ಮಕ್ಕಳ ಸಮಗ್ರ ಕಲಿಕಾ ಪ್ರಕ್ರಿಯೆಯ ಬದಲಾವಣೆ ಮತ್ತು ಪರಿಪೂರ್ಣ ಮಾಂಟೇಸರಿ ಶಿಕ್ಷಣದ ಅನುಭವನೀಡುವ ಗುರಿಯಿಟ್ಟುಕೊಂಡ ಗೀತಾ ಬಫ್ನಾ 2015ರಲ್ಲಿ ಬೆಂಗಳೂರಿನಲ್ಲಿ ವಿಸ್ಕೂಲ್ ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ಚೆನ್ನೈನಲ್ಲಿ ವಾಣಿಜ್ಯ ಪದವಿ ಪಡೆದಿರುವ ಗೀತಾ ಭಾರತೀಯ ಮಾಂಟೇಸರಿತ ರಬೇತಿಕೇಂದ್ರದಲ್ಲಿ ಮಾಂಟೇಸರಿ ಶೈಕ್ಷಣಿಕ ವಿಧಾನಗಳಲ್ಲಿ ಪ್ರಾಥಮಿಕತರಬೇತಿ ಪಡೆದು ಮಕ್ಕಳ ಭವಿಷ್ಯರೂಪಿಸಲು ಹೊಸ ಮಾರ್ಗ ರೂಪಿಸಿದ್ದಾರೆ. ರಾಜಧಾನಿಯ ಶಿಷ್ಯ ನರ್ಸರಿಯಲ್ಲಿ ಔದ್ಯೋಗಿಕಜೀವನ ಪ್ರವೇಶಿಸಿ, ಉತ್ತಮ ವೇತನತಂದಿಕೊಡುತ್ತಿದ್ದ ಉದ್ಯೋಗ ಬಿಟ್ಟು ಮಕ್ಕಳ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಪ್ರಪಂಚವನ್ನೇ ತಮ್ಮಜೀವನ ಎಂದುಕೊಂಡು ಕೆಲಸ ಮಾಡುತ್ತಿದ್ದಾರೆ.
ಮಕ್ಕಳ ಬಗ್ಗೆ ಹೆಚ್ಚಿನಆಕರ್ಷಣೆ ಹೊಂದಿದ್ದ ಬಫ್ನಾ ತಮ್ಮ ತಂದೆಯಿಂದಉತ್ತಮ ಪಾಠಗಳನ್ನು ಕಲಿತುತಮ್ಮ ಪಥ ಬದಲಿಸಿ ಮಕ್ಕಳಿಗಾಗಿ ವಿಸ್ಕೂಲ್ ಎಂಬ ಮಾಂಟೇಸರಿ ಶಾಲೆ ಪ್ರಾರಂಭಿಸಿದರು. ಅಭ್ಯಾಸದ ಮೂಲಕ ಕಲಿಕೆಯಿಂದ ಮಕ್ಕಳ ಜೀವನ ಸುಂದರಗೊಳಿಸುವುದು ಮತ್ತುಬಾಲ್ಯದಲ್ಲಿಯೇ ಬಲಿಷ್ಠ ಅಡಿಪಾಯ ಹಾಕಲು ಸಾಧ್ಯವಾಗುತ್ತದೆ ಎಂದು ನಂಬಿದ್ದರು. ಮಾಂಟೇಸರಿ ನಿರ್ಮಿಸಿದ ಗೀತಾ ಮಕ್ಕಳಿಗೆ ಅತ್ಯುನ್ನತಅನುಭವ ಹಾಗೂ ಆರೋಗ್ಯಯುತ ಬಾಲ್ಯ ಮತ್ತುಅವರ ವರ್ತನೆ ಮತ್ತುಜೀವನದಗುಣಮಟ್ಟದ ಹೆಚ್ಚಳ ಮಡುವುದು ಸೇರಿ ಮಕ್ಕಳಲ್ಲಿನ ಸೃಜನಾತ್ಮಕತೆ ಹೆಚ್ಚಿಸುತ್ತಾಅವರಲ್ಲಿನಆತ್ಮವಿಶ್ವಾಸದ ಪ್ರಗತಿಗೆ ಶ್ರಮಿಸುತ್ತಿದ್ದಾರೆ.
ಅವಿನಾಶ ವಗರನಾಳ