ಆತ ಅಣ್ಣನಿಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ. ಆದರೆ, ಆತನ ತ್ಯಾಗ ಫಲಿಸಲಿಲ್ಲ. ಆ ತಮ್ಮನ ಪ್ರಾಣತ್ಯಾಗ ಅಣ್ಣನ ಜೀವಕ್ಕೆ ಉಪಯೋಗಕ್ಕೆ ಬರಲಿಲ್ಲ…!
ಯಸ್, ಇಂಥಾ ಒಂದು ಘಟನೆಗೆ ಗುಜರಾತ್ ಸಾಕ್ಷಿಯಾಗಿದೆ.
ಗುಜರಾತ್ ನ ಪಾರ್ಡಿಯ ನಿವಾಸಿ ನೈತಿಕ್ ಕುಮಾರ್ ತಂಡೇಲ್ ಎಂಬ 19 ವರ್ಷದ ಯುವಕ ಅಣ್ಣನಿಗಾಗಿ ಆತ್ಮಹತ್ಯೆ ಮಾಡಿಕೊಂಡವ.
ವರ್ನಾಮದಲ್ಲಿರುವ ಬಬಾರಿಯಾ ತಾಂತ್ರಿಕ ಸಂಸ್ಥೆಯಲ್ಲಿ 2 ನೇ ವರ್ಷದ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ನೈತಿಕ್ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾಗಿದ್ದಾನೆ.
ಈತನ ಅಣ್ಣ ಕೇನಿಶ್ ನ ಕಿಡ್ನಿಗಳು ವಿಫಲವಾಗಿವೆ. ಕಳೆದ ಕೆಲವು ವರ್ಷಗಳಿಂದ ಡಯಾಲಿಸಿಸ್ ಮಾಡಲಾಗುತ್ತಿದೆ..ಆದ್ದರಿಂದ ಅಣ್ಣನಿಗೆ ತನ್ನ ಕಿಡ್ನಿ ಜೋಡಿಸುವಂತೆ ಹೇಳಿ ನೈತಿಕ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಸಾವಿಗೆ ಸಂಬಂಧಿಸಿದಂತೆ ಹೆತ್ತವರನ್ನು ಸೇರಿದಂತೆ ಯಾರನ್ನೂ ಪ್ರಶ್ನಿಸಬಾರದು. ನನ್ನ ಕಿಡ್ನಿಗಳನ್ನು ಅಣ್ಣನಿಗೆ ಜೋಡಿಸಬೇಕು ಎಂದು ನೈತಿಕ್ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ.
ಆದರೆ , ಈತನ ಮೃತದೇಹ ಪತ್ತೆಯಾಗುವಷ್ಟರಲ್ಲಿ ಕೊಳೆಯಲಾರಂಭಿಸಿದ್ದು , ದೇಹದ ಯಾವ ಭಾಗವು ಬಳಕೆಗೆ ಯೋಗ್ಯವಾಗಿಲ್ಲ. ಹೀಗಾಗಿ ಅಣ್ಣನಿಗಾಗಿ ತಮ್ಮ ಮಾಡಿದ ಪ್ರಾಣತ್ಯಾಗಕ್ಕೆ ನ್ಯಾಯ ಸಿಕ್ಕಿಲ್ಲ.