ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ನೋಟ್ ಬ್ಯಾನ್ ಘೋಷಣೆ ಪರಿಣಾಮವಾಗಿ 10 ಗ್ರಾಂ ಚಿನ್ನದ ಬೆಲೆ 3170ರೂ ಇಳಿಕೆ ಕಂಡಿದೆ. ಈ ಹಿಂದೆ ಆರ್ಥಿಕ ವಿಶ್ಲೇಷಕರು ಹಾಗೂ ವ್ಯಾಪಾರಿಗಳೂ ಕೂಡ ಚಿನ್ನದ ಬೆಲೆ ಇಳಿಕೆಯಾಗಲಿದೆ ಎಂದು ಹೇಳಿದ್ದರು. ಇನ್ನು ಮುಂದಿನ ದಿನಗಳಲ್ಲಿ ನೋಟಿನ ಸಮಸ್ಯೆ ನಿವಾರಣೆಯಾಗದೆ ಇದ್ದ ಪಕ್ಷದಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 26,000ರೂ ಆಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ನವೆಂಬರ್ 8ರಂದು ಪ್ರತಿ 10 ಗ್ರಾಂ ಚಿನ್ನಕ್ಕೆ 31,750ರೂ ಇದ್ದ ಬೆಲೆ ನೋಟ್ ಬ್ಯಾನ್ ಪರಿಣಾಮವಾಗಿ ಡಿಸೆಂಬರ್ 9ಕ್ಕೆ 28,580ರೂ.ಗೆ ಕುಸಿತ ಕಂಡಿದೆ. ಇನ್ನು ಮಾರುಕಟ್ಟೆಗಳಲ್ಲಿ ಹಣದ ವಹಿವಾಟು ತೀರಾ ಕಡಿಮೆಗೊಂಡಿರುವ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಚಿನ್ನದ ಬೇಡಿಕೆ ಕುಸಿಯಲಿದೆ ಎಂದು ತಿಳಿದು ಬಂದಿದೆ. ಜನರ ಬಳಿ ಹಣ ಇಲ್ಲದಿದ್ದಾಗ ಸರಕುಗಳ ಬೇಡಿಕೆ ಹೆಚ್ಚಾಗುವುದಾದರೂ ಹೇಗೆ..? ಬೇಡಿಕೆ ಇಲ್ಲದಿದ್ದಾಗ ಸಹಜವಾಗಿಯೇ ಚಿನ್ನದ ಬೆಲೆ ಕುಸಿತ ಕಾಣಲಿದೆ ಎಂದು ಜ್ಯುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ತರುಣ್ ಅಭಿಪ್ರಾಯವಾಗಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!
ಕುಡುಕರಿಗೆ ಶಾಕ್ ಕೊಟ್ಟ ಸುಪ್ರೀಂ: ದೇಶದ ಎಲ್ಲಾ ಹೆದ್ದಾರಿಗಳಲ್ಲಿನ ಬಾರ್, ವೈನ್ ಶಾಪ್ ಬಂದ್…!
ಶಾಕಿಂಗ್ ವೀಡಿಯೋ: ಬಟ್ಟೆ ಅಂಗಡಿಯಲ್ಲಿ ಬ್ಲಾಸ್ಟ್ ಆಯ್ತು ಜೇಬಲಿದ್ದ ಮೊಬೈಲ್..!
ಮತ್ತೆ ಆಸ್ಕರ್ ರೇಸ್‍ನಲ್ಲಿ ಎ.ಆರ್ ರೆಹಮಾನ್..!