ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!

Date:

ಇದೊಂದು ಸಿಂಹ ಹಾಗೆ ಮನುಷ್ಯ ನಡುವೆ ಬೆಸದ ಭಾವಾತ್ಮಕ ಸಂಬಂಧದ ಸ್ಟೋರಿ.. ಯೂಟ್ಯೂಬ್ ನಲ್ಲಿ ದೊಡ್ಡದೊಂದು ಸೆನ್ಸೆಷನ್ ಕ್ರಿಯೇಟ್ ಮಾಡಿದ, ಕೋಟಿ ಕೋಟಿ ಹೃದಯಗಳನ್ನ ಕರಗಿಸಿದ ಕ್ರಿಶ್ಚಿಯನ್ ಹೆಸರಿನ ಸಿಂಹದ ರಿಯಲ್ ಕಥೆ.. ಇಬ್ಬರು ಸ್ನೇಹಿತರು ಕೊಂಡು ತಂದ ನೀವೂ ಊಹಿಸಲಾಗದ ಕಾಡಿನ ರಾಜ ಕಥೆ.. ಸ್ಟೋರಿಗೆ ಬರೋಣಾ…
ಲಂಡನ್ ಅಂದ್ರೆ ಫ್ಯಾಷನ್.. ಫ್ಯಾಷನ್ ಅಂದ್ರೆ ಲಂಡನ್.. ಇನ್ನೂ 1969ರ ಸಂದರ್ಭದಲ್ಲಿ ಯೂಥ್ ನ ಕಲ್ಚರ್ ಸೆಂಟರ್ ಅಂತಾ ಖ್ಯಾತಿಯನ್ನ ಪಡೆದ ನಾಡದು.. ಹೀಗಾಗೆ ಅಲ್ಲಿನ ಜನ ಲೈಫ್ ಸ್ಟೈಲ್ ಬಗ್ಗೆ ಹೆಚ್ಚು ತಲೆಕಡೆಸಿಕೊಳ್ತಾರೆ.. ಇನ್ನೂ 60 ದಶಕದಲ್ಲಿ ಇಲ್ಲಿ ಕಾಡು ಪ್ರಾಣಿಗಳನ್ನ ಮನೆಯಲ್ಲಿ ಸಾಕೋ ನಾಯಿ ಹಾಗೆ ಸಾಕೋಕೆ ಪರ್ಮಿಷನ್ ಇತ್ತು.. ಹೀಗಾಗೆ ಕಾಡಿನ ಅದೆಷ್ಟೋ ಪ್ರಾಣಿಗಳು ( ಚಿರತೆ, ಮೊಸಳೆ,ಸಿಂಹ,ಕರಡಿ) ಹಲವರ ಮನೆಯಲ್ಲಿ ಜಾಗವನ್ನ ಪಡೆದಿದ್ವು.. ಜೊತೆಗೆ ಇವ್ರ ಜೊತೆ ವಾಕಿಂಗ್ ಕೂಡ ಹೋಗ್ತಿದ್ವು ಅಂದ್ರೆ ನೀವ್ ನಂಬ್ಲೇಬೇಕು.. ಹೀಗಾಗೆ ಈ ಇಬ್ಬರು ಸ್ನೇಹಿತರು ಅಲ್ಲಿನ ಜೂಃ ಒಂದರಿಂದ ಮೂರು ತಿಂಗಳ ಕ್ರಿಶ್ಚಯನ್ ಹೆಸರಿನ ಸಿಂಹವನ್ನ ಹಣ ನೀಡಿ ಸಾಕೋಕೆ ತರ್ತಾರೆ.. ಜೊತೆಗೆ ತಾವೆಲ್ಲೆ ಹೋದ್ರು ಆ ಸಿಂಹವನ್ನ ಜೊತೆಯಲ್ಲಿ ಕರೆದುಕೊಂಡು ಹೋಗ್ತಿರ್ತಾರೆ..

real lions

3 ತಿಂಗಳನ ಮರಿಯಾಗಿದ್ರಿಂದ ಶ್ವಾನದ ಹಾಗೆ ಮನೆಯಲ್ಲಿ ಚೇಷ್ಟೆಯನ್ನ ಮಾಡ್ತಾ ಕ್ರಿಶ್ಚಿಯನ್ ಬೆಳೆಯೋಕೆ ಶುರು ಮಾಡ್ತಾನೆ.. ದಿನಗಳು ಕಳೆದ ಹಾಗೆ ಮರಿ ಸಿಂಹ ದೊಡ್ಡದಾಗುತ್ತೆ.. ದಿನಕ್ಕೆ 3 ಕೆಜಿ ಮಾಂಸ ಇದಕ್ಕೆ ಬೇಕಾಗುತ್ತೆ.. ಜೊತೆಗೆ ಇದ್ರ ಬೆಳವಣಿಗೆಗಾಗಿ ತಾವಿದ್ದ ಜಾಗಕ್ಕೆ ಹತ್ತಿರದ ಗಾರ್ಡನ್ನಲ್ಲಿ ಜಾಗ ಪಡೆದು ಅದಕ್ಕೆ ಆಟ ಆಡಿಸೋಕೆ ಶುರು ಮಾಡ್ತಾರೆ.. ಇನ್ನೂ ಸ್ವತಃ ಕಾಡಿನ ರಾಜನಾಗಿ ಮೆರೆಯ ಬೇಕಿದ್ದ ಈ ಸಿಂಹ, ಈ ಇಬ್ಬರು ಸ್ನೇಹಿತರನ್ನೆ ಅವಲಂಬಿಸಿ ಬಿಡುತ್ತೆ.. ಪುಟ್ಟ ಮಗುವಿನ ಹಾಗೆ ಈ ಇಬ್ಬರೊಂದಿಗೆ ಆಡಿಕೊಂಡು ಕಾಲ ಕಳೆಯುತ್ತಿರುತ್ತೆ.. ಆದ್ರೇ ಈ ಪ್ರೀತಿ ಹೆಚ್ಚು ದಿನ ಉಳಿಯೋದಿಲ್ಲ.. 8ತಿಂಗಳು ಕೆಳೆಯೋದ್ರೊಳಗೆ ಕ್ರಿಶ್ಚಿಯನ್ 70 ಕೆಜಿಯಾಗಿರ್ತಾನೆ.. ಮೊದಲೇ ಸಿಂಹಗಳು ಮಾಂಸಹಾರಿಯಾದ್ರಿಂದ ಜೊತೆಗೆ ಕ್ರಿಶ್ಚಿಯನ್ ದಿನಕಳೆದಂತೆ ದೊಡ್ಡದಾಗಿ ಬೆಳೆದಿದ್ರಿಂದ ಸುತ್ತಮುತ್ತಲಿನ ಜನಕ್ಕೆ ಭಯ ಶುರುವಾಗುತ್ತೆ.. ಫೈನಲ್ ಆಗಿ ಲಂಡನ್ ನಗರದಿಂದ ದೂರವಾಗೋ ಟೈಮ್ ಹತ್ತಿರ ಬರುತ್ತೆ,.. ಬಟ್ ಸಿಂಹವನ್ನ ಜೂಗೆ ಬಿಡೋಕೆ ಮನಸಿಲ್ಲದ ಈ ಇಬ್ಬರು ಆಫ್ರಿಕಾ ಕಾಡಿಗೆ ಬಿಟ್ಟುಬಿಡೋಕೆ ಮನಸು ಮಾಡ್ತಾರೆ.. ಇದಕ್ಕಾಗೆ ಕೀನ್ಯಾ ಸರ್ಕಾರಕ್ಕೆ ಮನವಿಯನ್ನ ಕೂಡ ಸಲ್ಲಿಸ್ತಾರೆ.. ಆದ್ರೆ ಅಲ್ಲಿನ ಸರ್ಕಾರದ ವಾದ ಲಂಡನ್ನಿಂದ ಸಿಂಹವೊಂದನ್ನ ನಮ್ಮ ಕಾಡಿಗೆ ತರೋ ಅವಶ್ಯಕತೆ ಆದ್ರೂ ಏನು ಅನ್ನೋದು.. ನಾಲ್ಕು ವಾರಗಳು ಕಳೆದ್ರು ಕೀನ್ಯಾ ಸರ್ಕಾರದಿಂದ ಯಾವುದೇ ಉತ್ತರ ಸಿಗೋದಿಲ್ಲ… ಇದೇ ಸಂದರ್ಭದಲ್ಲಿ ಕೀನ್ಯಾದಲ್ಲಿದ್ದ ಲಯನ್ ಎಕ್ಸ್ ಪರ್ಟ್ ಜಾರ್ಜ್ ಆಡಮ್ಸ್ ಎಂಬುವವರು ತಾನು ಕ್ರಿಶ್ಚಯನ್ಗೆ ಜಾಗ ನೀಡೋದಾಗಿ ಹೇಳ್ತಾರೆ.. ಆದ್ರೆ, ಅದಕ್ಕೂ ಕೀನ್ಯಾ ಸರ್ಕಾರದ ಅಪ್ಪಣೆ ಬೇಕಿರುತ್ತೆ.. ಇನ್ನೂ ತಾವೂ ಸಾಕಿ ಬೆಳೆಸಿದ ಸಿಂಹ ತಮ್ಮಿಂದ ದೂರವಾಗೋ ಟೈಮ್ ಹತ್ತಿರವಾಗ್ತಿದೆ ಅಂತಾ ಈ ಇಬ್ಬರು ತಮಗಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಹೆಚ್ಚು ಸಮಯ ಕ್ರಿಶ್ಚಿಯನ್ ಜೊತೆ ಕಳೆಯೋಕೆ ಶುರು ಮಾಡ್ತಾರೆ.. ಫೈನಲಿ ಮೂರು ತಿಂಗಳ ನಂತರ ಕೀನ್ಯಾ ಸರ್ಕಾರ ಕ್ರಿಶ್ಚಿಯನ್ನ ಕರೆಸಿಕೊಳ್ಳೊಕೆ ಅಪ್ಪಣೆ ನೀಡುತ್ತೆ…

images

ಪ್ರೀಯ ಓದುಗರೆ ನಿಜವಾದ ಸ್ಟೋರಿ ಶುರುವಾಗೋದೆ ಈಗ.. ಯಾಕಂದ್ರೆ ಲಂಡನ್ ಮನೆಯಲ್ಲಿ, ಹಾಸಿಗೆ ಮೇಲೆ ನಿದ್ದೆ ಮಾಡಿ, ಕಾರನಲ್ಲಿ ರೌಂಡ್ ಹೊಡೆದು, ಬೇಟೆಯಾಡದೆ ಊಟ ಮಾಡಿದ ಬೆಳದ ಕ್ರಿಶ್ಚಿಯನ್, ಈಗ ಕಾಡಿನಲ್ಲಿ ಇರಬೇಕಾದ ದಿನಗಳು ಹತ್ತಿರವಾಗಿವೆ.. ಅದಕ್ಕಿಂತ ಹೆಚ್ಚಾಗಿ ಬೇಟೆಯಾಡೋದು ಅಂದ್ರೇನೆ ಏನು ಅಂತಾ ಗೊತ್ತಿಲ್ಲದೆ ಅಂತಹ ದೊಡ್ಡ ಕಾಡಿನಲ್ಲಿ ಬದುಕುಳಿಯೋದಾದ್ರು ಹೇಗೆ ಅಲ್ವಾ..? ಫೈನಲಿ ಕ್ರಿಶ್ಚಿಯನ್ ಆ ದೊಡ್ಡ ಕಾಡಿಗೆ ಹೊಸ ಗೆಸ್ಟ್ ಆಗಿ ಆಗಮಿಸ್ತಾನೆ.. ಮೊದಲ ಬಾರಿಗೆ ಕಾಡಿಗೆ ಎಂಟ್ರಿ ಕೊಟ್ಟಾಗ ಆ ಕಾಡಿನ ರಾಜನಾಗಿದ್ದ ಸಿಂಹವೊಂದು ಕ್ರಿಶ್ಚಿಯನ್ ಮೇಲೆ ಎರಗಿ ಬೀಳುತ್ತೆ.. ತನನ್ನ ತಾನೂ ಪ್ರೊಟೆಕ್ಟ್ ಮಾಡಿಕೊಳ್ಳೊಕೆ ಗೊತ್ತಿಲ್ಲದ ಕ್ರಿಶ್ಚಯನ್ ಇದೇ ಮೊದಲ ಬಾರಿಗೆ ಮತ್ತೊಂದು ಪ್ರಾಣಿಯಿಂದ ಹಲ್ಲೆಗೆ ಒಳಗಾಗ್ತಾನೆ.. ಇಲ್ಲಿ ಗಮನಸಿಬೇಕಾದ ವಿಚಾರ ಅಂದ್ರೆ ಈ ಕಾಡಿನ ರಾಜನೇ ಕ್ರಿಶ್ಚಯನ್ಗೆ ಕಾಡಿನ ಜೀವನವನ್ನ ಕಲಿಸೋ ಕೊಡಬೇಕಾಗಿರುತ್ತೆ.. ಹೇಗಾದ್ರು ಲಂಡನ್ನಲ್ಲಿ ಬೆಳೆದ ಈ ಸಿಂಹವನ್ನ ಆ ಕಾಡಿನ ರಾಜ ಒಪ್ಪಿಕೊಳ್ಳಬೇಕಾದ ದಿನಕ್ಕಾಗಿ ಸ್ನೇಹಿತರು ಸೇರಿದಂತೆ ಸಿಂಹಗಳ ಬಗ್ಗೆ ಹೆಚ್ಚಾಗಿ ತಿಳಿದಿದ್ದ ಆಂಡಮ್ ಕಾಯ್ತ ಇರ್ತಾರೆ… ಕಾಲ ಕ್ರಮೇಣ ಕ್ರಿಶ್ಚಿಯನ್ ಹಾಗೆ ಆ ಕಾಡಿನ ರಾಜ ಜೊತೆಯಾಗ್ತಾರೆ,.. ನಂತರದಲ್ಲಿ ಸಾಕಿ ಬೆಳಸಿದ್ದ ಕ್ರಿಶ್ಚಯನ್ನನ್ನ ಕಾಡಿನಲ್ಲಿ ಬಿಟ್ಟು ಸ್ನೇಹಿತರು ವಾಪಾಸ್ ಲಂಡನ್ಗೆ ಹೋಗ್ತಾರೆ.. ಜಾರ್ಜ್ ಆಡಮ್ಸ್ ಕ್ರಿಶ್ಚಿಯನ್ ಬಗೆಗಿನ ಆಪ್ಡೇಟ್ ಗಳನ್ನ ಈ ಇಬ್ಬರು ಗೆಳೆಯರಿಗೆ ನೀಡ್ತಿರ್ತಾರೆ.. ಆ ನಂತರ ಕ್ರಿಶ್ಚಯನ್ ಲೈಫ್ ಮತ್ತೊಂದು ತಿರುವನ್ನ ಪಡೆಯುತ್ತೆ.. 8 ತಿಂಗಳ ಕಾಡಿನ ಜೀವನದ ಪಾಠವನ್ನ ಕಲಿಸಿದ್ದ ತನ್ನ ಗೆಳೆಯ ಕಾಡಿನ ರಾಜನಾಗಿದ್ದ ಸಿಂಹ ಜಾರ್ಜ್ ಆಡಮ್ಸ್ ನ ಬಳಿ ಕೆಲಸಕ್ಕಿದ್ದವನ ಮೇಲೆ ಅಟ್ಯಾಕ್ ಮಾಡಿ ಬಿಡುತ್ತೆ.. ಈ ಸಂದರ್ಭಲ್ಲಿ ಆತನನ್ನ ಉಳಿಸೋಕೆ ಕಾಡಿನ ರಾಜನಾಗಿದ್ದ ಸಿಂಹವನ್ನ ಕೊಲ್ಲಬೇಕಾಗುತ್ತೆ… ಕ್ರಿಶ್ಚಿಯನ್ ಮೊದಲಿಗೆ ತನ್ನ ಮಾಲೀಕರನ್ನ, ಈಗ ತನ್ನ ಸ್ನೇಹಿತನ್ನ ಕಳೆದುಕೊಂಡು ಮಂಕಾಗಿ ಬಿಡ್ತಾನೆ.. ಈ ವಿಷಯವನ್ನ ಈ ಇಬ್ಬರು ಸ್ನೇಹಿತರಿಗೆ ತಿಳಿಸಿ ಕೀನ್ಯಾಗೆ ಬರುವಂತೆ ಆಡಮ್ಸ್ ತಿಳಿಸ್ತಾರೆ.. ಕ್ರಿಶ್ಚಿಯನ್ ಈಗ ಕಾಡಿನ ಜೀವನಕ್ಕೆ ಹೊಂದುಕೊಂಡು ವರ್ಷವೆ ಕಳೆದು ಹೋಗಿದೆ.. ಹೀಗಿರೋವಾಗ ತನ್ನ ಮಾಲೀಕರನ್ನ ಗುರುತು ಹಿಡಿತಾನ..?
ಮನುಷ್ಯನಾಗಿದ್ರೆ ಅದು ಸಾಧ್ಯವಾಗ್ತಿರಲಿಲ್ಲ ಅನ್ನಿಸುತ್ತೆ.. ಯಾಕಂದ್ರೆ ಎದುರಲ್ಲೇ ಬಂದ್ರು ಗೊತ್ತಿದ್ದರು ಗೊತ್ತಿಲ್ಲದ ಹಾಗೆ ಹೋಗುವ ಜಾಯಮನ ಕೇವಲ ಮನುಷ್ಯರಲ್ಲಿ ಮಾತ್ರವಿರೋದು ಅನ್ನಿಸುತ್ತೆ.. ಅದು ಕಾಡಿನ ಕ್ರೂರ ಮೃಗಗಳಿಗೆ ಇಲ್ಲ ಅನ್ನೋದು ಇಲ್ಲಿ ಪ್ರೂವ್ ಆಗುತ್ತೆ.. ತನ್ನನ್ನ ಸಾಕಿದ ಮಾಲೀಕ ಹಾಗೆ ಈ ಸಿಂಹದ ವರ್ಷಗಳ ನಂತರದ ಭೇಟಿ ಸಿನಿಮಿಯಾ ರೀತಿ ಇತ್ತು ಅಂದ್ರೆ ತಪ್ಪಾಗಲ್ಲ ಬಿಡಿ.. ಯಾಕಂದ್ರೆ 100 ಮೀಟರ್ ದೂರ, 30 ರಿಂದ 40 ಅಡಿ ಎತ್ತರ ಗುಡ್ಡದ ಮೇಲಿನಿಂದ ಇಳಿದು ಬರ್ತಿರೋ ಕ್ರಿಶ್ಚಿಯನ್, ಎದುರಿಗೆ ಕೆಳಗೆ ಈ ಇಬ್ಬರು ಸ್ನೇಹಿತರು.. ಎಲ್ಲರಿಗೂ ಇವ್ರನ್ನ ಆತ ಗುರುತು ಹಿಡಿಯೋದಿಲ್ಲ ಅನ್ನೋ ಭಾವ.. ಅಷ್ಟೇ ಯಾಕೆ ಈ ಸ್ನೇಹಿತರಿಗೂ ಸಹ.. ಒಂದು ಕ್ಷಣ ಈ ಇಬ್ಬರನ್ನ ನೋಡಿ ತಾನು ನಿಂತ ಜಾಗದಲ್ಲೇ ನಿಂತ ಕ್ರಿಶ್ಚಿಯನ್ ಕ್ಷಣರ್ಧಾದಲ್ಲೆ ಓಡಿ ಬಂದು ಇಬ್ಬರ ಮೇಲೆ ಮೊದಲಿನ ಹಾಗೆ ಹಾರಿ ಅಪ್ಪಕೊಂಡು ಬಿಡ್ತಾನೆ.. ಆ ಕ್ಷಣ ಎಂತಹ ಕಲ್ಲು ಹೃದಯ ಕೂಡ ಕರಗಿಸಿ ನೀರಾಗಿಸಿ ಬಿಡುತ್ತೆ.. ಮಗುವಿನ ಹಾಗೆ ತನ್ನನ್ನ ಸಾಕಿದವರು ಬಳಿ ಅಪ್ಪಿ ಅವರನ್ನ ತನ್ನದೆ ಶೈಲಿಯಲ್ಲಿ ಕಾಡಿಗೆ ಬರಮಾಡಿ ಕೊಳ್ತಾನೆ..

lion story

ಈಗ ಕ್ರಿಶ್ಚಿಯನ್ ಮತ್ತೆ ಹೊಸದೊಂದು ಚೈತನ್ಯದೊಂದಿಗೆ ಓಡಾಡೋಕೆ ಶುರು ಮಾಡುತ್ತೆ.. ಕೆಲ ದಿನಗಳ ಕಾಲ ಕ್ರಿಶ್ಚಿಯನ್ ಜೊತೆಗೆ ಕಾಲ ಕಳೆದು ಆತ ಮೊದಲಿನ ಹಾಗೆ ಲವಲವಿಕೆಯಿಂದ ಇರೋದನ್ನ ಕಂಡು ಮತ್ತೆ ಈ ಇಬ್ಬರು ಸ್ನೇಹಿತರು ಲಂಡನ್ಗೆ ವಾಪಾಸ್ ಆಗ್ತಾರೆ… ಆದ್ರೆ ಕ್ರಿಶ್ಚಿಯನ್ ತಮನ್ನ ಗುರುತಿಸಿದ್ದು ಮಾತ್ರ ಈ ಇಬ್ಬರು ಸ್ನೇಹಿತರಿಗೆ ಮಹಾನಂದವನ್ನ ಉಂಟು ಮಾಡುತ್ತೆ.. ಜೊತೆಗೆ ಆತನ ನೆನಪು ಕೂಡ ಕಾಡೋಕೆ ಶುರು ಮಾಡುತ್ತೆ.. ಮತ್ತೆ ವರ್ಷಗಳ ಬಳಿಕ ಈ ಇಬ್ಬರು ಸ್ನೇಹಿತರು ಕ್ರಿಶ್ಚಿಯನ್ನನ್ನ ನೋಡೋಕೆ ಬರ್ತಾರೆ.. ಕಾಡು ಸೇರಿದ ಕ್ರಿಶ್ಚಿಯನ್ ಮೂರು ದಿನಗಳ ನಂತರ ಇವರಿಗೆ ದರ್ಶನವನ್ನ ನೀಡ್ತಾನೆ.. ನಿಜವಾದ ಕಾಡಿನ ರಾಜನೆ ಆಗಿ ಬದಲಾಗಿದ್ದ ಕ್ರಿಶ್ಚಿಯನ್ ದೊಡ್ಡ ಅತೀ ದೊಡ್ಡ ಸಿಂಹವಾಗಿ ಬೆಳೆದಿರ್ತಾನೆ..

lion

ಒಂದು ಕ್ಷಣ ಈ ಸ್ನೇಹಿತರಿ ಈತನನ್ನ ನೋಡಿ ಆಶ್ಚರ್ಯವೆ ಆಗುತ್ತೆ.. ವರ್ಷಗಳೇ ಉರುಳಿದರು ತನ್ನವರನ್ನ ಮತ್ತೆ ಗುರುತಿಸಿ ಅವರೊಂದಿಗೆ ಕೆಲದಿನ ಕಳೆದು ಮತ್ತೆ ಕಾಡಿಗೆ ಹೊರಟ ಕ್ರಿಶ್ಚಿಯನ್ ಕಾಡಿನಲ್ಲೇ ಕಣ್ಮರೆಯಾಗ್ತಾನೆ.. ಆನಂತರ ಅವನ ಬಗ್ಗೆ ಯಾವುದೇ ಅಪ್ಡೇಟ್ ಸಿಗೋದಿಲ್ಲ.. ಈ ಘಟನೆ ಇದು ನಡೆದಿದ್ದ 1972ರ ಸಮಯದಲ್ಲಿ.. 2006ಕ್ಕೆ ಈ ಕ್ರಿಶ್ಚಯನ್ನ ಜೊತೆಗಿನ ಓಡನಾಡದ ವೀಡಿಯೋವನ್ನ ಹಾಗೆ ಅವನು ತಮ್ಮನ್ನ ಗುರಿತಿಸದ ಆ ಕ್ಷಣದ ದೃಶ್ಯಗಳನ್ನ ಯೂಟ್ಯೂಬ್ನಲ್ಲಿ ಈ ಇಬ್ಬರು ಸ್ನೇಹಿತರು ಹಾಕ್ತಾರೆ.. ಇದೊಂದು ದೊಡ್ಡ ಸನ್ಸೇಷನ್ನ ಕ್ರಿಯೇಟ್ ಮಾಡಿಬಿಡುತ್ತೆ… ಈ ವೀಡಿಯೋವನ್ನ ಸಿಂಹಗಳಿಗೂ ಇಂತಹದೊಂದು ಗುಣವಿರುತ್ತಾ ಅನ್ನೋ ಚರ್ಚೆ ಶುರುವಾಗುತ್ತೆ.. ಅಷ್ಟೇ ಅಲ್ಲ ಕ್ರಿಶ್ಚಿಯನ್ನ ಬಗ್ಗೆ ಬುಕ್ ಕೂಡ ರಿಲೀಸ್ ಆಗುತ್ತೆ.. ಕ್ರಿಶ್ಚಯನ್ ಲೈಫ್ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತೆ.. ಪೇಪರ್ ಗಳಲ್ಲಿ, ನ್ಯೂಸ್ ಗಳಲ್ಲಿ ತನ್ನ ಮಾಲೀಕರಿಗೆ ಶರಣಾಗಿದ್ದ ಕ್ರಿಶ್ಚಿಯನ್ ಗುಣಗಾನವಾಗುತ್ತೆ.. ಏನೇ ಹೇಳಿ ಪ್ರಾಣಿಗಳನ್ನ ನೋಡಿ ಮನುಷ್ಯ ಕಲಿಬೇಕಿದೆ… ಒಡಹುಟ್ಟಿದವರೆ ಕೊಡಲಿ ಮಚ್ಚು ಹಿಡಿದು ಕೊಲೆ ಮಾಡೋ ಈ ಕಾಲದಲ್ಲಿ ಕ್ರಿಶ್ಚಿಯನ್ ಪ್ರೀತಿ, ಮಾನವನ ನಾನು ಅನ್ನೋ ಗುಣದ ಮುಂದೆ ಸಾವಿರ ಪಟ್ಟು ಮೇಲೆ ನಿಲ್ಲುತ್ತೆ ಅಲ್ವಾ..

  • ಅಶೋಕ

First Video 12,297,413+ Views :

A Lion Called Documentary Video :

POPULAR  STORIES :

ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ

ಬೇಸಿಗೆ ರ(ಸ) ಜೆ – ಮಕ್ಕಳಿಗೊ? ಪೋಷಕರಿಗೋ ?

ನಾಗರಹಾವಿಗೆ ಎರಡು ಕಾಲು..! ಜನರು ದಂಗುಬಡಿದು ಹೋದರು..!

ನಿಮ್ಮ ಮಗು ಬಳಿ ಸ್ಮಾರ್ಟ್ ಫೋನ್ ಇದೆಯಾ ಹುಷಾರ್..!!

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...