ಫೇಸ್ ಬುಕ್ ನಲ್ಲಿ ಸಿಕ್ಕವಳೇ… ಹೇಗಿದ್ದೀಯಾ..?!

Date:

ಅದೊಂದು ದಿನ ಸಂಜೆ ತಂಪಿನಲಿ ಏಕಾಂತದಲಿ ಕುಳಿತಿದ್ದೆ. ಏನೇನೋ ನೆನಪುಗಳು ನನ್ನ ಕಾಡ ತೊಡಗಿದ್ದವು, ಬದುಕು ಭಾರವಾಗಿತ್ತು, ಕಣ್ಣೀರು ನನಗೇ ತಿಳಿಯದೇ ಕೆನ್ನೆಗೆ ಮುತ್ತಿಕ್ಕುತ್ತಿತ್ತು. ಯಾರ ಬಳಿಯಲ್ಲಾದರು ನೋವನ್ನು ಹಂಚಿ ಕೊಳ್ಳಬೇಕೆಂದರೆ ಯಾರೂ ಯಾರೆಂದರೇ ಯಾರೂ ಇರಲಿಲ್ಲ. ಆಗ ನನ್ನ ನೋವಿಗೆ ಸ್ಪಂದಿಸಿದ್ದು ಫೇಸ್ ಬುಕ್ ಗೆಳತಿ ಸ್ಪಂದನಾ!
ಬಹಳಾ ದಿನಗಳ ನಂತರ ಫೇಸ್ ಬುಕ್ ಓಪನ್ ಮಾಡಿದೆ. ನನ್ನ ಕೆಲವೊಂದು ಬರಹಗಳನ್ನು ಅಪ್ ಲೋಡ್ ಮಾಡಿದೆ, ಸ್ನೇಹಿತರ ಜೊತೆಗೆ ಬೇರೆಯವರೂ ಸಹ ಅದನ್ನು ನೋಡುವಂತೆ ಪೋಸ್ಟ್ ಮಾಡಿದ್ದೆ. ಕ್ಷಣಾರ್ಧದಲ್ಲಿ ಅಪರಿಚಿತರೊಬ್ಬರಿಂದ ಫ್ರೆಂಡ್ ರಿಕ್ವೆಸ್ಟ್ ಬಂತು. ಇದು ಯಾರೂ? ಎಂದು ಯೋಚಿಸುತ್ತಿರುವಾಗಲೇ ಮಿಸ್ಟರ್ ಶಶಿಧರ್ ನನ್ನ ಫ್ರೆಂಡ್ ರಿಕ್ವೆಸ್ಟ್ ಗೆ ಸಮ್ಮತಿಸಿ. ನಿಮ್ಮ ಬರಹಗಳು ನನಗಿಷ್ಟ. ಕೆಲವು ವಿಷಯಗಳನ್ನು ನಿಮ್ಮೊಡನೆ ಮಾತನಾಡ ಬೇಕೆಂದು ಅನಿಸುತ್ತಿದೆ. ನೀವು ಲೇಖನಗಳ ಹೊರತಾಗಿ ಪೋಸ್ಟ್ ಮಾಡಿದ ಸ್ಟೇಟಸ್ ಗಳು ನೊಂದ ನಿಮ್ಮ ಅಳುವನ್ನು ಹೇಳುತ್ತಿವೆ ಎಂಬ ಸಂದೇಶವನ್ನು ಕಳುಹಿಸಿದರು. ನಾನು ತಕ್ಷಣ ಅವರ ಸ್ನೇಹಾಕಾಂಕ್ಷೆಗೆ ನೀರೆರೆದೆ..! ಅವಳೇ ನನ್ನ ಫೇಸ್ ಬುಕ್ ಗೆಳತಿ ಸ್ಪಂದನಾ..! ಅಲ್ಲಿಂದ ಆರಂಭವಾಯಿತು ಸಂದೇಶಗಳ ವಿನಿಮಯ. ಆ ಸಂದೇಶಗಳ ವಿನಿಮಯವೇ ನಮ್ಮಿಬ್ಬರ ನಡುವಿನ ಸ್ನೇಹವನ್ನು ಹುಟ್ಟುಹಾಕಿತು…!ಇಂದು ದಿನಾ ಮಾತನಾಡುತ್ತೇವೆ ದೂರವಾಣಿಯಲ್ಲಲ್ಲ ಫೇಸ್ ಬುಕ್ ನಲ್ಲಿ ಸಂದೇಶದ ಮೂಲಕ…!
ಸ್ಪಂದನಾ ಯಾರೆಂದು ನನಗೆ ಗೊತ್ತಿರಲಿಲ್ಲ, ಅವಳಿಗೂ ನಾನು ಅಪರಿಚಿತ. ಬರಹದಲ್ಲಿ ಆಸಕ್ತಿ ಇರುವ ಅವಳು ನನ್ನ ಬರಹವನ್ನು ಮೆಚ್ಚಿಕೊಂಡಿದ್ದಳು, ಬರುಬರುತ್ತಾ ಅವಳಾಡುವ ಮಾತುಗಳು ಮನದಲ್ಲಿ ಅಚ್ಚೊತ್ತತೊಡಗಿದವು…! ನನ್ನನ್ನು ನೇರವಾಗಿ ಅಲ್ಲದೇ ಹೋದರೂ ಫೇಸ್ಬುಕ್ನಲ್ಲಿ ಆಕೆ ನೋಡಿದ್ದಳು, ನನಗೆ ಎಷ್ಟೋದಿನಗಳ ತನಕ ಅವಳ ಮುಖ ದರ್ಶನ ಸಿಗಲಿಲ್ಲ. ಆಕೆ ತನ್ನ ಪ್ರೋಫೈಲ್ ಪಿಕ್ ನಲ್ಲಿ ಸಿನಿಮಾತಾರೆ ರಾಧಿಕಾ ಪಂಡಿತ್ ಫೋಟೋ ಹಾಕಿದ್ದಳು…! ಒಮ್ಮೆ ನಾನೇ ಕೇಳಿದೆ ಸ್ಪಂದನಾ ನಿಮ್ಮ ಫೋಟೋ ಹಾಕಿ ಎಂದು . ನನ್ನ ಬೇಡಿಕೆಯನ್ನು ಆಕೆ ತಿರಸ್ಕರಿಸಲಿಲ್ಲ. ಅವಳನ್ನು ಕಂಡಾಗ ದೇವಾಲೋಕದ ದೇವತೆಯೇ ಧರೆಗಿಳಿದು ಬಂದಿದ್ದಾಳೇನೋ ಅನಿಸಿ ಬಿಟ್ಟಿತು…! ಸ್ಪಂದನಾ ನೀಳ ಜಡೆಯ ನೀಲಾಂಭರಿ! ಸೀರೆಯನ್ನುಟ್ಟು ಮುಂಗುರುಳ ಸರಿಸುತ್ತಿದ್ದ ಛಾಯಚಿತ್ರವನ್ನು ಪೋಸ್ಟ್ ಮಾಡಿದ್ದಳು. ನಾ ಹೇಗಿದ್ದೇನೆಂದು ಪ್ರಶ್ನಿಸಿದಳು. “ಮೂಕವಿಸ್ಮಿತ”ನಾಗಿರುವೆನೆಂಬ ಉತ್ತರವನ್ನು ನೀಡಿದ್ದೆ…! ಅಲ್ಲಿಂದ ದಿನಕ್ಕೊಂದಾದರು ಹೊಸ ಹೊಸ ಫೋಟೋ ನನಗಾಗಿ ಅಪ್ ಲೋಡ್ ಮಾಡುತ್ತಾಳೆ…!
ಚಿಕ್ಕ ಚಿಕ್ಕ ವಿಷಯಕ್ಕೂ ಬೇಸರವಾಗುವ ನಾನು ಅವಳೊಡನೆ ಎಲ್ಲವನ್ನೂ ಹೇಳಿಕೊಳ್ಳುವೆ…! ಅವಳ ಮುತ್ತಿನಂತ ನುಡಿಗಳು ನನ್ನ ದುಃಖವನ್ನು ಮರೆಸುತ್ತವೆ…! ಇಷ್ಟೆಲ್ಲಾ ಇದ್ದರೂ ನಾವಿಬ್ಬರು ಒಂದೇ ಒಂದು ದಿನ ಮುಖತಹ ಬೇಟಿ ಆಗಿಲ್ಲ…! ಅಷ್ಟೇ ಏಕೆ ಮೊಬೈಲ್ ನಂಬರ್ ಕೂಡ ವಿನಿಮಯ ಮಾಡಿಕೊಂಡಿಲ್ಲ..! ಇವತ್ತಿಗೂ ಇಬ್ಬರು ವಾಟ್ಸಪ್ನಲ್ಲಿ ಚಾಟ್ ಮಾಡಲ್ಲ…! ಬರೀ ಫೇಸ್ ಬುಕ್ನಲ್ಲೇ..!
ಮೊನ್ನೆ ಮೊನ್ನೆ ಅವಳು ನಮ್ಮೂರು ಆಗುಂಬೆಗೆ ಬಂದಿದ್ದಳು. ಅಂದೂ ಸಹ ನೋಡಲಾಗಲೇ ಇಲ್ಲ. ನಾನು ಕೆಲವು ದಿನಗಳ ಹಿಂದೆ ಅವಳೂರು ಮಡಿಕೇರಿಗೆ ಹೋಗಿದ್ದೆ ಅವಳಿಗೆ ಸಿಗಲಿಲ್ಲ. ಏಕೆಂದರೆ ನಮ್ಮಿಬ್ಬರಿಗೂ ಇದೇ ಸ್ನೇಹ ಇಷ್ಟವಾಗಿದೆ. ಈ ಪರಿಚಯವೇ ಕೊನೆತನಕ ಇರಲಿ ಎಂಬ ಆಶಯ! ವಿಶಾಲವಾದ ಭೂಮಿಯಲ್ಲಿ ಫೇಸ್ಬುಕ್ ಎಂಬ ಕಡಲಿನಲ್ಲಿ ಪರಿಚಿತರಾದಂತೆಯೇ ಆಕಸ್ಮಿಕವಾಗಿ ನಾವುಗಳು ಸೇರುವಂಥಾಗಲಿ ಎಂಬ ಆಸೆಯೂ ನಮ್ಮೊಳಗಿದೆ..! ಕುಶಲವೇ ಕ್ಷೇಮವೇ ಸ್ಪಂದನಾ… ಹೇಗಿದ್ದೀಯಾ ? ಚಿಣಿ ಮಿಣಿ ಗುಬಾಲ್ಡು!

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಕನ್ನಡ ಸಿನಿಮಾ ಉದ್ದಾರ ಆಗಬೇಕಂದ್ರೆ…..!

ಈ ಫೋನ್‌ ಬುಕಿಂಗ್ ಮಾಡಿದರೆ 10 ವರುಷಗಳ ಬಳಿಕ ಡ್ರೋನ್ ಮೂಲಕ ಫೋನ್ ಡೆಲಿವರಿ ಅಂತೆ.!

ಮಂಗಳನಲ್ಲಿಗೆ ಮೂರೇ ದಿನಕ್ಕೆ ಹೋಗ್ಬಹುದು

ಬೆಂಗಳೂರಲ್ಲಿ ಕನ್ನಡ ಮಾತನಾಡೋರು 34% ಮಾತ್ರ..! ಕನ್ನಡ ಮಾಯವಾಗ್ತಿದೆ…ರಾಜಧಾನಿಯಲ್ಲಿ ಕನ್ನಡ ನಶಿಸಿ ಹೋಗ್ತಿದೆ..!

ತಣ್ಣಗಿದ್ದ ಬೆಂಗಳೂರು ಯಾಕೆ ಹೀಗೆ ಉರೀತಿದೆ..?! ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆ..!

 

Share post:

Subscribe

spot_imgspot_img

Popular

More like this
Related

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...