ಪ್ರಿಯಕರನ ಜೊತೆ ಸೇರಿ ಕೋಟ್ಯಾಧಿಪತಿಯನ್ನು ಕಿಡ್ನಾಪ್ ಮಾಡಿದ ಜೆಡಿಎಸ್ ಮಾಜಿ ಅಧ್ಯಕ್ಷೆ…!

Date:

ಜೆಡಿಎಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಆರ್ಷಿಯಾ ತನ್ನ ಪ್ರಿಯಕರನ ಜೊತೆ ಸೇರಿ ಕೋಟ್ಯಾಧಿಪತಿಯೊಬ್ಬರನ್ನು ಕಿಡ್ನಾಪ್ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ…!


ಕನ್ನಡ ಸಿನಿಮಾಗಳಿಗೆ ಹಣ ಹಾಕುತ್ತಿದ್ದ ಮಲ್ಲಿಕಾರ್ಜುನ್ (ಮಲ್ಲಣ್ಣ) ಎಂಬುವವರನ್ನು ಆರ್ಷಿಯಾ ತನ್ನ ಪ್ರಿಯಕರ ರೇಣುಕಾ ಪ್ರಸಾದ್ ಜೊತೆ ಸೇರಿ ಜನವರಿ 11ರಂದು ಕಿಡ್ನಾಪ್ ಮಾಡಿದ್ದರು.


ಆರೋಪಿಗಳು ಮಲ್ಲಣ್ಣ ಅವರನ್ನು ಯಲಹಂಕದ ಮನೆಯ ಬಳಿಯಿಂದ ಅಪಹರಿಸಿದ್ರು‌. ಎಚ್. ಎಸ್ ಆರ್ ಲೇ ಔಟ್ ಗೆ ಕರೆದೊಯ್ದು ಅವರ ಉಡದಾರದಿಂದಲೇ ಕೈಕಟ್ಟಿ ಹಾಕಿದ್ರು….! ನಂತರ 80 ಲಕ್ಷ ರೂ ಹಣ ವಸೂಲಿ ಮಾಡಿದ್ರು.


ಆರೋಪಿಗಳಿಗೆ ಪೊಲೀಸರು‌ ಬಲೆ ಬೀಸಿದ್ರು. ಆಗ ಆರ್ಷಿಯಾ ತನ್ನ ಕಾರಿನ ಮುಂದೆ‌ ಭಾರತ ಸರ್ಕಾರ ಅಂತ ಬೋರ್ಡ್ ಹಾಕಿಕೊಂಡು ಪೊಲೀಸರನ್ನು ಯಾಮಾರಿಸಿದ್ದಾರೆ.


ಚಿಕ್ಕಾಬಳ್ಳಾಪುರ ಬಳಿ ಪೊಲೀಸರು ತಪಾಸಣೆ ನಡೆಸುವಾಗ ಆರೋಪಿಯೊಬ್ಬ ಆರ್ಷಿಯಾ ಕಾರ್ ನಿಂದ ಇಳಿದು ಎಸ್ಕೇಪ್ ಆಗಿದ್ದಾನೆ. ಇಳಿದು ಹೋಗಿದ್ದು ಯಾರೆಂದು ಪೊಲೀಸರು ಕೇಳಿದಾಗ , ಡ್ರಾಪ್ ಕೇಳಿ ಇಲ್ಲಿಂದ ಹೋಗಿದ್ದಾರೆ ಎಂದು ಆರ್ಷಿಯಾ ಹೇಳಿದ್ದಾಳೆ…!


ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಷಿಯಾ , ರೇಣುಕಾ ಪ್ರಸಾದ್, ಕಾಂತರಾಜ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಆರ್ಷಿಯಾ 20 ಕೋಟಿಯ ಒಡತಿ , ಈಕೆಯ ಪ್ರಿಯಕರ ರೇಣುಕಾ ಪ್ರಸಾದ್ 300ಕೋಟಿಯ ಒಡೆಯ ಎನ್ನಲಾಗಿದೆ‌.


ಕಾಂತರಾಜ್ ಅಣ್ಣ ಲಕ್ಷ್ಮೀ ಪತಿಗೆ ಮಲ್ಲಣ್ಣ ಸುಮಾರು 30ಲಕ್ಷ ರೂ ನೀಡಿದ್ದರು. ಇದನ್ನು ವಾಪಾಸ್ಸು ನೀಡದೆ, ಸರಿಯಾಗಿ ಬಡ್ಡಿಯನ್ನೂ ಕಟ್ಟದೆ ಲಕ್ಷ್ಮೀಪತಿ ಸತಾಯಿಸುತ್ತಿದ್ದ. ಇದರಿಂದ ಮಲ್ಲಣ್ಣ ಲಕ್ಷ್ಮೀಪತಿಗೆ ಬೈದಿದ್ದಾರೆ.‌ ಆದ್ದರಿಂದ ಈತ ಬೇರೆಯವರಿಗೆ ಹಣ ಕೊಡ್ತಾನೆ ನಮಗೆ ಕೊಡಲ್ಲ ಅಂತ ಆರೋಪಿಗಳು ಮಲ್ಲಣ್ಣ ಅವರನ್ನು ಕಿಡ್ನಾಪ್ ಮಾಡಿದ್ದಾರೆನ್ನಲಾಗಿದೆ. ಆರ್ಷಿಯಾ ಜೆಡಿಎಸ್ ನಿಂದ ಅಮಾನತುಗೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...