ಕನ್ನಡ ಬಿಗ್ ಬಾಸ್ ಸೀಸನ್ 3ರ ಸ್ಪರ್ಧಿ ನಟಿ ಗೌತಮಿ ಗೌಡ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ.ಇದೇ ತಿಂಗಳು 19ರಂದು ಗೌತಮಿ ಬಹುಕಾಲದ ಗೆಳೆಯ ಜಾರ್ಜ್ ಕ್ರಿಸ್ಟ್ ಅವರೊಂದಿಗೆ ವಿವಾಹವಾಗುತ್ತಿದ್ದಾರೆ.
ಕೆಲವು ವರ್ಷಗಳಿಂದ ಗೌತಮಿ ಮತ್ತು ಜಾರ್ಜ್ ಕ್ರಿಸ್ಟ್ ಪರಸ್ಪರ ಪ್ರೀತಿಸುತ್ತಿದ್ದಾರೆ. ಇವರ ಪ್ರೀತಿಗೆ ಎರಡೂ ಕುಟುಂಬದವರು ಸಹ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿವಾಹ ನಡೆಯಲಿದೆ. ಸಿನಿಮಾ ಮತ್ತು ಕಿರುತೆರೆಯ ಗಣ್ಯರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಖಾಸಗಿ ವಾಹಿನಿ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟವರು ಗೌತಮಿ. ಬಳಿಕ ಬಿಗ್ ಬಾಸ್ ಗೂ ಹೋಗಿ ಮನೆಮಾತಾಗಿದ್ದರು. ಕಿರುತೆರೆ ಮಾತ್ರವಲ್ಲದೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಅಂಬರೀಶ್, ಸುದೀಪ್ ಅಭಿನಯದ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದಲ್ಲಿ ಗೌತಮಿ ಸಹ ನಟಿಸಿದ್ದಾರೆ.