ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮುಂದಿನ ಚುನಾವಣೆಗೆ ವರುಣಾದಿಂದ ಸ್ಪರ್ಧಿಸಿದ್ರೆ ಒಳಿತು ಎಂದು KPCC ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾತ್ನಾಡಿದ ಅವರು, ಸಿದ್ದರಾಮಯ್ಯ ಅವರು ಇಡೀ ರಾಜ್ಯ ಸುತ್ತಿ ಪ್ರಚಾರ ಕೈಗೊಳ್ಳಬೇಕಿದೆ. ಅವರು ವರುಣಾದಿಂದ ಸ್ಪರ್ಧಿಸಿದಾಗ ಗೆಲುವು ಸಾಧಿಸಿ ಮುಖ್ಯಮಂತ್ರಿ ಆದ್ರು. ಮುಂಬರುವ ಚುನಾವಣೆ ಕೊನೆ ಚುನಾವಣೆ ಆಗಿರೋದ್ರಿಂದ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು. ಜನವರಿ ಮೊದಲ ವಾರದಿಂದ ಕಾಂಗ್ರೆಸ್ ನಾಯಕರು ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ನಾನು ಬಯಸಿದ್ದೇನೆ. H.C.ಮಹದೇವಪ್ಪ ಕೂಡ ನಂಜನಗೂಡಿನಿಂದ ಕಣಕ್ಕೆ ಇಳಿಯಲು ಬಯಸಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ನಿಲುವಿಗೆ ನಾನು ಬದ್ಧನಾಗಿದ್ದೇನೆ. ಇನ್ನ ಮೇಲ್ವರ್ಗದ ಬಡವರಿಗೂ 10% ಮೀಸಲಾತಿ ನೀಡಿದ್ದು ಅವಾಸ್ತವಿಕತೆಯಿಂದ ಕೂಡಿದೆ. 4% ಜನಸಂಖ್ಯೆಯ ಮೇಲ್ವರ್ಗ ಸಮುದಾಯಕ್ಕೆ 10% ಮೀಸಲಾತಿ ನೀಡಲಾಗಿದ್ದು, ಇದರಿಂದ ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಲಿದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಮುಂದೇನು ಮಾಡಬೇಕೆಂದು ತೀರ್ಮಾನ ಮಾಡಲಾಗುವುದು ಎಂದು ಧ್ರುವನಾರಾಯಣ್ ತಿಳಿಸಿದ್ರು.