ಬಿಗ್ ಬಾಸ್ ಕನ್ನಡ ಕಿರುತೆರೆಯಲ್ಲಿ ದೊಡ್ಡ ರಿಯಾಲಿಟಿ ಶೋ. ಈ ಶೋನಲ್ಲಿ ಭಾಗವಹಿಸಿದವರಿಗೆ ಹೆಸರು ಹಾಗೂ ಖ್ಯಾತಿ ಎರಡು ತಂದು ಕೊಟ್ಟಿದೆ. ಇನ್ನು ಬಿಗ್ ಬಾಸ್ ಪಟ್ಟ ಗೆದ್ದವರಿಗೆ ಸಿನಿಮಾ ಆಫರ್ ಗಳು ಹುಡುಕಿಕೊಂಡು ಬರುವುದು ಸರ್ವೇಸಾಮಾನ್ಯ. ಹಾಗೆಯೇ ಈ ಬಾರಿ ಬಿಗ್ ಬಾಸ್ ಗೆದ್ದ ಮಾಡ್ರನ್ ರೈತನ ವಿಷಯದಲ್ಲೂ ಮುಂದುವರೆದಿದೆ.ಬಿಗ್ ಬಾಸ್ ಗೆದ್ದ ನಂತರ ಶಶಿ ಅವರಿಗೆ ಅಭಿಮಾನಿಗಳ ದಂಡೆ ಹುಟ್ಟಿಕೊಂಡಿದೆ. ಯುವಕರಿಗೆ ಮಾದರಿಯಾಗಿರುವ ಈ ಮಾಡ್ರನ್ ರೈತ ಸಕಲ ಕಾಲ ವಲ್ಲಭ. ಕೇವಲ ಕೃಷಿ ಕ್ಷೇತ್ರದಲ್ಲಿ ಮಾತ್ರವಲ್ಲದೆ ಜನಪದ ನೃತ್ಯ, ನಟನೆ ಎಲ್ಲದರಲ್ಲೂ ಮುಂದು. ಈ ಹಿಂದೆ ಕೆಲ ಧಾರಾವಾಹಿಯಲ್ಲಿ ಅಭಿನಯಿಸಿದರು. ಇದೀಗ ಶಶಿ ಅವರನ್ನು ಹುಡುಕಿಕೊಂಡು ಗಾಂಧಿನಗರದಿಂದ ಆಫರ್ ಬರುತ್ತಿವೆ.
ಹೀರೋ ಆಗಿ ನಟಿಸುವಂತೆ 3 ಸಿನಿಮಾಗಳಿಗೆ ಆಫರ್ ಬಂದಿದೆ ಅಂತೆ. ಉತ್ತಮ ಕಥೆಗಾಗಿ ಕಾಯುತ್ತಿದ್ದು, ಒಳ್ಳೆ ಕಥೆ ಬಂದರೆ ಸಿನಿಮಾ ಮಾಡುವುದಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇಷ್ಟೇ ಅಲ್ಲ ಕವಿತಾ ಹಾಗೂ ಶಶಿ ಇಬ್ಬರು ಒಂದೇ ಚಿತ್ರದಲ್ಲಿ ನಟಿಸಲು ಕೂಡ ಆಫರ್ ಬಂದಿದೆ. ಜೊತೆ ಬೇರೆ ಭಾಷೆಗಳಲ್ಲೂ ಶಶಿ ಅವರಿಗೆ ಆಫರ್ ಬರುತ್ತಿದೆ. ಮೊದಲ ಸಾಧ್ಯತೆ ಕೃಷಿ ಆಗಿದ್ದು, ಕೃಷಿ ಜೊತೆ ಸಿನಿಮಾನ್ನೂ ನಿಭಾಯಿಸಲು ತಿರ್ಮಾನಿಸಿದ್ದಾರೆ.
ಸಾಲು ಸಾಲು ಸಿನಿಮಾಗಳನ್ನು ಹೊತ್ತು ನಿಂತ ಮಾಡ್ರನ್ ರೈತ.
Date: