2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಇದೇ ವೇಳೆ ವಿವಿಧ ರಾಜ್ಯಗಳ ವಿಧಾನಸಭೆಗೂ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಚರ್ಚೆಗಳಾಗಿವೆ.
ಹೀಗೆ ಇಡೀ ದೇಶದಲ್ಲಿ ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ನಡೆದರೆ ಈಗಿರುವ ಇವಿಎಂಗಳು ಸಾಕಾಗಲ್ಲ…! ಹೀಗಂತ ಸ್ವತಃ ಚುನಾವಣಾ ಅಧಿಕಾರಿಗಳೇ ಹೇಳ್ತಿದ್ದಾರೆ. 2019ರಲ್ಲಿ ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭೆಗೆ ಚುನಾವಣೆ ನಡೆಸಬೇಕಾದರೆ 24 ಲಕ್ಷ ಇವಿಎಂಗಳು ಬೇಕಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಬೇಡಿಕೆಯನ್ನಿತ್ತಿದ್ದಾರೆ.

ಇತ್ತೀಚೆಗೆ ಕಾನೂನು ಆಯೋಗದೊಂದಿಗೆ ನಡೆದ ಚರ್ಚೆಯ ವೇಳೆ ಆಯೋಗದ ಅಧಿಕಾರಿಗಳು ಈ ಡಿಮ್ಯಾಂಡ್ ಮುಂದಿಟ್ಟಿದ್ದಾರೆ.
ಸದ್ಯ 12ಲಕ್ಷ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳಿದ್ದು, ಇನ್ನೂ 12 ಲಕ್ಷ ಇವಿಎಂ ಮತ್ತು ವಿವಿಪ್ಯಾಟ್ ಗಳು ಬೇಕಂತೆ. ಈ 12 ಲಕ್ಷ ಹೊಸ ಇವಿಎಂ , ವಿವಿಪ್ಯಾಟ್ ಖರೀದಿಗೆ ಸುಮಾರು 4,500ಕೋಟಿ ರೂ ಬೇಕಾಗಿದೆ.
2024ರಲ್ಲಿ ಮತ್ತೆ ಏಕಕಾಲದಲ್ಲಿ ಚುನಾವಣೆ ನಡೆದ್ರೆ , ಆಗ 15 ವರ್ಷ ಪೂರೈಸಿದ ಹಳೆಯ ಇವಿಎಂಗಳನ್ನು ಬದಲಿಸಬೇಕು. ಅದಕ್ಕೆ ಸುಮಾರು 1,700ಕೋಟಿ ರೂ ಬೇಕಾಗುತ್ತದೆ.