ಇಲಿಗಳನ್ನು ಹಿಡಿದುಕೊಟ್ಟವರಿಗೆ ಇಪ್ಪತ್ತು ಸಾವಿರ ಬಹುಮಾನ..!

Date:

ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ.. ಇಲ್ಲಿ ನಾವು ತಿಳಿಸಿರೋ ವಿಷಯ ಮಾತ್ರ ಅಪ್ಪಟ ಸತ್ಯ.. ಸಾಮಾನ್ಯವಾಗಿ ಸರ್ಕಾರ ಅಥವಾ ಪೊಲೀಸ್ ಅಧಿಕಾರಿಗಳು ಕಳ್ಳರನ್ನ ಹಿಡ್ಕೊಟ್ರೆ ನಿಮ್ಗೆ ಸೂಕ್ತ ಬಹುಮಾನ ಇದೆ.. ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್ ನ ಹಿಡ್ಕೊಟ್ರೆ ಇಷ್ಟು ಲಕ್ಷ ಬಹುಮಾನ ಹಾಗೂ ಸನ್ಮಾನ ಇದೆ ಅಂತ ಹೇಳಿದ್ದು ಇದೆ, ಅದನ್ನ ನೀವೆಲ್ಲಾ ಕೇಳಿದ್ದೂ ಇದೆ.. ಆದ್ರೆ ಇಲಿಗಳನ್ನ ಹಿಡ್ಕೊಟ್ರೆ ಬಹುಮಾನ ಕೊಡ್ತೇವೆ ಅನ್ನೋದ್ನ ನೀವೆಲ್ಲಾದ್ರೂ ಕೇಳಿದೀರಾ..? ಹಾಗಾದ್ರೆ ಈ ಸ್ಟೋರಿ ಓದ್ಲೇ ಬೇಕು ನೀವು.. ಜಕರ್ತಾ ದೇಶದ ಸರ್ಕಾರಕ್ಕೆ ಬಹುದೊಡ್ಡ ತಲೆಬಿಸಿಯಾಗಿರೋದು ಇಲಿಗಳು.. ರಾಷ್ಟ್ರ ರಾಜಧಾನಿಗಳಲ್ಲಿನ ಜನಸಂಖ್ಯೆಗಿಂತ ಹೆಚ್ಚಾಗಿ ಇಲಿಗಳ ಹಾವಳಿ ಜಾಸ್ತಿ ಆಗ್ಬಿಟ್ಟಿದ್ಯಂತೆ..! ಈ ಇಲಿಗಳ ಕಾಟದಿಂದ ಅವುಗಳು ನೀಡುವ ತೊಂದರೆಗೆ ಬೇಸತ್ತ ಸರ್ಕಾರ ಒಂದು ಧೃಡ ನೀರ್ಧಾರ ತೆಗೆದ್ಕೊಂಡಿದೆ. ಅಷ್ಟೇ ಅಲ್ಲ ಈ ಇಲಿಗಳಿಂದ ಮಕ್ಕಳು ಹಿರಿಯರು ಸೇರಿದಂತೆ ಪ್ರತಿಯೊಬ್ಬರಿಗೂ ರೋಗ ರುಜಿನಗಳು ಆವರಿಸಿದೆ ಎನ್ನಲಾಗ್ತಾ ಇದೆ. ಹೀಗಾಗಿ ಅಲ್ಲಿನ ಸರ್ಕಾರ ಜನರಿಗೆ ಬಹುದೊಡ್ಡ ಆಫರ್ ನೀಡಿದೆ.. ಪ್ರತಿಯೊಂದು ಇಲಿಗಳಿಗೆ ಇಂತಿಷ್ಟು ಹಣ ಎಂದು ನಿಗಧಿ ಮಾಡಲಾಗಿದೆ..!

1477020020548-600x337

ಇದಕ್ಕಾಗಿಯೇ ರ್ಯಾಟ್ ಎಕ್ಸ್ ಟರ್ಮಿನೇಷನ್ ಕ್ಯಾಂಪೇನ್‍ನ್ನು ತೆರೆದಿರುವ ಜಕರ್ತಾದ ವೈಸ್ ಗವರ್ನರ್ ಡಿ.ಜಾರೋಟ್ ಹಿದಯಾತ್ ಅವರು ಸಾರ್ವಜನಿಕರು ಪ್ರತಿಯೊಂದು ಇಲಿಗಳ ಶವವನ್ನು ತಂದಿದ್ದೇ ಆದಲ್ಲಿ 20,000 ಇಂಡೋನೇಷಿಯಾ ರುಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಅಲ್ಲಿನ ಜನರು ಬೇರೆ ಕೆಲಸ ಕಾರ್ಯಕ್ಕೆ ಹೋಗದೇ ಇಲಿ ಹಿಡಿಯುವುದರಲ್ಲಿ ಮಗ್ನರಾಗಿದ್ದಾರೆ.. ಜಕರ್ತಾದಲ್ಲಿ ಇಲಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇರೋದ್ರಿಂದ.. ಅಲ್ಲದೇ ಇವುಗಳಿಂದ ರೋಗಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಅಲ್ಲಿನ ಸರ್ಕಾರ ಮುಂದಾಗಿದೆಯಷ್ಟೆ. ಆದ್ರೆ ಈ ರೀತಿಯ ಘಟನೆಗಳು ನಡಿತಿರೋದು ಇದೇ ಮೊದಲೇನಲ್ಲ. 90ರ ದಶಕದಲ್ಲಿ ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ವಿಷಕಾರಿ ಹಾವಿನ ಸಂಖ್ಯೆ ಹೆಚ್ಚಾಗಿದ್ದ ಸಮಯದಲ್ಲಿ ಸರ್ಕಾರ ಜನರಿಗೆ ಒಂದು ಆಫರ್ ನೀಡಿತ್ತು. ಹಾವುಗಳ ಇಷ್ಟವಾದ ಆಹಾರ ಇಲಿಯನ್ನು ಹಿಡಿದು ತಂದರೆ ಬಹುಮಾನ ನೀಡುವುದಾಗಿ ಹೇಳಿತ್ತು. ಸತ್ತ ಇಲಿಗಳ ಮೂಲಕ ವಿಷಕಾರಿ ಹಾವುಗಳನ್ನು ಸೆರೆ ಹಿಡಿಯುವುದು ಅಂದಿನ ಸರ್ಕಾರದ ಪ್ಲಾನ್..

Like us on Facebook  The New India Times

POPULAR  STORIES :

ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!

ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video

ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ

ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?

ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...