ಶ್ವಾನವೊಂದು ಗ್ರಹಣ ಆಚರಿಸಿದೆ. ಗರಿಕೆ ತಂದು , ತಿಂದು ಗ್ರಹಣ ಆಚರಿಸಿದ ಶ್ವಾನದ ವೀಡಿಯೋ ವೈರಲ್ ಆಗಿದೆ.
ಈ ಘಟನೆ ನಡೆದಿರೋದು ಗದಗದಲ್ಲಿ. ಮನೆಯ ಅಂಗಳದಲ್ಲಿ ಗ್ರಹಣದ ಬಗ್ಗೆ ಚರ್ಚೆಯಾಗುತ್ತಿತ್ತು. ಅದನ್ನು ಶ್ವಾನ ಗಮನಿಸಿದೆ. ಈ ಚರ್ಚೆಯ ವೇಳೆ ಮನೆಯಲ್ಲಿನ ನೀರಿನ ಪಾತ್ರೆಗೆ ಗರಿಕೆ ತಂದು ಹಾಕಿದರೆ ಯಾವುದೇ ದೋಷ ಬರುವುದಿಲ್ಲ ಎಂಬ ಮಾತಿನ ಚರ್ಚೆ ನಡೆದಿತ್ತು.
ಆಗ ಒಬ್ಬರು ಮನೆಗೆ ಗರಿಕೆ ತರುವಾಗ ಕೆಳಕ್ಕೆ ಬಿದ್ದಿದೆ. ಆ ಗರಿಕೆಯನ್ನು ನಾಯಿಯೊಂದು ಓಡಿ ಬಂದು ಎತ್ತಿ ಕೊಂಡಿದೆ. ಅದನ್ನು ತಿಂದಿದೆ. ಜನ ನೀರಿಗೆ ಗರಿಕೆ ಹಾಕಿದರೆ , ಶ್ವಾನ ಹೊಟ್ಟೆಗೇ ಗರಿಕೆ ಹಾಕಿಕೊಂಡಿದೆ…!
ಶ್ವಾನ ಗಳು ಅನಾರೋಗ್ಯ ಕಾಡಿದಾಗ ಹುಲ್ಲು ತಿನ್ನುತ್ತವೆ. ಈ ನಾಯಿ ಏಕೆ ತಿಂತೋ ಗೊತ್ತಿಲ್ಲ. ಆದರೆ, ಗ್ರಹಣ ಸಂದರ್ಭದಲ್ಲಿ ಸೆರೆ ಸಿಕ್ಕ ಗರಿಕೆ ತಿಂದ ನಾಯಿಯ ವೀಡಿಯೋ ವೈರಲ್ ಆಗಿದೆ.