ಜನವರಿಯಿಂದ ಜಿಯೋ ಫ್ರೀ ಇಂಟರ್‍ನೆಟ್ ಕ್ಯಾನ್ಸಲ್..?!!

Date:

ಜಿಯೋ ಸಿಮ್ ಬಂದ ನಂತ್ರ ದೇಶದ ಇತರೆ ಟೆಲಿಕಾಂ ವಲಯಗಳಿಗೆ ಭಾರಿ ಪೆಟ್ಟು ಬಿದ್ದಿರೋದು ಹಳೇ ಸಂಗತಿ. ಇದೇ ವೇಳೆ ಜಿಯೋ ವೆಲ್‍ಕಂ ಆಫರ್ ಡಿಸೆಂಬರ್ ಕೊನೆಯ ಬದಲಿಗೆ ಮಾರ್ಚ್ 30ರವರೆಗೆ ವಿಸ್ತರಣೆ ಮಾಡಿದಾಗಂತೂ ಏರ್‍ಟೆಲ್ ವೊಡಾಫೋನ್ ಸೇರಿದಂತೆ ಎಲ್ಲಾ ಸಂಸ್ಥೆಗಳು ಜಿಯೋ ಆಫರ್ ವಿರುದ್ದ ಧನಿ ಎತ್ತಿದೆ. ಅದ್ರಲ್ಲಿ ಪ್ರಮುಖವಾಗಿ ಭಾರತದ ನಂ.1 ನೆಟ್‍ವರ್ಕ್ ಆದ ಭಾರತಿ ಏರ್‍ಟೆಲ್ ಸಂಸ್ಥೆ ಜಿಯೋ ವಿರುದ್ದ ಕಾನೂನಾತ್ಮಕ ಹೋರಾಟ ನಡೆಸಲು ನಿರ್ಧರಿಸಿದೆ. ಇವರ ಹೇಳಿಕೆ ಪ್ರಕಾರ ಯಾವುದೇ ನೆಟ್ವರ್ಕ್ ಸಂಸ್ಥೆ 90 ದಿನಗಳ ಕಾಲ ಮಾತ್ರ ಉಚಿತ ಸೇವೆ ನೀಡ್ಬೇಕು. ಅದಕ್ಕಿಂತ ಹೆಚ್ಚಿನ ದಿನ ಉಚಿತ ಸೇವೆಗಳನ್ನು ನೀಡುವ ಹಾಗಿಲ್ಲ. ಇದು ಟ್ರಾಯ್ ನಿಯಮವೂ ಕೂಡ ಹೌದು. ವಿಪರ್ಯಾಸ ಅಂದ್ರೆ ಜಿಯೋ ಉಚಿತ ಆಫರ್ ವಿಸ್ತರಣೆ ಮಾಡಿದಾಗಲೂ ಟ್ರಾಯ್ ಸಂಸ್ಥೆ ಇದರ ವಿರುದ್ದ ಕ್ರಮ ಕೈಗೊಳ್ಳಲಿಲ್ಲ. ಜಿಯೋ ಮುಂದೆ ಟ್ರಾಯ್ ಮೂಕ ಪ್ರೇಕ್ಷಕವಾಗಿದೆ ಎಂದು ಏರ್‍ಟೆಲ್ ಆರೋಪಿಸಿದೆ..!

ಈ ಹಿನ್ನಲೆಯಲ್ಲಿ ಏರ್‍ಟೆಲ್ ಟೆಲಿಕಾಂ ಮೇಲ್ಮನವಿ ನ್ಯಾಯಮಂಡಳಿಗೆ ದೂರು ಸಲ್ಲಿಸಿದ್ದು, ಎಲ್ಲರಿಗೂ ಏಕ ರೀತಿ ನ್ಯಾಯ ಒದಗಿಸಬೇಕಾದ ಟ್ರಾಯ್ ಈಗ ಜಿಯೋಗೆ ಸಹಕಾರ ನೀಡ್ತಾ ಇದೆ. ಅಲ್ಲದೆ ಜಿಯೋ ಟ್ಯಾರಿಫ್ ಪ್ಲಾನ್‍ಗಳಲ್ಲಿ ತಾವೂ ಕೂಡ ಸಹಭಾಗಿತ್ವ ಹೊಂದಿದೆ ಎಂದು ಆರೋಪ ಮಾಡಿದೆ. 90 ದಿನಗಳ ನಂತರ ಯಾವುದೇ ಟೆಲಿಕಾಂ ಸಂಸ್ಥೆ ಉಚಿತ ಸೇವೆ ನೀಡುವ ಹಾಗಿಲ್ಲ.

ಹೀಗಿರುವಾಗ ಟ್ರಾಯ್ ಜಿಯೋಗೆ ಉಚಿತ ಸೇವೆ ವಿಸ್ತರೆಣೆಯ ಅಧಿಕಾರ ಹೇಗೆ ನೀಡಿದೆ ಎಂದು ಏರ್‍ಟೆಲ್ ಪ್ರಶ್ನೆ ಹಾಕಿದೆ. ಜಿಯೋ ಆಫರ್‍ನಿಂದ ಎಲ್ಲಾ ಟೆಲಿಕಾಂ ವಲಯಗಳು ಕೋಟಿ ಕೋಟಿ ನಷ್ಟ ಅನುಭವಿಸಿದೆ. ಇದು ಹೀಗೆ ಮುಂದುವರೆದರೆ ಟೆಲಿಕಾಂ ಸಂಸ್ಥೆಗೆ ಭಾರಿ ನಷ್ಟವಾಗಲಿದೆ ಎಂದು ತಿಳಿಸಿದೆ. ಇನ್ನು ಏರ್‍ಟೆಲ್‍ನ ಆರೋಪವನ್ನು ಪರಿಶೀಲನೆ ನಡೆಸಿರುವ ಟೆಲಿಕಾಂ ಮೇಲ್ಮನವಿ ನ್ಯಾಯಮಂಡಳಿ ಮುಂದಿನ ಆದೇಶದವರೆಗೆ ತಳ್ಳಿ ಹಾಕಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬ್ಯಾಂಕ್ ಜೊತೆ ಬ್ಯುಸಿನೆಸ್ ಮಾಡಲು ಅವಕಾಶ, ಪ್ರತಿ ತಿಂಗಳು 30,000 ತನಕ ಆದಾಯ

ಉತ್ತರ ಕೊರಿಯಾದಲ್ಲಿ ಕ್ರಿಸ್ಮಸ್ ಆಚರಿಸುವಂತಿಲ್ಲ..! ಅದರ ಬದಲು ಏನು ಮಾಡ್ಬೇಕು ಗೊತ್ತಾ..?

ಶಮಿ ಪತ್ನಿಯ ಡ್ರೆಸ್ ಬಗ್ಗೆ ಟೀಕೆ, ಟೀಕಾಕಾರರಿಗೆ ನಾಚಿಕೆಯಾಗಬೇಕು : ಮಹಮ್ಮದ್ ಕೈಫ್

ಬೇನಾಮಿ ಆಸ್ತಿ ಹೊಂದಿರುವರ ಮೇಲಿದೆ ಮೋದಿಯ ಹದ್ದಿನ ಕಣ್ಣು..!

ಆಧಾರ್ ಪೇಮೆಂಟ್ ಆ್ಯಪ್ ಬಳಸೋದಾದ್ರೂ ಹೇಗೆ..?

ಎಚ್ಚರ..! ಚೆಕ್ ಬೌನ್ಸ್ ಆದ್ರೆ ಅದು ಜಾಮೀನು ರಹಿತ ಅಪರಾಧ..!

ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...