ನಿಮ್ಮಿಬ್ಬರದ್ದು ಫ್ರೆಂಡ್ಶಿಪ್ಪಾ, ಲವ್ವಾ?
ನೀವು ಮತ್ತು ಅವಳು/ ಅವನು ಫ್ರೆಂಡ್ಸ್ ಅಂತ ಅನ್ಕೊಂಡಿರ್ತೀರಿ…! ಎಲ್ಲರತ್ರನೂ ನಾವಿಬ್ಬರು ಫ್ರೆಂಡ್ಸ್ ಅಂತ ಹೇಳಿಕೊಂಡಿರ್ತೀರಿ…! ನೀವು ಒಳ್ಳೆಯ ಫ್ರೆಂಡ್ಸೇ ಆಗಿರಬಹುದು..! ಆದರೆ, ನಿಮ್ಮಿಬ್ಬರ ನಡುವೆ ಇಂಥಾ ಭಾವನೆಗಳು ಮೂಡುತ್ತಿದ್ದರೆ, ನಿಮ್ಮಿಬ್ಬರ ಯೋಚನೆಗಳು ಹೀಗಿದ್ದರೆ ನೀವು ಖಂಡಿತಾ ಫ್ರೆಂಡ್ಸ್ ಅಲ್ಲ…! ಪ್ರೇಮಿಗಳು.
ಅವನು/ಳು ನನ್ನ ಫ್ರೆಂಡ್ ಅಂತ ನೀವು ಹೇಳ್ತಿರ್ತೀರಿ, ಅವ್ರೂ ಕೂಡ ಅದೇರೀತಿ ಹೇಳ್ತಿರ್ತಾರೆ..! ಆದ್ರೆ ಈ ಮಾತಿಂದ ಏನನ್ನೂ ನಂಬಕ್ಕಾಗಲ್ಲ..! ನಿಮ್ಮ ವರ್ತನೆ ನೋಡಿ ಬೇರೆಯವರು ನಿಮ್ಮ ನಡುವೆ ಏನೋ ನಡೀತಾ ಇದೆ ಅಂತ ಮಾತಾಡ್ಕೊಳ್ತಾ ಇದ್ರೆ? ನೀವಿಬ್ರು ಬರೀ ಫ್ರೆಂಡ್ಸ್ ಅಲ್ಲ, ಪ್ರೇಮಿಗಳು ಅನ್ನೋದು ಕನ್ಫರ್ಮ್..! ಆದಷ್ಟು ಬೇಗ ಪ್ರೀತಿ ನಿವೇಧಿಸಿಕೊಳ್ಳಿ..! ನೀವು ಕೇವಲ ಫ್ರೆಂಡ್ಸ್ ರೀತಿ ಇದ್ರೆ ನಿಮ್ಮ ಬಗ್ಗೆ ಯಾರಿಗೂ ಅಂಥಾ ಅನುಮಾನ ಬರೋಕೆ ಸಾಧ್ಯವೇ ಇಲ್ಲ…!
ನಿಮಗೆ ನಿಮ್ಮ ಆ ಫ್ರೆಂಡ್ ಮನೆಗೆ ಹೋಗ್ಬೇಕು..! ಅವರ ಮನೆಯವರ ಪರಿಚಯ ಮಾಡಿಕೊಳ್ಬೇಕು ಅಂತ ಅನಿಸ್ತಿದ್ರೆ ನಿಮ್ಮಲ್ಲಿ ಅವರ ಬಗ್ಗೆ ಸ್ನೇಹ ಮರೆಯಾಗಿ ಪ್ರೀತಿ ಮೊಳಕೆಯೊಡೆದಿದೆ ಎಂದೇ ಅರ್ಥ…!
ನಿಮ್ಮ ಫ್ರೆಂಡ್ಸ್ ಎನಿಸಿಕೊಂಡ ಅವನು ಅಥವಾ ಅವಳು ಏನೇ ಕೆಲಸ ಮಾಡಿದ್ರೂ ಅದರಲ್ಲಿ ಅವರಿಗೆ ಯಶಸ್ಸು ಸಿಗಬೇಕು ಅಂತ ನೀವು ಕಾಯ್ತಾ ಇದ್ದೀರ..? ಸದಾ ನಿಮ್ಮ ಯೋಚನೆ ಬಿಟ್ಟು ಅವರ ಯೋಚನೆ ನಿಮ್ಮದಾಗಿದೆಯೇ..? ಅವರು ಎಲ್ಲರಿಂದಲೂ ಹೊಗಳಿಸಿಕೊಳ್ತಿರಬೇಕು, ಯಾವತ್ತೂ ಅವರಿಗೆ ಕಷ್ಟ ಬರಬಾರದು ಎಂದು ವಿಶೇಷ ಕಾಳಜಿ ನಿಮಗಿದೆಯೇ? ಹಾಗಾದ್ರೆ ಡೌಟೇ ಬೇಡ ಕಣ್ರೀ ನಿಮ್ಮಲ್ಲಿರುವುದು ಸ್ನೇಹವಲ್ಲ ಪ್ರೀತಿ.
ಅವರಿಗಾಗಿ ನೀವು ನಿಮ್ಮನ್ನು ಬದಲಾಯಿಸಿಕೊಳ್ಳೋಕೆ ಸಿದ್ಧರಿದ್ದೀರ..? ಅವರ ಗಮನ ಬೇರೆಯವರ ಕಡೆ ಹೋಗ್ತಿದೆ ಅಂತ ಅನಿಸಿದಾಗ ನಿಮಗೆ ಕೋಪ ಬರುತ್ತಾ..? ನಿಮ್ಮ ಜೀವನದ ಎಲ್ಲಾ ವಿಷಯಗಳನ್ನು ಅವರ ಜೊತೆ ಹಂಚಿಕೊಳ್ತಾ ಇದ್ದೀರಾ? ಹಾಗಾದ್ರೆ ಲವ್ ಆಗಿರೋದು ಕನ್ಫರ್ಮ್…!
ಹೀಗೆಲ್ಲಾ ಆಗ್ತಿದೆಯಾ…? ಒಮ್ಮೆ ಆ ನಿಮ್ಮ ಫ್ರೆಂಡ್‍ಗೂ ಇದನ್ನು ಶೇರ್ ಮಾಡಿ..ಯಾವುದಕ್ಕೂ ಆದಷ್ಟು ಬೇಗ ಪ್ರಪೋಸ್ ಮಾಡಿ… ಒಳ್ಳೇದಾಗ್ಲಿ.