ಮೂಗುತಿ, ಕಿವಿಯೋಲೆಯನ್ನು ಹುಡ್ಗೀರು ಧರಿಸೋದು ಕಾಮನ್.ಅದ್ರಿಂದ ಅವರ ಸೌಂದರ್ಯ ಹೆಚ್ಚುತ್ತೆ. ಅಷ್ಟೇಅಲ್ದೆ ಅವರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಕಿವಿಯೋಲೆ, ಬಳೆ, ಮೂಗುತಿ ಧರಿಸೋದು ಹಿಂದೆ ಸಂಪ್ರದಾಯ ಆಗಿತ್ತು. ಇವತ್ತು ಫ್ಯಾಷನ್ ಆಗಿದೆ.
ನಿಮ್ಗಿದು ಗೊತ್ತೇ? ಇದ್ರಿಂದ ತುಂಬಾ ಯೂಸ್ ಇದೆ.
ಮಕ್ಕಳು ಕಿವಿ ಓಲೆ ಧರಿಸುವುದರಿಂದ ಅವರ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಅಷ್ಟೇ ಅಲ್ದೆ ಬೆಳವಣಿಗೆಗೆ ಆಗೋ ತೊಂದರೆಯನ್ನೂ ನಿವಾರಿಸುತ್ತಂತೆ.
ಸಂತಾನೋತ್ಪತ್ತಿಗೆ ಸಹಕರಿಸುತ್ತದೆ. ಎಡ ಭಾಗದಲ್ಲಿ ಮೂಗುತಿ ಧರಿಸುವುದರಿಂದ ಹೆಣ್ಣು ಜನ್ಮ ನೀಡುವ ಸಮಯದಲ್ಲಿ ಅಗತ್ಯವಾದ ಬೇಕಾದ ಮಾನಸಿಕ ಹಾಗು ದೈಹಿಕ ಸ್ಥೈರ್ಯ ಹೆಚ್ಚುತ್ತದೆ.ಮಗುವಿಗೆ ಜನ್ಮ ನೀಡುವಾಗ ಯಾವುದೇ ನೋವಾಗದಂತೆ ತಡೆಯುತ್ತದೆ.
ಮುಟ್ಟಿನ ಹೊಟ್ಟೆ ನೋವು ಅಥವಾ ಮೈ-ಕೈ ನೋವು ಬಾರದಂತೆಯೂ ತಡೆಯಬಲ್ಲದು.ಕಿವಿ ಓಲೆ ದೇಹದಲ್ಲಿ ರಕ್ತ ಸಂಚಾರ ಸುಗಮ ಮಾಡಲು ಸಹಾಯ ಮಾಡುತ್ತದೆ. ರಕ್ತ ಸಂಚಾರ ಸರಿಯಾದಲ್ಲಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.ಗಂಡು ಮಕ್ಕಳು ಓಲೆ ಧರಿಸುವುದರಿಂದ ವೀರ್ಯ ಪ್ರಮಾಣವೂ ಹೆಚ್ಚುತ್ತದೆ ಎಂದು ಹೇಳಲಾಗಿದೆ.