ಫಸ್ಟ್ ನೈಟಲ್ಲಿ ತಾನು ಗಂಡಸೇ ಅಲ್ಲ… ನಪುಸಂಕ ಎಂದ ಗಂಡ..! ಈ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ ಹೆಂಡ್ತಿಯ ಮೇಲೆ ವಿಕೃತಿ ಮೆರೆದ. ಈ ಆಸಾಮಿಯ ಪುರುಷತ್ವ ಪರೀಕ್ಷೆ ಇಂದು ನಡೆಯಲಿದೆ…!
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗಂಗಾಧರ ನೆಲ್ಲೂರು ಮಂಡಲದ ಮೋತರಂಗನಪಲ್ಲಿಯ ರಾಜೇಶ್ ಫಸ್ಟ್ ನೈಟ್ ನಲ್ಲಿ ಹೆಂಡ್ತಿಗೆ ಚಿತ್ರಹಿಂಸೆ ನೀಡಿದ ದುಷ್ಟ. ಈತ ಶಿಕ್ಷಕ. ಇವನಿಗೆ ಡಿಸೆಂಬರ್ 1ರಂದು ಎಂಬಿಎ ವಿದ್ಯಾರ್ಥಿನಿ ಶೈಲಜಾ ಎಂಬುವವರೊಂದಿಗೆ ಮದುವೆ ಆಗಿತ್ತು. ಮದುವೆಯ ನಂತರ ನವಜೋಡಿ ಕನಿಪಾಕಂನಲ್ಲಿ ಪೂಜೆ ಸಲ್ಲಿಸಲು ಹೋಗಿದ್ರು. ಮದುವೆ ನಿಶ್ಚಯ ಆದಲ್ಲಿಂದ ಮೊದಲ ರಾತ್ರಿಗೆ ಇಬ್ಬರು ರೂಂ ಸೇರೋ ತನಕ ಎಲ್ಲವೂ ಸರಿಯಿತ್ತು. ಆದ್ರೆ, ಫಸ್ಟ್ ನೈಟ್‍ನಲ್ಲಿ ತನ್ನ ವೈಯಕ್ತಿಕ ವಿಚಾರಗಳನ್ನು ಮಾತನಾಡಿದ ಪತಿ ರಾಜೇಶ್ ತಾನೊಬ್ಬ ನಪುಂಸಕ, ಪುರುಷತ್ವ ಇಲ್ಲ. ಇದನ್ನು ಯಾರಿಗೂ ಹೇಳಬೇಡ ಎಂದು ಬೆದರಿಸಿದ್ದ. ಆದ್ರೆ ಶೈಲಜಾ ಇದನ್ನು ತನ್ನ ಪೋಷಕರಿಗೆ ಹೇಳಿದ್ದಾಳೆ. ತನ್ನ ಮರ್ಯಾದೆ ಹೋಯ್ತು ಅಂತ ರಾಜೇಶ್ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ…! ದೇಹವಿಡೀ ಕಚ್ಚಿ ಗಾಯಗೊಳಿಸಿ ವಿಕೃತಿ ಮೆರೆದಿದ್ದಾನೆ. ಇವನು ನೀಡಿದ ಹಿಂಸೆಗೆ ಮುದ್ದಾದ ಯುವತಿಯ ಮುಖ ಗುರುತೇ ಸಿಗದಂತೆ ಊದಿಕೊಂಡು ವಿಕಾರವಾಗಿದೆ…! ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿ, ಕೋರ್ಟ್‍ಗೆ ಹಾಜರು ಪಡಿಸಿದ್ದರು. ಇದೀಗ ಕೋರ್ಟ್ ಪುರುಷತ್ವ ಪರೀಕ್ಷೆಗೆ ಆದೇಶಿಸಿದೆ.