ಫೇಸ್ ಬುಕ್ ಮುಖ್ಯಸ್ಥ ಝುಕರ್ ಬರ್ಗ್ ರಾಜೀನಾಮೆಗೆ ಹೆಚ್ಚಿದೆ ಒತ್ತಡ..!! ಈ ಘಟನೆಗೆ ಕಾರಣವೇನು ಗೊತ್ತಾ..?
ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ ಬುಕ್ ವಿರುದ್ದ ಬಳಕೆದಾರರ ದತ್ತಾಂಶವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು.. ಇದಿಷ್ಟೇ ಅಲ್ಲದೆ ಇಂತಹ ಮತ್ತಷ್ಟು ಆರೋಪಗಳಿಗೆ ಒಳಗಾಗುತ್ತಿರುವುದನ್ನ ಮುಚ್ಚಿ ಹಾಕಲು ಸಂಸ್ಥೆಯೊಂದನ್ನ ನೇಮಿಸಿದ ಆರೋಪಕ್ಕೆ ಸಂಬಂಧ ಪಟ್ಟಂತೆ ಫೇಸ್ ಬುಕ್ ಸಿಇಓ ಹಾಗು ಸಂಸ್ಥಾಪಕ ಮಾರ್ಕ್ ಝಕರ್ ಬರ್ಗ್ ರಾಜೀನಾಮೆಗೆ ಒತ್ತಯ ಹೇರಲಾಗ್ತಿದೆ..
ತನ್ನ ಪ್ರತಿಸ್ಪರ್ಧಿಗಳ ಮೇಲೆ ಪಿತೂರಿ ಮಾಡಲು ಫೇಸ್ ಬುಕ್ ರಿಪಬ್ಲಿಕ್ ಪಕ್ಷಕ್ಕೆ ಸೇರಿದ ವ್ಯಕ್ತಿಯ ಒಡೆತನದ ರಾಜಕೀಯ ಸಲಹಾ ಮತ್ತು ಸಾರ್ವಜನಿಕ ಸಂಪರ್ಕ ಸಂಸ್ಥೆಯೊಂದನ್ನ ಹುಟ್ಟಿಹಾಕಿದೆ ಅಂತ ಅಲ್ಲಿನ ನ್ಯೂಯಾರ್ಕ್ ಟೈಮ್ಸ್ ವರಿ ಮಾಡಿದೆ.. ಹೀಗಾಗೆ ‘ಫೇಸ್ ಬುಕ್ ಕೇವಲ ಒಬ್ಬ ವ್ಯಕ್ತಿಗೆ ಸಂಬಂದ ಪಟ್ಟಿದಲ್ಲ, ಅದೊಂದು ಕಂಪನಿಯಾಗಿದ್ದು, ಅಧ್ಯಕ್ಷರು ಹಾಗೆ ಸಿಇಒ ಬೇರೆ ಬೇರೆಯಾಗಿರಬೇಕು ಅಂತ, ಅಮೆರಿಕದ ಸಂಸದ ಮತ್ತು ಫೇಸ್ ಬುಕ್ ಹೂಡಿಕೆದಾರರಾಗಿರುವ ಜೊನಾಸ್ ಕ್ರಾನ್, ಮಾರ್ಕ್ ಝಕರ್ ಬರ್ಗ್ ರಾಜೀನಾಮೆಗೆ ಒತ್ತಾಯಸಿದ್ದಾರೆ..
ಈ ಎಲ್ಲ ಅರೋಪಗಳು ಕೇಳಿ ಬರುತ್ತಿದಂತೆ ಫೇಸ್ ಬುಕ್ ಸಂಸ್ಥೆಯಿಂದಹೊರ ಬರಲು ಮಾರ್ಕ್ ನಿರ್ಧಾರ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ..