Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ದರ ಎಷ್ಟಿದೆ ನೋಡಿ
ಚಿನ್ನ ಖರೀದಿ ಮಾಡಿಡಬೇಕು, ಒಡವೆ ಮಾಡಿಸಿಕೊಳ್ಳಬೇಕು ಎನ್ನುವವರು ದಿನ ಮುಂದೆ ತಳ್ಳಿದಷ್ಟು ಬಂಗಾರ ದುಬಾರಿಯಾಗಲಿದೆ. ಹೀಗಾಗಿ ಹೆಚ್ಚೋ, ಕಮ್ಮಿನೋ ಇನ್ನೂ ತಡ ಮಾಡದೇ ಚಿನ್ನವನ್ನು ಇಂದೇ ಖರೀದಿಸಿ. ಏಕೆಂದರೆ ಸದ್ಯಕ್ಕೆ ನಡೆಯುತ್ತಿರುವ ಬೆಲೆ ನೋಡಿದರೆ ಬೆಲೆ ಎಲ್ಲಿಗೆ ಹೋಗಿ ತಲುಪುತ್ತೋ ಗೊತ್ತಿಲ್ಲ.
ಚಿನ್ನ ಬರೀ ಅಲಂಕಾರಕ್ಕಾಗಿ ಅಲ್ಲ, ಇದು ಆಪತ್ಕಾಲದ ಬಂಧುವಾಗಿ ಜನರ ಜೀವನದಲ್ಲಿ ಮುಖ್ಯವಾಗಿದೆ. ಯಾವುದೇ ಹಣದ ಸಮಸ್ಯೆ ಬಂದರೂ ಚಿನ್ನ ಅಡವಿಟ್ಟು, ಮಾರಿಯಾದರೂ ಹಣ ಪಡೆದುಕೊಳ್ಳಬಹುದು ನಮ್ಮೆಲ್ಲರ ಉದ್ದೇಶ. ಅದಕ್ಕಾಗಿ ಚಿನ್ನ ಪ್ರಮುಖ ಲೋಹವಾಗಿ ಗುರುತಿಸಿಕೊಳ್ಳುತ್ತಿದೆ.
ದೇಶೀಯ ಮಾರುಕಟ್ಟೆಯಲ್ಲಿ ಬುಧವಾರ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 11,864 ರೂಪಾಯಿ ಆಗಿದ್ದು,ಇಂದು ಬರೋಬ್ಬರಿ 120 ರೂಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 110 ರೂಪಾಯಿ ಹೆಚ್ಚಳ ಆಗಿದ್ದು, 10,875 ರುಪಾಯಿಗೆ ಏರಿಕೆ ಆಗಿದೆ.
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 1200 ರೂಪಾಯಿ ಹೆಚ್ಚಳ ಆಗಿ, 1,18,640 ರುಪಾಯಿಗೆ ಹೆಚ್ಚಳ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1100 ರೂ ಹೆಚ್ಚಳ ಆಗಿ, 1,08,750 ರೂಪಾಯಿಗೆ ಏರಿಕೆ ಆಗಿದೆ.ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 11,864 ರೂ ಇದೆ. ಬೆಳ್ಳಿಯ ಬೆಲೆ ಇಂದು ತಟಸ್ಥವಾಗಿದ್ದು, ಗ್ರಾಂ ಬೆಲೆ 151 ರೂ ಆಗಿದ್ದು, ಕೆಜಿ ಬೆಲೆ 1,51,000 ರೂ ಆಗಿದೆ.