ.
ದ್ರಾವಿಡ್ ನಿವೃತ್ತಿ ಘೋಷಿಸಿ ವರ್ಷಗಳೇ ಉರುಳಿವೆ. ಆದರೆ ಅವರು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ಚಿರಪರಿಚಿತ..ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಗುರುವಾಗಿ ಭಾರತಕ್ಕೆ ಅಂಡರ್ 19 ವಿಶ್ವಕಪ್ ತಂದುಕೊಡುವಲ್ಲಿ ಇವರ ಪಾತ್ರ ಹಿರಿಯದು. ಹೀಗಾಗಿ ಸುಪ್ರೀಂ ಕೋರ್ಟ್ ನೇಮಿಸಿರುವ ಬಿಸಿಸಿಐ ಆಡಳಿತ ಮಂಡಳಿ ರಾಹುಲ್ ದ್ರಾವಿಡ್ ಅವರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ. ಈ ಬಗ್ಗೆ ನಿಮಗೆ ಗೊತ್ತಿದೆ.
ಆದರೆ, ಕೆಲವರು ದ್ರಾವಿಡ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಯಾಕ್ರಿ? ಎಂದು ಪ್ರಶ್ನೆ ಮಾಡ್ತಿದ್ದಾರೆ.
ಕುಲದೀಪ್, ಬುಮ್ರಾ ರಂತೆ ಕೆಲವರು ವೈಯಕ್ತಿಕ ಕೋಚ್ ಗಳನ್ನು ನೇಮಿಸಿಕೊಂಡಿರ್ತಾರೆ. ಆಟಗಾರರ ಮೇಲೆ ಅವರ ವೈಯಕ್ತಿಕ ಕೋಚ್ ಗಳ ಪ್ರಭಾವ ಹೆಚ್ಚು ಆದ್ದರಿಂದ ದ್ರಾವಿಡ್ ಅವರ ಹೆಸರನ್ನು ಶಿಫಾರಸು ಮಾಡಿರೋದು ತಪ್ಪು ಎಂದು ಬಿಸಿಸಿಐನ ಕೆಲವು ಅಧಿಕಾರಿಗಳು ಹೇಳಿದ್ದಾರೆ.