Gold Rate Today: ಗೋಲ್ಡ್ ಪ್ರಿಯರಿಗೆ ಬಿಗ್‌ಶಾಕ್! ಮತ್ತೆ ಏರಿದ ಚಿನ್ನದ ಬೆಲೆ! ಹೀಗಿದೆ ಇಂದಿನ ಬಂಗಾರ-ಬೆಳ್ಳಿ ದರ

Date:

Gold Rate Today: ಗೋಲ್ಡ್ ಪ್ರಿಯರಿಗೆ ಬಿಗ್‌ಶಾಕ್! ಮತ್ತೆ ಏರಿದ ಚಿನ್ನದ ಬೆಲೆ! ಹೀಗಿದೆ ಇಂದಿನ ಬಂಗಾರ-ಬೆಳ್ಳಿ ದರ

ಬೆಂಗಳೂರು: ಮೊದಲೆಲ್ಲಾ ಚಿನ್ನ ಖರೀದಿಯಲ್ಲವೇ ಬೇಕಾದಾಗ ಮಾಡಿಸಿದರಾಯಿತು ಎಂದು ಮುಂದೂಡುತ್ತಿದ್ದರು ಆದರೀಗ ಚಿನ್ನದ ಬೆಲೆ ಇಳಿಕೆಯಾದೊಡನೆ ಗ್ರಾಹಕರು ನಾ ಮುಂದು ತಾ ಮುಂದು ಚಿನ್ನ ಖರೀದಿಸಲು ಮುಂದಾಗುತ್ತಿದ್ದಾರೆ. ಒಮ್ಮೊಮ್ಮೆ ಚಿನ್ನದ ಬೆಲೆ ಗಗನಕ್ಕೇರಿದ್ದರೆ ಇನ್ನು ಕೆಲವೊಮ್ಮೆ ಕೆಳಮಟ್ಟಕ್ಕೆ ಇಳಿಯುತ್ತದೆ ಹೀಗಾಗಿ ಜನ ಹುಷಾರಾಗಿ ಬೆಲೆ ಇಳಿದಾಗಲೇ ಚಿನ್ನ ಕೊಂಡು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ.
ಚಿನ್ನ ಖರೀದಿಗೆ ವಿಶೇಷ ದಿನ ಬೇಕಾಗಿಲ್ಲ ಏಕೆಂದರೆ ಬಂಗಾರದ ಮಹತ್ವ ಅಂತಹದ್ದಾಗಿದೆ. ಬಂಗಾರವಿದ್ದರೆ ಆಪತ್ತಿಗೆ ಆದೀತು ಎಂದು ಚಿನ್ನಕ್ಕೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಚಿನ್ನದ ಸ್ಕೀಮ್‌ಗೆ ಸೇರಿಕೊಂಡು ತಿಂಗಳಿಗೆ ಇಷ್ಟಿಷ್ಟು ದುಡ್ಡು ಹಾಕಿ ಚಿನ್ನ ಖರೀದಿಸಿ ಎತ್ತಿಟ್ಟುಕೊಳ್ಳುತ್ತಿದ್ದಾರೆ. ಚಿನ್ನ ಖರೀದಿಗೂ ಮುನ್ನ ಒಮ್ಮೆ ಬೆಲೆಯ ಬಗ್ಗೆ ತಿಳಿದುಕೊಳ್ಳೋಣ.
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಂದು ಬರೋಬ್ಬರಿ 220 ರೂಪಾಯಿ ಏರಿಕೆ ಆಗಿದೆ. ಇಂದಿನ ಚಿನ್ನದ ದರ 22 ಕ್ಯಾರೆಟ್ 1 ಗ್ರಾಂ ಗೆ 8,930 ರೂ ಆಗಿದೆ, 24 ಕ್ಯಾರೆಟ್ 1 ಗ್ರಾಂ ಬೆಲೆ ಕೂಡಾ 240 ರೂ ಏರಿಕೆ ಆಗಿ, 9,742 ರೂ ಗೆ ಇಳಿದಿದೆ.
22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ ಇಂದು 2200 ರೂ ಹೆಚ್ಚಳ ಆಗಿದೆ. ಇಂದಿನ ಬೆಲೆ 89,300 ರೂ ಆಗಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 2,400 ರೂ ಹೆಚ್ಚಳ ಆಗಿ, ಇಂದಿನ ಬೆಲೆ 97,420 ರೂ ಆಗಿದೆ. ಬೆಂಗಳೂರಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 8,930 ರೂ ಇದೆ. ಬೆಳ್ಳಿಯ ಬೆಲೆ 3 ರೂ ಹೆಚ್ಚಳ ಆಗಿದೆ. ಕೆಜಿ ಬೆಳ್ಳಿ ಬೆಲೆ 1,00,000 ರೂ ಇದೆ.
ಉಕ್ರೇನ್-ರಷ್ಯಾ ಯುದ್ಧ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ, ಇಸ್ರೇಲ್-ಹಮಾಸ್ ಸಂಘರ್ಷ ಮೊದಲಾದವುಗಳಿಂದ ಅನಿಶ್ಚಿತತೆ ಉಂಟಾಗಿದೆ. ಇದರಿಂದ ಸುರಕ್ಷಿತ ಹೂಡಿಕೆಯ ರೂಪದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿದೆ.

Share post:

Subscribe

spot_imgspot_img

Popular

More like this
Related

ನವರಾತ್ರಿ ಒಂಬತ್ತನೇ ದಿನದ ಪೂಜೆ – ಸಿದ್ಧಿದಾತ್ರಿಯ ಆರಾಧನೆ !

ನವರಾತ್ರಿ ಒಂಬತ್ತನೇ ದಿನದ ಪೂಜೆ – ಸಿದ್ಧಿದಾತ್ರಿಯ ಆರಾಧನೆ ! ಒಂಬತ್ತನೇ ದಿನ...

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ!

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ! ಹೃದಯಾಘಾತದಿಂದ ಹಿರಿಯ ರಂಗಭೂಮಿ...

ಕರ್ನಾಟಕದಲ್ಲಿ 6 ದಿನಗಳ ಭಾರೀ ಮಳೆಯ ಮುನ್ಸೂಚನೆ: ಕರಾವಳಿಯಲ್ಲಿ ಗಾಳಿ, ಮಳೆ ಅಬ್ಬರ

ಕರ್ನಾಟಕದಲ್ಲಿ 6 ದಿನಗಳ ಭಾರೀ ಮಳೆಯ ಮುನ್ಸೂಚನೆ: ಕರಾವಳಿಯಲ್ಲಿ ಗಾಳಿ, ಮಳೆ...

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..?

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..? ದಸರಾ,...