93 ವರ್ಷದ ಥಾಮಸ್, 88 ವರ್ಷದ ಮೇರಿಯ ಪ್ರೇಮಕಥೆ..! 70 ವರ್ಷದ ನಂತರ ಒಂದಾದ ಜೋಡಿಹಕ್ಕಿಗಳು..!

Date:

ಮೊದಲ ನೋಟದಲ್ಲಿ ಪ್ರೀತಿ ಹುಟ್ಟುತ್ತಂತೆ..?! ಮೊದಲ ಪ್ರೀತಿ ಸುಂದರ, ಶಾಶ್ವತವಂತೆ..! ಪ್ರೀತಿ ನಿಜವಾಗಿದ್ದರೆ ಒಂದಲ್ಲ ಒಂದು ದಿನ ಪ್ರೇಮಿಗಳು ಸೇರಿಯೇ ಸೇರ್ತಾರೆ..!? ಪ್ರೀತಿಗೆ ಸಾವಿಲ್ಲ ಅಂತೆಲ್ಲಾ ಪ್ರೀತಿ ಪುರಾಣದಲ್ಲಿ ಎಲ್ಲರೂ ಕೇಳಿದ್ದೇವೆ..! ಈ ಅಜ್ಜ-ಅಜ್ಜಿಯರ ಪ್ರೇಮ್ಕಹಾನಿಯನ್ನು ಕೇಳಿದ್ರೆ ನಾವು ಪ್ರೀತಿ ಬಗ್ಗೆ ಮೇಲೆ ಹೇಳಿರೋ ಮಾತೆಲ್ಲವೂ ಸತ್ಯ ಅನ್ನೋದು ಪಕ್ಕಾ ಆಗುತ್ತೆ..!
ಅದು ಅವರಿಬ್ಬರ ಹದಿಹರೆಯ..! ಅಂದು ಅವರ ನಡುವೆ ಪ್ರೀತಿ ಹುಟ್ಟಿತ್ತು..! ಆದರೆ ಅಂದು ಆ ಪ್ರೀತಿಯನ್ನ ಉಳಿಸಿಕೊಳ್ಳುವಲ್ಲಿ ಯುವ ಪ್ರೇಮಿಗಳು ಸೋತಿದ್ದರು..! ಆದರೆ ಮೊಮ್ಮಕ್ಕಳು, ಮರಿ ಮಕ್ಕಳನ್ನೂ ಕಂಡ, ಕಾಣುವ ಇಳಿ ವಯಸ್ಸಲ್ಲಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವಲ್ಲಿ ಇಬ್ಬರೂ ಗೆದ್ದಿದ್ದಾರೆ..!
ಇದು ನಾರ್ವುಡ್ ಥಾಮಸ್ ಮತ್ತು ಜಾಯ್ ಮೋರಿಸ್ ಅನ್ನೋ ಇಳಿ ವಯಸ್ಸಿನ ಪ್ರೇಮಿಗಳ ಲವ್ ಸ್ಟೋರಿ..! ಅದು ಎರಡನೇ ಮಹಾಯುದ್ಧದ ಸಂದರ್ಭ, 1945..! ಆಗಲೇ ಅಚಾನಕ್ ಆಗಿ ಒಮ್ಮೆ ಜಾಯ್ಸ್ ಮೋರಿಸ್ ಎಂಬ ಸುಂದರ ಯುವತಿಯ ಪರಿಚಯ ಆಗುತ್ತೆ..! ಲವ್ ಅಟ್ ಫಸ್ಟ್ ಸೈಟ್ ಅನ್ನೋ ಹಾಗೆ ಥಾಮಸ್ಗೆ ಮೋರಿಸ್ ಮೇಲೆ ಪ್ರೀತಿ ಹುಟ್ಟಿ ಬಿಡುತ್ತೆ..! ಪ್ರೀತಿ ಏನೋ ಹುಟ್ಟುತ್ತೆ..! ಆದರೆ ಆ ಪ್ರೀತಿಯನ್ನು ಉಳಿಸಿಕೊಳ್ಳೋಕೆ ಆಗಲ್ಲ..! ಯುದ್ಧದ ಒತ್ತಡ ಮೊದಲಾದ ಕಾರಣದಿಂದಾಗಿ ಥಾಮಸ್ ಹಾಗೂ ಮೋರಿಸ್ ಅನಿವಾರ್ಯವಾಗಿ ದೂರವಾಗ್ತಾರೆ..! ಮತ್ತೆ ಎಂದೂ ಇಲ್ಲಿತನಕ ಅವರಿಬ್ಬರೂ ಒಂದಾಗಲೇ ಇಲ್ಲ..! ಆದರೀಗ 70 ವರ್ಷದ ನಂತರ ಮೋರಿಸ್ ಗೆ ಮೊದಲ ಪ್ರೀತಿ ತುಂಬಾ ಕಾಡ್ತಾ ಇರುತ್ತೆ..! ವಯೋಸಹಜ ದೃಷ್ಟಿ ಸಮಸ್ಯೆಯನ್ನು ಅನುಭವಿಸ್ತಾ ಇರೋ ಜಾಯ್ಸ್ ಮೋರಿಸ್ ಆಸ್ಟ್ರೇಲಿಯಾದ ಯಾವುದೋ ಮೂಲೆಯಲ್ಲಿ ತನ್ನ ಮಗನೊಂದಿಗೆ ವಾಸ ಮಾಡ್ತಾ ಇದ್ದಾರೆ..! ಈ ವಿ‍ಷಯವನ್ನು ತನ್ನ ಮಗನಿಗೆ ಹೇಳಿ, ಈಗಿನ ಸೋಷಿಯಲ್ ಮೀಡಿಯಾ ಉಪಯೋಗಿಸಿಕೊಂಡು ತನ್ನ ಪ್ರಿಯತಮ ಬದುಕಿದ್ದಾನ, ಎಲ್ಲಿದ್ದಾನೆ, ಹೇಗಿದ್ದಾನೆ ಹುಡುಕು ಅಂತ ಕೇಳಿಕೋಳ್ತಾಳೆ, ನಂತರ ಇವರ ಪ್ರೇಮ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತೆ..! ಈ ಸ್ಟೋರಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತೆ, ಪ್ರೇಮಿಗಳನ್ನು ಒಂದು ಮಾಡೋಕೆ ಅನೇಕರು ಮುಂದಾಗ್ತಾರೆ..! ಆನ್ ಲೈನ್ ನಲ್ಲಿ ಒಂದು ದೊಡ್ಡ ಕ್ಯಾಂಪೈನ್ ನಡೆದು ಬಿಡುತ್ತೆ..! ಆನ್ ಲೈನ್ ಮೂಲಕವೇ ಇವರನ್ನು ಒಂದು ಮಾಡೋಕೆ ಹಣ ಸಂಗ್ರಹ ಕಾರ್ಯವೂ ನಡೆಯುತ್ತೆ..! ಸರಿ ಸುಮಾರು 300ಕ್ಕೂ ಹೆಚ್ಚಿನ ಜನ ಹಣ ನೀಡ್ತಾರೆ..! 7500 ಡಾಲರ್ ಗಿಂತಲೂ ಹೆಚ್ಚಿನ ಹಣ ಸಂಗ್ರಹ ಆಗುತ್ತೆ..! ಹೀಗೆ ಸಂಗ್ರಹವಾದ ಹಣ ಮತ್ತು ಸೋಶಿಯಲ್ ನೆಟ್ ವರ್ಕ್ ಬಳಸಿ ಅವಳ ಪ್ರಿಯತಮ ಥಾಮಸ್ ಎಲ್ಲಿದ್ದಾರೆ ಹುಡುಕಲಾಗುತ್ತೆ..! 93 ವರ್ಷದ ಥಾಮಸ್ ವರ್ಜಿನಿಯಾ ಬೀಚ್ ನಲ್ಲಿ ಇಳಿ ಸಂಜೆಯನ್ನು ಕಳೀತಾ ಇದ್ದಾರೆ ಅಂತ ಗೊತ್ತಾಗುತ್ತೆ..!

ಕೊನೆಗೂ ಅವರಿಬ್ಬರನ್ನು ಸ್ಕೈಪ್ ಮೂಲಕ ಭೇಟಿ ಮಾಡಿಸಲಾಗುತ್ತೆ..! ಸುಮಾರು 70 ವರ್ಷಗಳ ನಂತರ 93 ವರ್ಷದ ಥಾಮಸ್, 88 ವರ್ಷದ ತನ್ನ ಪ್ರಿಯತಮೆ ಮೋರಿಸ್ ಜೊತೆ ಸ್ಕೈಪ್ ಮೂಲಕ ಗಂಟೆ ಗಟ್ಟಲೆ ಮಾತಾಡಿದ್ದಾರೆ..! ಹದಿ ಹರೆಯದ ಪ್ರೇಮಿಗಳಂತೆ ಲಲ್ಲೆ ಹೊಡೆದಿದ್ದಾರೆ..! ನಕ್ಕಿದ್ದಾರೆ..! ಫುಲ್ ಬಿಂದಾಸ್ ಆಗಿ ಕಾಲ ಕಳೆದಿದ್ದಾರೆ..! ಈ ಬಾರಿಯ ಪ್ರೇಮಿಗಳ ದಿನದಂದು (ಫೆ.14) ಇಬ್ಬರೂ ಸೇರಲಿದ್ದಾರೆ..! ಇವರಿಬ್ಬರಿಗಾಗಿಯೇ ನ್ಯೂಜಿಲೆಂಡ್ ಏರ್ಲೈನ್ಸ್ ಉಚಿತ ಸೇವೆಯನ್ನೂ ನೀಡ್ತಾ ಇದೆಯಂತೆ..! ಸದ್ಯ ಅಜ್ಜ-ಅಜ್ಜಿ ಚಾಟಿಂಗ್ ನಲ್ಲಿ ಬ್ಯುಸಿ ಇದ್ದಾರಂತೆ..! ಫೆ.14ಕ್ಕಾಗಿ ತುದಿ ಕಾಲಲಲ್ಲಿ ನಿಂತಿದ್ದಾರೆ..! ಇಳಿವಯಸ್ಸಿನ ಯುವ ಪ್ರೇಮಿಗಳಿಗೆ ಒಳ್ಳೇದಾಗಲಿ. ಪ್ರೀತಿ ಶಾಶ್ವತ ಅನ್ನೋದು, ನಿಜವಾದ ಪ್ರೀತಿಗೆ ಸಾವಿಲ್ಲ ಅನ್ನೋದು ಇದಕ್ಕೇ ಇರ್ಬೇಕು..?!

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

114 ಸ್ವೀಪರ್ ಹುದ್ದೆಗೆ 19000 ಎಂಬಿಎ, ಇಂಜಿನಿಯರ್ ವಿದ್ಯಾರ್ಥಿಗಳಿಂದ ಅರ್ಜಿ..!

ಗೂಗಲ್ ಜೊತೆ ಕೇಂದ್ರ ಸರ್ಕಾರದ ಒಪ್ಪಂದ ಇಂದಿನಿಂದ ರೈಲು ನಿಲ್ದಾಣಗಳಲ್ಲಿ ಫ್ರೀ ವೈಫೈ..!

ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!

ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!

ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...