ಇತ್ತಿಷೆಗಷ್ಟೇ ಬಾಂಗ್ಲಾದೇಶದಲ್ಲಿ ಉಗ್ರರ ದಾಳಿಯ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ದುರಂತ ಜರ್ಮನಿಯಲ್ಲಿ ನಡೆದಿದೆ. ಜರ್ಮನಿಯ ಮ್ಯೂನಿಚ್ ನಗರದ ಮಾಲ್ ಒಂದಕ್ಕೆ ಏಕಾಏಕಿ ದಾಳಿ ನಡೆಸಿದ ಬಂಧೂಕುದಾರಿ ಉಗ್ರನೊಬ್ಬ ಮನ ಬಂದಂತೆ ಗುಂಡು ಹಾರಿಸಿದ ಪರಿಣಾಮ 9 ಮಂದಿ ಸಾರ್ವಜನಿಕರು ಸಾವನ್ನಪ್ಪಿದ್ದಾರೆ. ನಂತರ ತಾನೂ ಗುಂಡು ಹಾರಿಸಿಕೊಂಡು ಮೃತ ಪಟ್ಟಿದ್ದಾನೆ ಎನ್ನಲಾಗಿದೆ.
ಸಿಟಿ ಒಲಂಪಿಕ್ ಪಾರ್ಕ್‍ಗೆ ಸ್ಥಳೀಯ ಕಾಲಮಾನ 5:50ರ ಸುಮಾರಿಗೆ ಶಂಕಿತ ಉಗ್ರನೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ 9 ಮಂದಿ ಮೃತಪಟ್ಟಿದ್ದು ಪೊಲೀಸರೂ ಸೇರಿದಂತೆ 10 ಕ್ಕೂ ಹೆಚ್ಚು ಮಂದಿ ಗಂಭಿರವಾಗಿ ಗಾಯಗೊಂಡಿದ್ದಾರೆ.
ಮಾಲ್‍ನಲ್ಲಿ ಉಗ್ರನೊಬ್ಬ ದಾಳಿ ಮಾಡುತ್ತಿರುವುದಾಗಿ ವಿಷಯ ತಿಳಿದ ಪೊಲೀಸರು ಮಾಲ್‍ನ್ನು ಸುತ್ತುವರೆದು ಕಾರ್ಯಾಚರಣೆ ನಡೆಸಿದ್ದಾರೆ.
ಮತ್ತೊಂದೆಡೆ ಒಲಂಪಿಕ್ ಮಾಲ್ ಸಮೀಪವಿರುವ ಮೆಟ್ರೋ ರೈಲು ನಿಲ್ದಾಣದಲ್ಲೂ ಗುಂಡಿನ ಸದ್ದು ಕಂಡುಬಂದಿದ್ದು ಅಲ್ಲೂ ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದೆ.
POPULAR STORIES :
ಟ್ವಿಟರ್‍ನಲ್ಲಿ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್..!
ನಮ್ಮ ದೇಶದ ಸೈನಿಕರಿಗೆ ತರಬೇತಿ ನೀಡುವ ಏಕೈಕ ಮಹಿಳೆ ಸೀಮಾ ರಾವ್-ನಮ್ಮ ದೇಶ ಕಂಡ ಅದ್ಭುತ ಮಹಿಳೆ
ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದೆಯೇ? ಅದರಿಂದ ಸ್ವಲ್ಪ ಎಚ್ಚರವಿರಲಿ.
ರಜನಿಕಾಂತ್ ಹಾಲಿವುಡ್ ಸೀಕ್ರೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ..!
ಸುಲ್ತಾನ ಸಿನಿಮಾ ಗಳಿಸಿದ ಒಟ್ಟು 500 ಕೋಟಿ ಆದಾಯದಲ್ಲಿ ಸಲ್ಮಾನ್‍ನ ಗಳಿಕೆ ಎಷ್ಟಿರಬಹುದು ???