ಗದಗ ಜಿಲ್ಲೆಯ ಅಡವಿ ಸೋಮಾಪುರ ಗ್ರಾಮದ ದುನಿಯಾ ವಿಜಯ್ ಅಭಿಮಾನಿಗಳು ವಿಶೇಷವಾಗಿ ಸ್ಮಶಾನದಲ್ಲಿ ವಿಜಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಗುರುವಾರ ಮಧ್ಯರಾತ್ರಿ 12 ಗಂಟೆ ಬಳಿಕ ಸ್ಮಶಾನದಲ್ಲಿ ವಿಜಯ್ ಹುಟ್ಟುಹಬ್ಬವನ್ನು ಆಚರಸಿ ಜೈಕಾರ ಕೂಗಿದ್ದಾರೆ. ಸ್ಮಶಾನದಲ್ಲಿ ಹೋಮ ಮಾಡಿಸಿದ್ದಾರೆ. ವಿಜಯ್ ಅವರ ಫ್ಲೆಕ್ಸ್ ಹಾಕಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಸ್ಮಶಾನದಲ್ಲಿ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಮೌಢ್ಯಗಳನ್ನು ಕಿತ್ತೆಸೆಯುವ ಪ್ರಯತ್ನ ಮಾಡಿರೋದಾಗಿ ಅಭಿಮಾನಿಗಳು ಹೇಳಿಕೊಂಡಿದ್ದಾರೆ.