Gold, Silver Price: ಶುಭ ಶುಕ್ರವಾರ ಚಿನ್ನ, ಬೆಳ್ಳಿ ಬೆಲೆ ಕೊಂಚ ಇಳಿಕೆ..! ಇಂದಿನ ಬೆಲೆ ಗಮನಿಸಿ
ಚಿನ್ನ ಭಾರತದಲ್ಲಿ ಕೇವಲ ಆಭರಣವಾಗಿರದೇ ಹೂಡಿಕೆಯಾಗಿ, ಉಳಿತಾಯವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಜನ ನಮ್ಮ ಉಳಿತಾಯದ ಹಣದಲ್ಲಿ ಬಂಗಾರ ಖರೀದಿ ಮಾಡಲು ಬಯಸುತ್ತಾರೆ. ಹಣ ಕೂಡಿಟ್ಟರೆ ಖರ್ಚಾಗುತ್ತದೆ, ಅದೇ ಚಿನ್ನ ಮಾಡಿಸಿಕೊಂಡರೆ ಯಾವತ್ತಾದರೂ ನಮ್ಮ ಕಷ್ಟಕಾಲಕ್ಕೆ ಬರುತ್ತದೆ ಎಂಬುವುದೇ ಕಾರಣ. ಚಿನ್ನ ಈಗ ಕೇವಲ ವೈಯಕ್ತಿಕ ಸಂಪತ್ತಾಗಿರುವುದಲ್ಲದೆ ದೇಶಗಳ ಆರ್ಥಿಕ ಬಲಕ್ಕೂ ಇಂಬು ನೀಡುತ್ತಿದೆ.
ಚಿನ್ನದ ದರ ಕಳೆದರಡು ದಿನದಲ್ಲಿ 3 ಸಾವಿರ ಹೆಚ್ಚಳವಾಗಿದ್ದು, ಇಂದು ದಿಢೀರ್ ಇಳಿಕೆಯಾಗಿದೆ. 24 ಕ್ಯಾರೆಂಟ್ ಬೆಲೆಯಲ್ಲಿ 380 ರೂಪಾಯಿ ಕಡಿಮೆ ಆಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಂದು ಬರೋಬ್ಬರಿ 38 ರೂಪಾಯಿ ಏರಿಕೆ ಆಗಿದೆ. ಇಂದಿನ ಚಿನ್ನದ ದರ 24 ಕ್ಯಾರೆಟ್ 1 ಗ್ರಾಂ ಗೆ 9,753 ರೂ ಆಗಿದೆ, 22 ಕ್ಯಾರೆಟ್ 1 ಗ್ರಾಂ ಬೆಲೆ ಕೂಡಾ 35 ರೂ ಕಡಿಮೆ ಆಗಿ, 8940 ರೂ ಗೆ ಇಳಿದಿದೆ.
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ ಇಂದು 380 ರೂ ಕಡಿಮೆ ಆಗಿದೆ. ಇಂದಿನ ಬೆಲೆ 97,530 ರೂ ಆಗಿದೆ. 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 350 ರೂ ಕಡಿಮೆ ಆಗಿ, ಇಂದಿನ ಬೆಲೆ 89,400 ರೂ ಆಗಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 9753 ರೂ ಇದೆ. ಬೆಳ್ಳಿಯ ಬೆಲೆ ಕೂಡಾ 1 ರೂ ಕಡಿಮೆ ಆಗಿ, ಕೆಜಿ ಬೆಳ್ಳಿ ಬೆಲೆ 1,00,000 ರೂ ಇದೆ.