ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಗಳು ಮತ್ತು ಕೆಲಸಕ್ಕಾಗಿ ಓದುತ್ತಿದ್ದಾರೆ. ಆದರೆ ಶಿಕ್ಷಣದ ಮಹತ್ವ ಎಂದರೆ ಒಬ್ಬ ವಿದ್ಯಾರ್ಥಿಯು ಶಿಕ್ಷಣದ ಮೂಲಕ ಆತನನ್ನು ಸಬಲೀಕರಣಗೊಳಿಸುವುದಕ್ಕಾಗಿಯೆ ಹೊರತು ಉದ್ಯೋಗ ಹಾಗೂ ಹಣ ಉತ್ಪಾದಿಸಲು ಯಂತ್ರವಲ್ಲ. ಈಗಿನ ದಿನಗಳಲ್ಲಿ ಕೆಲವು ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಹೊಂದಿರುವ ಕಾಳಜಿ, ಕೆಲವು ವಿದ್ಯಾರ್ಥಿಗಳು ಶಿಕ್ಷಣವನ್ನು ಉಡಾಫೆಯಾಗಿ ಸ್ವೀಕರಿಸಿದ್ದಾರೆ. ಸಮಯ ಪಾಲನೆ ಮಾಡುತ್ತಿಲ್ಲ. ಆಧುನಿಕ ಶಿಕ್ಷಣದ ವ್ಯಾಪಕ ನವೀಕರಣದಿಂದ ಹಾಗೂ ನವೀನ ಸಂಸ್ಥೆಗಳು ಹೊರಡಿಸಿರುವ ಹೊಸ ಹೊಸ ಆಜ್ಞೆಗಳಿಂದ ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಒತ್ತಡಗಳು ಹೆಚ್ಚಾಗುತ್ತಿವೆ. ಇವು ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ.
ವಿದ್ಯಾರ್ಥಿಗಳಲ್ಲಿ ಯೋಚನಾಶಕ್ತಿ ತುಂಬಾ ಮುಖ್ಯವಾದುದು. ಒಬ್ಬರು ಮಹಾನ್ ವ್ಯಕ್ತಿಗಳು ಹೇಳಿರುವಂತೆ ಮನುಷ್ಯನ ಬುದ್ದಿ ಶಕ್ತಿಯು ಅವನ ಯೋಚನಾ ತರಂಗಗಳ ಮೇಲೆ ನಿಂತಿದೆ. ಯಾವಾಗಲೂ ಒಳ್ಳೆಯದರ ಬಗ್ಗೆ ಯೋಚನೆ ಮಾಡಬೇಕು. ವಿದ್ಯಾರ್ಥಿಗಳು ಪರಿಪೂರ್ಣ ವ್ಯಕ್ತಿಗಳಾಗಬೇಕಾದರೆ ಕೆಳಗಿನ ನಿಯಮಗಳನ್ನು ಮೈಗೂಡಿಸಿಕೊಳ್ಳಬೇಕು.
* ಸಮಯಪಾಲನೆ ಮಾಡಬೇಕು
* ಗುರುಗಳ ಬಗ್ಗೆ ಗೌರವ ತೋರಬೇಕು
* ಏಕಾಗ್ರಚಿತ್ತದಿಂದ ಮನಸ್ಸನ್ನು ಕೇಂದ್ರೀಕರಿಸಬೇಕು
* ತಾನು ಮಾಡುವ ಕೆಲಸದಲ್ಲಿ ಗುರಿ ಇರಬೇಕು
* ಆ ದಿನದ ಕೆಲಸವನ್ನು ಅಂದೇ ಮಾಡಬೇಕು
* ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ವಾಕ್ಚಾತುರ್ಯವನ್ನು ಸುಧಾರಿಸಿಕೊಳ್ಳಬೇಕು
* ಮಹಾನ್ ವ್ಯಕ್ತಿಗಳ ಚರಿತ್ರೆಗಳನ್ನು ಓದಿ ಪ್ರೇರಿಪಿತರಾಗಬೇಕು
* ಶಿಸ್ತು, ಸಂಯಮ ಮೈಗೂಡಿಸಿಕೊಳ್ಳುವುದು
* ಅನವಶ್ಯಕ ಚರ್ಚೆಗಳಿಂದ ದೂರವಿರಬೇಕು
* ಸಮಾಜಮುಖಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು
* ಅರಿಷಡ್ವರ್ಗಗಳ ಮೇಲೆ ಹಿಡಿತ ಸಾಧಿಸಬೇಕು
* ಭಾರತೀಯ ಸಂಸ್ಕೃತಿಗೆ ಒತ್ತು ಕೊಡಬೇಕು
* ಪಾಶ್ಚಾತ್ಯ ಸಂಸ್ಕೃತಿಯನ್ನು ತ್ಯಜಿಸಬೇಕು
ಮೇಲೆ ಹೇಳಿದ ಎಲ್ಲಾ ಸಾಲುಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ನಮ್ಮ ದೇಶ ಅಭಿವೃದ್ಧಿ ಹೊಂದುವುರಲ್ಲಿ ಸಂಶಯವಿಲ್ಲ. ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠಶಾಲೆಯಂತೆ ವಿದ್ಯಾರ್ಥಿಗಳಿಗೆ ತಮ್ಮ ಪೋಷಕರು ಬೇರೆ ವಿಷಯದ ಬಗ್ಗೆ ಒತ್ತಡ ಹೇರಬಾರದು. ತಮ್ಮ ಮಕ್ಕಳಿಗೆ ಇಷ್ಟ ಇರುವ ವಿಷಯದ ಬಗ್ಗೆ ಪ್ರೋತ್ಸಾಹ ಕೊಡಬೇಕು.
ವಿದ್ಯಾಥರ್ಿಗಳು ಅಳವಡಿಸಿಕೊಳ್ಳಬೇಕಾದ ನುಡಿಮುತ್ತುಗಳು:
* ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ||
ಮಹಾನ್ ವ್ಯಕ್ತಿಗಳು ಕಂಡ ಕನಸ್ಸನ್ನು ನನಸು ಮಾಡಲು ವಿದ್ಯಾರ್ಥಿಗಳು ಪ್ರಯತ್ನ ಮಾಡಬೇಕು. ಭವ್ಯ ಭಾರತದ ಅಭಿವೃದ್ದಿಗೆ ಪೂರಕವಾಗಿರಬೇಕು
- ಚೇತನ್.ಕೆ.ಎಸ್, ಚನ್ನರಾಯಪಟ್ಟಣ
POPULAR STORIES :
ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲು ಲೈಸೈನ್ಸ್ ಪಡೆಯಬೇಕಂತೆ..!!!
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,
ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!
ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?