ಮಕ್ಕಳು ಹಠ ಮಾಡೋದು ಕಾಮನ್. ಅವರ ಹಠ ತಡೆಯಲಾಗದೇ ಇದ್ದಾಗ ಪೋಷಕರು ಅರೆಕ್ಷಣ ಕೋಪಗೊಂಡು, ಮಕ್ಕಳಿಗೆ ಅಮ್ಮಮ್ಮ ಅಂದ್ರೆ ಎರಡೇಟು ಹೊಡೆಯಬಹುದು…ಆದರೆ, ಯಾರಾದರೂ ಕೊಂದೇ ಬಿಡ್ತಾರ?
ಅಚ್ಚರಿಯಾದ್ರು ಸತ್ಯ….ಇಲ್ಲೊಬ್ಬ ಪಾಪಿ ತಂದೆ ಮಗ ತಿನ್ನಲು ಮೋಮೋಸ್ ಕೇಳಿದ್ದಕ್ಕೇ ಕೊಂದು ಬಿಟ್ಟಿದ್ದಾನೆ…!
ಈ ಘಟನೆ ನಡೆದಿರೋದು ಆಗ್ನೇಯ ದೆಹಲಿಯ ಜೈತ್ ಪುರ್ ಪ್ರದೇಶದಲ್ಲಿ. 6 ವರ್ಷದ ಅಯಾನ್ ತಂದೆಯಿಂದಲೇ ಕೊಲೆಗೀಡಾದ ದುರ್ದೈವಿ. 31 ವರ್ಷದ ಸಂಜಯ್ ಆಲ್ವಿ ಆರೋಪಿ.
ಸಂಜಯ್ ತನ್ನ ಮಗನನ್ನು ಕರೆದುಕೊಂಡು ಖಾದರ್ಪುಲಿಗೆ ಹೋಗಿದ್ದನು. ಆಗ ಅಯಾನ್ ತಿನ್ನಲು ಮೋಮೋಸ್ ಕೊಡಿಸು ಎಂದು ಹಠ ಹಿಡಿದಿದ್ದಾನೆ.ಕುಡಿದ ಅಮಲಿನಲ್ಲಿದ್ದ ಸಂಜಯ್ ಮಗನನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ…!
ಮದನಪುರ ಜಿಲ್ಲೆಯ ಭಂಗರ್ ಕಾಲೋನಿಯ ನಿವಾಸಿಯಾಗಿರುವ ಆರೋಪಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಮಗನನ್ನು ಕಾಲುವೆಗೆ ತಳ್ಳಿದ ಬಳಿಕ ಆತ ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಜನರಿಗೆ ತೋರಿಸಿ ಅಲ್ಲಿಂದ ಕಾಲ್ಕಿಳಲು ಯತ್ನಿಸಿದ್ದ. ಅನುಮಾನಗೊಂಡ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ…!